ಭಾನುವಾರ, ಏಪ್ರಿಲ್ 2, 2023
32 °C

ಬಾಡಿಗೆ ಕಟ್ಟದ ಮಸ್ಕ್: ಸಿಂಗಪುರದ ಟ್ವಿಟರ್ ಕಚೇರಿಯಿಂದ ನೌಕರರು ಹೊರಕ್ಕೆ- ವರದಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಎಲಾನ್ ಮಸ್ಕ್ ಬಾಡಿಗೆ ಕಟ್ಟದ ಹಿನ್ನೆಲೆಯಲ್ಲಿ ಸಿಂಗಪುರ ಕಚೇರಿಯಿಂದ ಉದ್ಯೋಗಿಗಳನ್ನು ಹೊರ ಹಾಕಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆ ವರದಿ ಮಾಡಿದೆ.

ವೆಚ್ಚ ಕಡಿತದ ಹೆಸರಲ್ಲಿ ಕಚೇರಿಯಲ್ಲಿ ಶೌಚಾಲಯ ಸ್ವಚ್ಛಗೊಳಿಸಲು ಸೂಕ್ತ ವ್ಯವಸ್ಥೆ ಕಲ್ಪಿಸದ್ದರಿಂದ ದುರ್ನಾತ ಬೀರುವ ಶೌಚಾಲಯ, ಟಾಯ್ಕೆಟ್ ಪೇಪರ್ ಕೊರತೆ ಮುಂತಾದ ಹಿಂಸೆಯನ್ನು ನೌಕರರು ಅನುಭವಿಸಿದ್ದರು. ಇದೀಗ, ಕಚೇರಿಯಿಂದಲೇ ಹೊರದೂಡಲ್ಪಟ್ಟಿದ್ದಾರೆ.

ಕಟ್ಟಡದ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಏಷ್ಯಾ–ಪೆಸಿಫಿಕ್‌ನ ಟ್ವಿಟರ್ ಕೇಂದ್ರ ಕಚೇರಿಯಾಗಿರುವ ಸಿಂಗಪುರದ ಕಚೇರಿಯಿಂದ ಈಗ ತಾನೆ ನೌಕರರನ್ನು ಕಟ್ಟಡದ ಮಾಲೀಕರು ಹೊರಗೆ ಕಳುಹಿಸಿದ್ದಾರೆ ಎಂದು ಉನ್ನತ ತಂತ್ರಜ್ಞಾನ ವಿಶ್ಲೇಷಕ ಕೆಸೆಯ್ ನ್ಯೂಟನ್ ವರದಿ ಮಾಡಿದ್ದಾರೆ.

ಜಾಗತಿಕವಾಗಿ ವಿವಿಧೆಡೆ ಕಚೇರಿ ಹೊಂದಿರುವ ಟ್ವಿಟರ್, ಕಟ್ಟಡ ಬಾಡಿಗೆ ಪಾವತಿಸಿಲ್ಲ ಎಂದು ಕೆಲ ವರದಿಗಳು ಈಗಾಗಲೇ ಬಹಿರಂಗಪಡಿಸಿದ್ದವು. ಸ್ಯಾನ್ ಫ್ರಾನ್ಸಿಸ್ಕೊ ಕಚೇರಿಯ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಟ್ವಿಟರ್ ವಿರುದ್ಧ ಈ ಹಿಂದೆ ದಾವೆ ಹೂಡಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು