ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ ಸೇವೆಯಲ್ಲಿ ವಿಶ್ವದಾದ್ಯಂತ ಕೆಲಕಾಲ ವ್ಯತ್ಯಯ

Last Updated 14 ಜುಲೈ 2022, 14:17 IST
ಅಕ್ಷರ ಗಾತ್ರ

ನವದೆಹಲಿ: 33 ಕೋಟಿಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಟ್ವಿಟರ್ ಸೇವೆಯಲ್ಲಿ ಗುರುವಾರ ವಿಶ್ವದಾದ್ಯಂತ ಕೆಲಕಾಲ ವ್ಯತ್ಯಯ ಉಂಟಾಗಿತ್ತು. ಕೆಲ ಸಮಯದಲ್ಲೇ ಸಮಸ್ಯೆ ಸರಿಯಾಗಿದೆ ಎಂದು ‘ವೆಬ್‌ಸೈಟ್ ಡೌನ್‌ಡಿಟೆಕ್ಟರ್’ ತಿಳಿಸಿದೆ.

ಸಂಜೆ 4.45ರಿಂದ 5 ಗಂಟೆ ನಡುವಿನ ಅವಧಿಯಲ್ಲಿ ಟ್ವಿಟರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ವೆಬ್‌ಸೈಟ್‌ ಹಾಗೂ ಸೇವೆಗಳ ಸ್ಥಿತಿಯ ಕುರಿತು ಮಾಹಿತಿ ನೀಡುವ 'ಡೌನ್ ಡಿಟೆಕ್ಟರ್' ಹೇಳಿದೆ.

ಸೇವೆಯಲ್ಲಿನ ಜಾಗತಿಕ ವ್ಯತ್ಯಯದ ಕುರಿತು ಟ್ವಿಟರ್‌ ಈ ವರೆಗೆ ಪ್ರತಿಕ್ರಿಯೆ ನೀಡಿಲ್ಲ. ಡೌನ್‌ಡೆಕ್ಟರ್‌ನಲ್ಲಿ 54,000 ಕ್ಕೂ ಹೆಚ್ಚು ಮಂದಿ ಸಮಸ್ಯೆ ಕುರಿತು ವರದಿ ಮಾಡಿದ್ದಾರೆ.

ಜಗತ್ತಿನ ಶ್ರೀಮಂತ ಉದ್ಯಮಿ ಇಲಾನ್‌ ಮಸ್ಕ್ ಅವರೊಂದಿಗೆ ಟ್ವಿಟರ್‌ ಕಾನೂನಾತ್ಮಕ ಹೋರಾಟದಲ್ಲಿ ತೊಡಗಿದೆ. ಮಸ್ಕ್‌ ಟ್ವಿಟರ್‌ ಅನ್ನು 44 ಶತಕೋಟಿಗೆ ಡಾಲರ್‌ಗೆ ಖರೀದಿಸುವುದಾಗಿ ಏಪ್ರಿಲ್‌ನಲ್ಲಿ ಹೇಳಿದ್ದರು. ಆದರೆ ಕಳೆದ ವಾರ ಅವರು ಒಪ್ಪಂದದಿಂದ ದೂರಸರಿಯುತ್ತಿರುವುದಾಗಿ ಘೋಷಿಸಿದ್ದರು. ಒಪ್ಪಂದವನ್ನು ಪೂರ್ಣಗೊಳಿಸಲು ಟ್ವಿಟರ್ ಮಂಗಳವಾರ ಮಸ್ಕ್ ವಿರುದ್ಧ ಮೊಕದ್ದಮೆ ಹೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT