ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾನ್ ಮಸ್ಕ್‌ರ ಭಾರತೀಯ ಸ್ನೇಹಿತನ ಖಾತೆಯನ್ನೇ ರದ್ದು ಮಾಡಿದ ಟ್ವಿಟರ್

ಪುಣೆಯ 24 ವರ್ಷದ ಪ್ರಣಯ್‌ ಪಟೋಲೆ ಖಾತೆಗೆ ನಿರ್ಬಂಧ; ಬಳಿಕ ತೆರವು
Last Updated 4 ಡಿಸೆಂಬರ್ 2022, 4:32 IST
ಅಕ್ಷರ ಗಾತ್ರ

ನವದೆಹಲಿ: ಟ್ವಿಟರ್‌ನ ನೂತನ ಮಾಲೀಕ ಹಾಗೂ ಜಗತ್ತಿನ ನಂಬರ್‌ 1 ಶ್ರೀಮಂತ ಉದ್ಯಮಿ ಇಲಾನ್‌ ಮಸ್ಕ್‌ ಅವರ ಸ್ನೇಹಿತ, 24 ವರ್ಷದ ಭಾರತೀಯ ಐಟಿ ಉದ್ಯೋಗಿ ಪ್ರಣಯ್‌ ಪಟೋಲೆಯವರ ಖಾತೆಗೆ ಟ್ವಿಟರ್‌ ನಿರ್ಬಂಧ ಹೇರಿದೆ.

ಟ್ವಿಟರ್‌ ನಿಯಮಗಳನ್ನು ಮುರಿದಿದ್ದಕ್ಕಾಗಿ ಖಾತೆಯನ್ನು ಅಮಾನತು ಮಾಡಲಾಗಿದೆ.

ಡಿ. 1 ರಂದು ಪ್ರಣಯ್‌ ಖಾತೆಗೆ ಟ್ವಿಟರ್ ನಿರ್ಬಂಧ ವಿಧಿಸಿತ್ತು. ಬಳಿಕ ಇಲಾನ್‌ ಮಸ್ಕ್‌ ಅವರ ಮಧ್ಯ ಪ್ರವೇಶದಿಂದಾಗಿ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲಾಗಿದೆ ಎನ್ನಲಾಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌)ನಲ್ಲಿ ಸಾಫ್ಟ್‌ವೇರ್ ಡೆವಲಪರ್‌ ಆಗಿರುವ ಪಟೋಲೆ, ಇದೇ ವರ್ಷ ಆ‌ಗಸ್ಟ್‌ನಲ್ಲಿ ಅಮೆರಿಕದ ಟೆಕ್ಸಾಸ್‌ನಲ್ಲಿರುವ ಗಿಗಾ ಫ್ಯಾಕ್ಟರಿಯಲ್ಲಿ ಇಲಾನ್‌ ಮಸ್ಕ್‌ ಅವರನ್ನು ಭೇಟಿಯಾಗಿದ್ದರು.

ಮೂಲತಃ ಮಹಾರಾಷ್ಟ್ರದ ಪುಣೆಯವರಾಗಿರುವ ಪ್ರಣಯ್‌, 2018 ರಿಂದ ಟ್ವಿಟರ್‌ನಲ್ಲಿ ಮಸ್ಕ್‌ ಅವರ ಸ್ನೇಹಿತರಾಗಿದ್ದರು. ಅವರಿಬ್ಬರ ನಡುವೆ ಬಾಹ್ಯಾಕಾಶ, ಕಾರು ಮುಂತಾದ ವಿಷಯಗಳಲ್ಲಿ ಚರ್ಚೆ ನಡೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT