ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಯ್ತು #ಡಬ್ಬಿಂಗ್_ಇದು_ಕನ್ನಡಪರ

7
ಬನವಾಸಿ ಬಳಗದ ವತಿಯಿಂದ ಟ್ವಿಟರ್ ಅಭಿಯಾನ

ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಯ್ತು #ಡಬ್ಬಿಂಗ್_ಇದು_ಕನ್ನಡಪರ

Published:
Updated:

ಬೆಂಗಳೂರು: ಡಬ್ಬಿಂಗ್‌ ಕಾರ್ಯಕ್ರಮಗಳು ಮತ್ತು ಸಿನಿಮಾಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಬಾಕಿಯಿದ್ದು, ಕನ್ನಡದಲ್ಲಿ ಡಬ್ ಮಾಡಿದ ಚಿತ್ರ ಹಾಕಿ ಎಂಬುದಾಗಿ ಚಲನಚಿತ್ರ ವಿತರಕರನ್ನು ಕನ್ನಡಿಗರು ಒತ್ತಾಯಿಸಬೇಕಿದೆ ಎಂದು ಬನವಾಸಿ ಬಳಗ ಹೇಳಿದೆ.

ಈ ನಿಟ್ಟಿನಲ್ಲಿ, ಕನ್ನಡ ರಾಜ್ಯೋತ್ಸವದ ದಿನದಂದು ಬನವಾಸಿ ಬಳಗವು #ಡಬ್ಬಿಂಗ್_ಇದು_ಕನ್ನಡಪರ ಎಂಬ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದ್ದು, ಅದು ಟ್ರೆಂಡಿಂಗ್ ಆಗಿದೆ. ಅಭಿಯಾನ ಬೆಂಬಲಿಸಿ ಸಾವಿರಾರು ಮಂದಿ ಟ್ವೀಟ್ ಮಾಡಿದ್ದಾರೆ.

‘ಡಬ್ಬಿಂಗ್ ಬಾರದಂತೆ ತಡೆಯಲು ಕನ್ನಡ ಚಿತ್ರರಂಗ ಮತ್ತು ದೂರದರ್ಶನ ರಂಗದ ಕೆಲವರು ಹತೋಟಿಕೂಟದ ಹಾಗೆ ವರ್ತಿಸುತ್ತಾ ಇರುವುದನ್ನು ದೂರಿನ ಮೂಲಕ ಭಾರತೀಯ ಸ್ಪರ್ಧಾಆಯೋಗದ ಗಮನಕ್ಕೆ ತರಲಾಗಿತ್ತು. ಆಯೋಗವು ಸುದೀರ್ಘ ತನಿಖೆ ಮತ್ತು ವಿಚಾರಣೆಗಳ ಮೂಲಕ ಹಲವು ಸಂಸ್ಥೆಗಳನ್ನು ತಪ್ಪಿತಸ್ಥ ಎಂದು ದಂಡ ಹಾಕಿ, ಇನ್ನೆಂದೂ ಡಬ್ಬಿಂಗ್ ತಡೆಯುವ ಪ್ರಯತ್ನ ಮಾಡದಂತೆ ತೀರ್ಪು ನೀಡಿದೆ’ ಎಂದು ಬಳಗ ಹೇಳಿದೆ.

‘ದೂರದರ್ಶನ ವಾಹಿನಿಗಳಲ್ಲಿ ಡಬ್ ಮಾಡಲಾದ ಕಾರ್ಯಕ್ರಮಗಳ ಪ್ರಸಾರವನ್ನು ಒತ್ತಾಯಿಸಬೇಕಿದೆ. ಇನ್ನು ಮುಂದೆ ಕನ್ನಡಕ್ಕೆ ಡಬ್ ಮಾಡಿಯೇ ಬಿಡುಗಡೆ ಮಾಡುವಂತೆ ಎಲ್ಲಾ ಪರಭಾಷಾ ಚಿತ್ರ ವಿತರಕರನ್ನು, ಚಿತ್ರರಂಗವನ್ನು ಒತ್ತಾಯಿಸಬೇಕಿದೆ. ಇದಕ್ಕೆ ಯಾವ ತಡೆಯೂ ಇಲ್ಲ ಎನ್ನುವ ಸಂದೇಶ ನೀಡಲು ಹಾಗೂ ಕನ್ನಡಿಗರಲ್ಲಿ ಡಬ್ಬಿಂಗ್ ಎನ್ನುವುದು ಕನ್ನಡಪರ ಎನ್ನುವ ಅನಿಸಿಕೆ ಇದೆ ಎನ್ನುವುದನ್ನು ಸಾರಿ ಹೇಳಲು ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದೂ ಬಳಗ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 33

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !