ಟೀಂ ಇಂಡಿಯಾ ಫೋಟೊದಲ್ಲಿ ಅನುಷ್ಕಾ, ಅಸಮಧಾನ ವ್ಯಕ್ತಪಡಿಸಿದ ಟ್ವೀಟಿಗರು

7

ಟೀಂ ಇಂಡಿಯಾ ಫೋಟೊದಲ್ಲಿ ಅನುಷ್ಕಾ, ಅಸಮಧಾನ ವ್ಯಕ್ತಪಡಿಸಿದ ಟ್ವೀಟಿಗರು

Published:
Updated:

 ಲಂಡನ್: ಭಾರತೀಯ ಕ್ರಿಕೆಟ್ ತಂಡದ ಗ್ರೂಪ್ ಫೋಟೊದಲ್ಲಿ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ  ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದಕ್ಕೆ ಟ್ವೀಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.

ಇಂಗ್ಲೆಂಡ್  ಪ್ರವಾಸದಲ್ಲಿರುವ ಟೀಂ ಇಂಡಿಯಾ ಸದಸ್ಯರಿಗೆ ಇಂಡಿಯನ್ ಹೈಕಮಿಷನ್ ನೀಡಿದ ಸತ್ಕಾರ ಕೂಟದ ನಂತರ ತೆಗೆದ ಫೋಟೊ ಇದಾಗಿದೆ. ಮುಂದಿನ ಸಾಲಿನಲ್ಲಿ ನಾಯಕ ವಿರಾಟ್ ಕೊಹ್ಲಿ ಜತೆ ಅನುಷ್ಕಾ ನಿಂತಿರುವ ಈ ಫೋಟೊವನ್ನು ಬಿಸಿಸಿಐ ಟ್ವೀಟ್ ಮಾಡಿತ್ತು.

ಈ ಫೋಟೊ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿರುವ ಟ್ವೀಟಿಗರೊಬ್ಬರು 'ಭಾರತೀಯ ಕ್ರಿಕೆಟ್ ತಂಡದ ಉಪ ನಾಯಕ ಕೊನೆಯ ಸಾಲಿನಲ್ಲಿ ಮತ್ತು ಟೀಂ ಇಂಡಿಯಾದ ಫಸ್ಟ್ ಲೇಡಿ ಮೊದಲ ಸಾಲಿನಲ್ಲಿ. ಕೆಲವು ದಿನಗಳ ಹಿಂದೆ ಇವರು ಜನರಿಗೆ ಪಾಠ ಮಾಡಿದ್ದರು' ಎಂದಿದ್ದಾರೆ.

ಇನ್ನೊಬ್ಬ ಟ್ವೀಟಿಗ, ಅನುಷ್ಕಾ ಶರ್ಮಾ ಟೀಂನಲ್ಲಿದ್ದು, ಮುಂದಿನ ಪಂದ್ಯ ಆಡಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಅನುಷ್ಕಾ ಶರ್ಮಾ ಇಂಡಿಯನ್ ಕ್ರಿಕೆಟ್ ಟೀಂ ಯಾವಾಗ ಸೇರಿದ್ದು  ಎಂದು ಕೆಲವರು ಪ್ರಶ್ನಿಸಿದ್ದರೆ ಇನ್ನು ಕೆಲವರು ದೋನಿ ನಾಯಕನಾಗಿದ್ದಾಗ ಆತನ ಪತ್ನಿ ಸಾಕ್ಷಿ ದೋನಿ ಈ ರೀತಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

ಟ್ವೀಟರಾತಿಗಳ ಪ್ರತಿಕ್ರಿಯೆ ಹೀಗಿದೆ

 

 

 

 

 

 

 

 

 

 

 

 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !