ವಿಜಯಪುರ: ‘ಸಾಮಾಜಿಕ ಜಾಲತಾಣಗಳಿಂದ ಜ್ಞಾನ ಮತ್ತು ಮಾಹಿತಿ, ಮನರಂಜನೆ ಸಿಗುವುದಷ್ಟೇ ಅಲ್ಲದೇ, ಆದಾಯದ ಮೂಲವಾಗಿದೆ’ ಎಂದು ಪತ್ರಕರ್ತ ಪರಶುರಾಮ ಭಾಸಗಿ ಹೇಳಿದರು.

ನಗರದ ದರ್ಬಾರ್ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ‘ಸಾಮಾಜಿಕ ಜಾಲತಾಣ ಸುದ್ದಿಯ ಮೂಲವೋ, ಗೊಂದಲದ ಗೂಡೋ’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

‘ಸಾಮಾಜಿಕ ಜಾಲತಾಣಗಳಿಂದ ನಮಗೆ ಅವಕಾಶಗಳು ದೊರೆಯುತ್ತವೆ ಮತ್ತು ವಿದ್ಯಾರ್ಥಿಗಳು ಯುಟ್ಯೂಬ್, ಲಿಂಕ್ಡ್ ಇನ್ ಮುಂತಾದವುಗಳಿಂದ ಹೊಸ ವಿಷಯಗಳನ್ನು ಕಲಿಯಲು ಮತ್ತು ಉದ್ಯೋಗಗಳನ್ನು ಪಡೆದುಕೊಳ್ಳಲು ಸಹಾಯಕಾರಿಯಾಗಿವೆ’ ಎಂದರು.

‘ಸಾಮಾಜಿಕ ಜಾಲತಾಣಗಳಿಂದ ನಮಗೆ ಎಷ್ಟು ಅನುಕೂಲವಿದೆಯೋ ಅಷ್ಟೇ ಅವುಗಳ ಅತಿಯಾದ ಬಳಕೆಯಿಂದ ಮಾನಸಿಕ ಒತ್ತಡ, ನಿದ್ರಾಹೀನತೆ ಮುಂತಾದ ಆರೋಗ್ಯ ಸಮಸ್ಯೆಗಳಿಗೂ ಕೂಡ ಕಾರಣವಾಗಬಹುದು. ಆದ್ದರಿಂದ ಜವಾಬ್ದಾರಿಯುತ ಮತ್ತು ಮಿತವಾದ ಬಳಕೆ ಅತ್ಯಗತ್ಯ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಸುಶೀಲೇಂದ್ರ ನಾಯಕ ಮಾತನಾಡಿ, ‘ಸಾಮಾಜಿಕ ಜಾಲತಾಣವು ಇಂದು ಎಲ್ಲ ಮಾಹಿತಿಯನ್ನು ಕ್ಷಣಾರ್ಧದಲ್ಲಿ ದೊರಕಿಸಿಕೊಡುವಲ್ಲಿ ಸಹಕಾರಿಯಾಗಿವೆ’ ಎಂದರು.

‘ಸಾಮಾಜಿಕ ಜಾಲತಾಣಗಳು ಹೇಗೆ ವೇಗವಾದ ಮಾಹಿತಿ ನೀಡುತ್ತವೆಯೋ, ಅಷ್ಟೇ ಸುಳ್ಳು ಸುದ್ದಿಗಳನ್ನು ನೋಡುತ್ತೇವೆ. ಆದರೆ, ಪತ್ರಿಕೆಗಳು ಹಾಗಲ್ಲ. ಪತ್ರಿಕೆಗಳು ಯಾವುದೇ ಒಂದು ಸುದ್ದಿಯ ಮೂಲವನ್ನು ಅರಿತು, ಅದರ ಹಿಂದಿರುವ ಸತ್ಯತೆಯನ್ನು ತಿಳಿದು ಸಮಾಜಕ್ಕೆ ಮಾಹಿತಿಯನ್ನು ಒದಗಿಸುತ್ತದೆ’ ಎಂದು ಹೇಳಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಜಿ. ಎಚ್ ಮಣ್ಣೂರ ಮಾತನಾಡಿ, ‘ಇಂದು ಸಮಾಜದ ಬಹುತೇಕ ಎಲ್ಲ ವರ್ಗದ ಜನರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಇದರ ವ್ಯಾಪ್ತಿ ಕೇವಲ ಯುವಜನತೆಗೆ ಸೀಮಿತವಾಗಿಲ್ಲ. ಎಲ್ಲ ವರ್ಗದವರು ಬಳಸುತ್ತಿದ್ದಾರೆ, ಅದಿಲ್ಲದೆ ಬದುಕು ಕಷ್ಟಕರವಾಗಿದೆ’ ಎಂದು ಹೇಳಿದರು.

ರಾಜಕೀಯ ವಿಭಾಗದ ಉಪನ್ಯಾಸಕ ಸುಭಾಷ್ ಪಾಟೀಲ್, ಕನ್ನಡ ವಿಭಾಗದ ಎಂ. ಕೆ. ಕುಂಬಾರ್, ಭೂಗೋಳಶಾಸ್ತ್ರ ವಿಭಾಗದ ಉಪನ್ಯಾಸಕ ಎಂ. ಎಚ್. ಕೋಟ್ಯಾಲ, ಎನ್ಎಸ್ಎಸ್ ಸಂಯೋಜನಾಧಿಕಾರಿ ರಾಜು ಕಪಾಲಿ, ಆನಂದ ಕುಲಕರ್ಣಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ರಶ್ಮಿ ಪಾಟೀಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-26-1183854358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.