ವಾಟ್ಸ್‌ಆ್ಯಪ್‌ ಪಾವತಿ: ಜಾರಿಗೆ ಸಿದ್ಧತೆ

7

ವಾಟ್ಸ್‌ಆ್ಯಪ್‌ ಪಾವತಿ: ಜಾರಿಗೆ ಸಿದ್ಧತೆ

Published:
Updated:
ವಾಟ್ಸ್‌ಆ್ಯಪ್‌

ನವದೆಹಲಿ / ನ್ಯೂಯಾರ್ಕ್‌ (ಪಿಟಿಐ): ಭಾರತದಲ್ಲಿ ವಾಟ್ಸ್‌ಆ್ಯಪ್‌ ಪಾವತಿ ಸೇವೆಗೆ 24 ಗಂಟೆಗಳ ಗ್ರಾಹಕ ಸೇವೆಯನ್ನು ಒದಗಿಸುವುದಾಗಿ ಕಂಪನಿ ತಿಳಿಸಿದೆ.

ಇ–ಮೇಲ್‌ ಮತ್ತು ಉಚಿತ ಸಹಾಯವಾಣಿ ಮೂಲಕ ಗ್ರಾಹಕರು ಪಾವತಿ ಸೇವೆಗೆ ಸಂಬಂಧಿಸಿದಂತೆ ಸಲಹೆ ಪಡೆಯಬಹುದು. ಇಂಗ್ಲಿಷ್‌, ಹಿಂದಿ, ಮರಾಠಿ ಮತ್ತು ಗುಜರಾತಿ ಭಾಷೆಗಳಲ್ಲಿ ಗ್ರಾಹಕ ಸೇವೆ ಲಭ್ಯವಾಗಲಿದೆ ಎಂದು ಕಂಪನಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ಭಾರತದಲ್ಲಿ ಪ್ರಾಯೋಗಿಕ ಹಂತದ ಪಾವತಿ ಸೇವೆಯನ್ನು ಆರಂಭಿಸಿರುವ ವಾಟ್ಸ್‌ಆ್ಯಪ್‌ ಕಂಪನಿಯು, ತನ್ನ ಸೇವೆ ಮತ್ತು ಖಾಸಗಿತನಕ್ಕೆ ಸಂಬಂಧಿಸಿದ ನೀತಿಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಆರಂಭಿಸಿದೆ. ಪಾವತಿ ಸೇವೆ
ಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ಸಿದ್ಧತೆ ನಡೆಯುತ್ತಿದೆ. ಅದರ ಭಾಗವಾಗಿ ಸೇವೆ ಮತ್ತು ಖಾಸಗಿ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಗುತ್ತಿದೆ.

ಕಂಪನಿಯು ಭಾರತದಲ್ಲಿ 20 ಕೋಟಿ ಬಳಕೆದಾರರನ್ನು ಹೊಂದಿದೆ. ಸದ್ಯ 10 ಲಕ್ಷ ಮಂದಿ ಪ್ರಾಯೋಗಿಕ ಹಂತದ ಪಾವತಿ ಸೇವೆ ಬಳಸುತ್ತಿದ್ದಾರೆ.

ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂದೇಶ ಕಳುಹಿಸುವಷ್ಟೇ ಸರಳವಾಗಿ ಹಣ ಪಾವತಿ ಆಯ್ಕೆ ನೀಡಲಾಗಿದೆ. ಹೆಚ್ಚಿನ ಜನರಿಗೆ ಈ ಸೇವೆ ಸಿಗುವಂತೆ ಮಾಡಲು ಮತ್ತು ಡಿಜಿಟಲ್‌ ಇಂಡಿಯಾಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಭಾರತ ಸರ್ಕಾರ, ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಮತ್ತು ಬ್ಯಾಂಕ್‌ಗಳ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !