ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ಕೋಟಿ ವಾಟ್ಸ್‌ಆ್ಯಪ್‌ ಬಳಕೆದಾರರ ಮಾಹಿತಿ ಸೋರಿಕೆ: ವರದಿ

Last Updated 28 ನವೆಂಬರ್ 2022, 5:27 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದ ಅತಿ ದೊಡ್ಡ ದತ್ತಾಂಶ ಸೋರಿಕೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಜನಪ್ರಿಯ ಹ್ಯಾಕಿಂಗ್‌ ವೇದಿಕೆಯೊಂದು 50 ಕೋಟಿ ವಾಟ್ಸ್‌ಆ್ಯಪ್‌ ಬಳಕೆದಾರರ ದೂರವಾಣಿ ಸಂಖ್ಯೆ ಮಾರಾಟಕ್ಕಿಟ್ಟಿದೆ ಎಂದು ಸೈಬರ್‌ನ್ಯೂಸ್‌ ವರದಿ ಮಾಡಿದೆ.


84 ದೇಶಗಳ ವಾಟ್ಸ್‌ಆ್ಯಪ್‌ ಬಳಕೆದಾರರ ಖಾಸಗಿ ಮಾಹಿತಿ ಮಾರಾಟಕ್ಕೆ ಲಭ್ಯವಿದೆ. ಅಮೆರಿಕದ 3.2 ಕೋಟಿ ಬಳಕೆದಾರರ ಮಾಹಿತಿ ಲಭ್ಯ. ಈಜಿಪ್ಟ್‌, ಇಟಲಿ, ಫ್ರಾನ್ಸ್‌, ಯುಕೆ, ರಷ್ಯಾ ಮತ್ತು ಭಾರತದ ಬಳಕೆದಾರರ ಮಾಹಿತಿಯೂ ಲಭ್ಯವಿದೆ ಎಂದು ಜನಪ್ರಿಯ ಹ್ಯಾಕಿಂಗ್‌ ವೇದಿಕೆಯೊಂದು ಜಾಹೀರಾತು ನೀಡಿದೆ.


ಅಮೆರಿಕದ ದಾಖಲೆ ಸೆಟ್‌ 7,000 ಡಾಲರ್‌ಗೆ ಲಭ್ಯವಿದೆ. ಯುಕೆ ದಾಖಲೆ ಮೌಲ್ಯ 2500 ಡಾಲರ್‌. ಜಾಹೀರಾತುದಾರರನ್ನು ಸಂಪರ್ಕಿಸಿದಾಗ ಬ್ರಿಟನ್‌ನ 1,097 ಸಂಖ್ಯೆಗಳನ್ನು ಪುರಾವೆಯಾಗಿ ಹಂಚಿಕೊಂಡಿದ್ದಾರೆ. ಸೈಬರ್‌ನ್ಯೂಸ್‌ ಮಾಧ್ಯಮ ಸಂಸ್ಥೆಯಿಂದ ಆ ನಂಬರ್‌ಗಳನ್ನು ಪರೀಕ್ಷಿಸಲಾಗಿದ್ದು ಎಲ್ಲವೂ ವಾಟ್ಸ್‌ಆ್ಯಪ್‌ ಸಂಖ್ಯೆಗಳೆಂದು ಖಚಿತವಾಗಿದೆ ಎಂಬುದಾಗಿ ಸೈಬರ್‌ನ್ಯೂಸ್‌ ವರದಿ ಹೇಳಿದೆ.


ಮಾಹಿತಿಗಳನ್ನು ಹೇಗೆ ಪಡೆಯಲಾಗಿದೆ ಎಂಬ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಬಳಕೆದಾರರು ಅಪರಿಚಿತ ಲಿಂಕ್‌ಗಳಿಗೆ ಕ್ಲಿಕ್‌ ಮಾಡಿದಾಗ ಇಂತಹ ಮಾಹಿತಿಗಳನ್ನು ಪಡೆದಿರುವ ಶಂಕೆಯಿದೆ. ಮೆಟಾ ಒಡೆತನದ ಸಂಸ್ಥೆಯಿಂದ ದತ್ತಾಂಶ ಸೋರಿಕೆ ಇದೇ ಮೊದಲೇನಲ್ಲ. ಹಿಂದಿನ ವರ್ಷ ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಸೋರಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT