ಶನಿವಾರ, ಡಿಸೆಂಬರ್ 14, 2019
24 °C
ಸುರಕ್ಷತಾ ದೋಷ

ವಾಟ್ಸ್‌ಆ್ಯಪ್: ವಿಡಿಯೊ ಫೈಲ್‌ ಡೌನ್‌ಲೋಡ್‌ ಮಾಡಿದರೆ ಹ್ಯಾಕ್‌ ಆಗುತ್ತೆ ಫೋನ್‌!

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್‌

ವಾಟ್ಸ್‌ಆ್ಯಪ್‌ಗೆ ಮತ್ತೊಂದು ಸುರಕ್ಷತಾ ದೋಷ ಎದುರಾಗಿದೆ. ಯಾರಾದರೂ ಎಂಪಿ4(ವಿಡಿಯೊ) ಫೈಲ್‌ ಕಳುಹಿಸಿದರೆ ಅದನ್ನು ಡೌನ್‌ಲೋಡ್‌ ಮಾಡುವ ಮುನ್ನ ಎಚ್ಚರವಹಿಸಿ. ಇಲ್ಲವಾದರೆ ಹ್ಯಾಕರ್‌ಗಳು ನಿಮ್ಮ ಮೊಬೈಲ್‌ನಿಂದ ಖಾಸಗಿ ಮಾಹಿತಿ ಹೆಕ್ಕಬಹುದು ಇಲ್ಲವೇ ಮೊಬೈಲ್‌ ಕಾರ್ಯಾಚರಣೆಯನ್ನೇ ಇಲ್ಲವಾಗಿಸಬಹುದು. 

ಫೇಸ್‌ಬುಕ್‌ ಸ್ವಾಮ್ಯದ ಮೊಬೈಲ್‌ ಅಪ್ಲಿಕೇಷನ್‌ ವಾಟ್ಸ್‌ಆ್ಯಪ್‌ ಬಳಸುತ್ತಿರುವವರು ಕೂಡಲೇ ಆ್ಯಪ್‌ ಅಪ್‌ಡೇಟ್‌ ಮಾಡಿಕೊಳ್ಳುವುದು ಒಳಿತು. ಆ್ಯಂಡ್ರಾಯ್ಡ್‌ ಮತ್ತು ಐಫೋನ್‌ಗಳಲ್ಲಿ ಹಳೆಯ ವರ್ಶನ್‌ ವಾಟ್ಸ್‌ಆ್ಯಪ್‌ನಲ್ಲಿ ಹ್ಯಾಕರ್‌ಗಳ ಎಂಪಿ4 ಫೈಲ್‌ ತೊಂದರೆ ಸುರಕ್ಷತೆಗೆ ತೀವ್ರ ಅಪಾಯಕಾರಿಯಾಗಬಲ್ಲದು ಎನ್ನಲಾಗಿದೆ. 

ಇದನ್ನೂ ಓದಿ: ಪೆಗಾಸಸ್‌ ಪೆಡಂಭೂತ ಸೃಷ್ಟಿಸಿದ ಎನ್ಎಸ್ಒ: ಇಸ್ರೇಲಿ ಕಂಪನಿಯ ಇತಿಹಾಸ

ಪೆಗಾಸಸ್‌ ಎಂಬ ಬೇಹುಗಾರಿಕೆ ತಂತ್ರಾಂಶ ಬಳಸಿ 1,400 ಬಳಕೆದಾರರ ಮೇಲೆ ನಿಗಾ ಇರಿಸಲಾಗಿತ್ತು ಎಂಬ ವಿಚಾರವನ್ನು ವಾಟ್ಸ್‌ಆ್ಯಪ್‌ ಬಹಿರಂಗಪಡಿಸಿದ ಬೆನ್ನಲೇ ಈಗ ಹೊಸದೊಂದು ಸೈಬರ್‌ ಹ್ಯಾಕರ್‌ಗಳ ಪ್ರಯತ್ನವನ್ನು ಗುರುತಿಸಿದೆ. ಪೆಗಾಸಸ್‌ ಕುತಂತ್ರಾಂಶದ ಮೂಲಕ ಗೂಢಚರ್ಯೆಗೆ ಒಳಗಾದವರಲ್ಲಿ ಭಾರತದ ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು, ವಕೀಲರು ಮತ್ತು ರಾಜಕಾರಣಿಗಳು ಇದ್ದಾರೆ. 

ಆ್ಯಂಡ್ರಾಯ್ಡ್‌ನ 2.19.274 ಹಾಗೂ ಆ್ಯಪಲ್‌ ಐಒಎಸ್‌ನಲ್ಲಿ 2.19.100 ಗಿಂತ ಹಿಂದಿನ ವರ್ಶನ್‌ ವಾಟ್ಸ್ಆ್ಯಪ್‌ ಎಂಪಿ4 ಫೈಲ್‌ ದಾಳಿಗೆ ತುತ್ತಾಗಬಹುದಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು