ವಾಟ್ಸ್ಆ್ಯಪ್‌: ಗುಂಪು ಸಂದೇಶಗಳಿಗೆ ಕಡಿವಾಣ

4

ವಾಟ್ಸ್ಆ್ಯಪ್‌: ಗುಂಪು ಸಂದೇಶಗಳಿಗೆ ಕಡಿವಾಣ

Published:
Updated:

ನವದೆಹಲಿ: ಭಾರತದಲ್ಲಿರುವ ವಾಟ್ಸ್ಆ್ಯಪ್‌ ಬಳಕೆದಾರರಿಗೆ ಏಕಕಾಲಕ್ಕೆ ಐದಕ್ಕಿಂತ ಹೆಚ್ಚು ಜನರಿಗೆ ಸಂದೇಶಗಳನ್ನು ಫಾರ್ವಡ್ ಮಾಡಲು ಅನುಮತಿ ನೀಡುವುದಿಲ್ಲ ಎಂದು ವಾಟ್ಸ್ಆ್ಯಪ್‌ ಕಂಪನಿ ಹೇಳಿದೆ. 
ಸುಳ್ಳುಸುದ್ದಿಗಳ ಪ್ರಸರಣಕ್ಕೆ ಕಡಿವಾಣ ಹಾಕಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿ ಸರ್ಕಾರ ಗುರುವಾರ ಎರಡನೇ ನೋಟಿಸ್ ನೀಡಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.

ಅಮಾಯಕರ ಮೇಲೆ ಹೆಚ್ಚುತ್ತಿರುವ ಗುಂಪು ದಾಳಿಗಳಿಗೆ ಪ್ರಚೋದನೆ ನೀಡುವ ಸುಳ್ಳುಸುದ್ದಿಗಳ ಪ್ರಸರಣಕ್ಕೆ ವಾಟ್ಸ್ಆ್ಯಪ್‌ ದುರ್ಬಳಕೆಯಾಗುತ್ತಿದೆ ಎಂಬ ಟೀಕೆಗಳು ವ್ಯಾಪಕವಾದ ಹಿನ್ನೆಲೆಯಲ್ಲಿ ಸಂಸ್ಥೆ ಈ ಕ್ರಮ ಕೈಗೊಂಡಿದೆ.

ಗುಂಪು ಸಂದೇಶಗಳ ಪ್ರಸರಣ ತಡೆಯಲು ‘ಕ್ವಿಕ್‌ ಫಾರ್ವರ್ಡ್‌ ಬಟನ್‌’ ಸೌಲಭ್ಯ ತೆಗೆದು ಹಾಕುವುದಾಗಿ ವಾಟ್ಸ್ ಆ್ಯಪ್‌  ತಮ್ಮ ಬ್ಲಾಗ್‍ನಲ್ಲಿ ಹೇಳಿದೆ. ಬಳಕೆದಾರರಿಗೆ ಅತ್ಯಂತ ವೇಗವಾಗಿ ಸಂದೇಶ ಹಂಚಿಕೊಳ್ಳಲು 'ಕ್ವಿಕ್ ಫಾರ್ವರ್ಡ್‌ ಬಟನ್‌’ ಬಳಸಲಾಗುತ್ತದೆ . ಸಂದೇಶಗಳ ಪಕ್ಕದಲ್ಲಿರುವ ಬಿಳಿ ಬಣ್ಣದ ಬಾಣದ ಗುರುತಿನ ಚಿಹ್ನೆಯೇ ‘ಕ್ವಿಕ್‌ ಫಾರ್ವರ್ಡ್‌ ಬಟನ್‌’.
 

ಬರಹ ಇಷ್ಟವಾಯಿತೆ?

 • 18

  Happy
 • 4

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !