ಸೋಮವಾರ, ಜೂನ್ 1, 2020
27 °C

ಫಾರ್ವರ್ಡ್ ಸಂದೇಶಗಳಿಗೆ ಮಿತಿ ಹೇರಿದ ವಾಟ್ಸ್‌ಆ್ಯಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

WhatsApp

ನವದೆಹಲಿ: ಕೋವಿಡ್ 19 ಬಗ್ಗೆ ತಪ್ಪಾದ ಮಾಹಿತಿಗಳ ಹರಡುವಿಕೆಯನ್ನು ತಡೆಯವುದಕ್ಕಾಗಿ ಅಡಿಗಡಿಗೆ ಫಾರ್ವರ್ಡ್ ಮಾಡಿದ ಸಂದೇಶಗಳಿಗೆ ವಾಟ್ಸ್‌ಆ್ಯಪ್ ನಿಯಂತ್ರಣ ಹೇರಿದೆ. 5 ಅಥವಾ ಅದಕ್ಕಿಂತ ಹೆಚ್ಚು ಬಾರಿ ಫಾರ್ವರ್ಡ್ ಮಾಡಿದ ಸಂದೇಶಗಳನ್ನು ವಾಟ್ಸ್‌ಆ್ಯಪ್ ಹೈಲೈಟ್ ಮಾಡುತ್ತದೆ. ಅದೇ ವೇಳೆ ಫಾರ್ವರ್ಡ್ ಮೆಸೇಜ್ ಯಾವುದು ಎಂದು ಬಳಕೆದಾರರೇ ದೃಢೀಕರಿಸುವ ಫೀಚರ್‌ ಬಗ್ಗೆ ವಾಟ್ಸ್‌ಆ್ಯಪ್ ಕಾರ್ಯ ಪ್ರವೃತ್ತವಾಗಿದೆ.

ಫಾರ್ವರ್ಡ್ ಮೆಸೇಜ್‌ಗಳು ಎಂದು ಹೈಲೈಟ್ ಮಾಡುವ ವೈಶಿಷ್ಟ್ಯವನ್ನು ವಾಟ್ಸ್‌ಆ್ಯಪ್ ಇತ್ತೀಚೆಗೆ ಪರಿಚಯಿಸಿತ್ತು. ಇದೀಗ ಅಡಿಗಡಿಗೆ ಫಾರ್ವರ್ಡ್ ಮಾಡಲಾದ ಸಂದೇಶವನ್ನು ಒಂದು ಬಾರಿ ಒಬ್ಬ ವ್ಯಕ್ತಿಗೆ ಮಾತ್ರ ಕಳುಹಿಸಬಹುದಾಗಿದೆ.ಅಡಿಗಡಿಗೆ ಫಾರ್ವರ್ಡ್  ಮಾಡಿರುವ ಸಂದೇಶಗಳಾಗಿದ್ದರೆ  ವಾಟ್ಸ್‌ಆ್ಯಪ್‌ ಮೇಲ್ಭಾಗದಲ್ಲಿ ಎರಡು ಟಿಕ್ ಮಾರ್ಕ್ ಕಾಣಬಹುದು.

ಈ ಹಿಂದೆ ಫಾರ್ವರ್ಡ್ ಮೆಸೇಜ್‌ಗಳನ್ನು ಒಟ್ಟಿಗೆ 5 ಮಂದಿಗೆ ಕಳುಹಿಸಬಹುದಾಗಿತ್ತು. ಈ ನಿಯಂತ್ರಣದಿಂದಾಗಿ ಜನರು ಫಾರ್ವರ್ಡ್ ಸಂದೇಶಗಳನ್ನು ಕಳುಹಿಸುವುದು ಶೇ. 25ರಷ್ಟು ಕಡಿಮೆಯಾಗಿದೆ ಎಂದು ವಾಟ್ಸ್‌ಆ್ಯಪ್ ಹೇಳಿದೆ.

ಏತನ್ಮಧ್ಯೆ ವೆಬ್ ಆವೃತಿಯಲ್ಲಿಯೂ ಫಾರ್ವರ್ಡ್ ಮೆಸೇಜ್ ಎಂದು ತಿಳಿಯುವ ಫೀಚರ್‌ನ್ನು ಪರಿಚಯಿಸುವ ಬಗ್ಗೆ ವಾಟ್ಸ್‌ಆ್ಯಪ್ ಪರೀಕ್ಷೆ ನಡೆಸುತ್ತಿದೆ. ಈ ಮೆಸೇಜ್‌ಗಳು ಜತೆ ಭೂತಗನ್ನಡಿ ಐಕಾನ್ ಕಾಣಿಸಿಕೊಳ್ಳಲಿದ್ದು, ಫಾರ್ವರ್ಡ್ ಮೆಸೇಜ್ ಯಾವುದು ಎಂಬುದನ್ನು ಗ್ರಾಹಕರೇ ಖುದ್ದಾಗಿ ಪರೀಕ್ಷಿಸಬಹುದಾಗಿದೆ. ಈ ಫೀಚರ್ ಸದ್ಯ ವಾಟ್ಸ್‌ಆ್ಯಪ್‌ನ ಅಂಡ್ರಾಯ್ಡ್ ಮತ್ತು ಐಓಎಸ್ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಇದು ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು