ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜಿಡಿಪಿಗೆ YouTube ಕಂಟೆಂಟ್ ಕ್ರಿಯೇಟರ್‌ಗಳಿಂದ ₹10,000 ಕೋಟಿ ಕೊಡುಗೆ!

Last Updated 19 ಡಿಸೆಂಬರ್ 2022, 9:27 IST
ಅಕ್ಷರ ಗಾತ್ರ

ನವದೆಹಲಿ: ಯುಟ್ಯೂಬ್ ವಿಡಿಯೊ ಕ್ರಿಯೇಟರ್‌ಗಳು ಭಾರತದ ಜಿಡಿಪಿಗೆ ಸುಮಾರು ₹10,000 ಕೋಟಿ ಕೊಡುಗೆ ನೀಡಿದೆ ಎಂದು ಯುಟ್ಯೂಬ್ ವಕ್ತಾರರು ಸೋಮವಾರ ತಿಳಿಸಿದ್ದಾರೆ.

ಇದೇ ವೇಳೆ ಭಾರತದಲ್ಲಿ ಯುಟ್ಯೂಬ್ 7.50 ಲಕ್ಷ ಉದ್ಯೋಗಗಳಿಗೆ ಸಮಾನವಾದ ಉದ್ಯೋಗವಕಾಶಗಳನ್ನು ನೀಡಿದೆ ಎಂದು ತಿಳಿಸಿದ್ದಾರೆ.

2023ರ ಯುಟ್ಯೂಬ್ ಹೊಸ ಅವತರಣಿಕೆಯಲ್ಲಿ ಕಂಟೆಂಟ್ ಕ್ರಿಯೇಟರ್‌ಗಳಿಗೆ ವಿಡಿಯೊಗಳಿಂದ ಹೆಚ್ಚಿನ ಹಣ ಸಂಪಾದಿಸಲು ಹೊಸ ಅವಕಾಶಗಳನ್ನು ನೀಡಲಾಗುತ್ತದೆ. ಭಾರತದಲ್ಲಿನ ಯುಟ್ಯೂಬ್ ಕಂಟೆಂಟ್ ಹೊರದೇಶಗಳಲ್ಲಿ ಕೂಡ ಹೆಚ್ಚು ವೀಕ್ಷಣೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳು ಭಾರತದ ಆರ್ಥಿಕ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ಉದ್ಯೋಗವಕಾಶಗಳು ಇದರಿಂದ ಹೆಚ್ಚಾಗುತ್ತಿವೆ. ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಯುಟ್ಯೂಬ್ ಮಾರುಕಟ್ಟೆ ವಿಭಾಗದ ಅಜಯ್ ವಿದ್ಯಾಸಾಗರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT