ಇಂದು ಮೊಬೈಲ್ ಪ್ರತಿಯೊಬ್ಬರ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಂದು ಎಲ್ಲರ ಕೈಗೆ 5ಜಿ ಮೊಬೈಲ್ ಬಂದಿದೆ. ಆದರೂ ಕೆಲವೊಮ್ಮೆ ಮೊಬೈಲ್ನ ನೆಟ್ವರ್ಕ್ ನಿಧಾನವಾಗುತ್ತದೆ. ಮೊಬೈಲ್ನಲ್ಲಿ ಪೂರ್ಣ ನೆಟ್ವರ್ಕ್ ತೋರಿಸುತ್ತಿದ್ದರೂ ಇಂಟರ್ನೆಟ್ ವೇಗದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಮೊಬೈಲ್ ಬಳಸುವಾಗ ಒಂದುವೇಳೆ ಇಂಟರ್ನೆಟ್ ನಿಧಾನವಾದರೆ, ಮೊಬೈಲ್ ಅನ್ನು ರೀ ಸ್ಟಾಟ್ ಮಾಡಿ ಅಥವಾ ಮೊಬೈಲ್ ಸೆಟ್ಟಿಂಗ್ಸ್ಗೆ ಹೋಗಿ ಫ್ಲೈಟ್ ಮೋಡ್ ಆನ್ ಮಾಡಿ, 30 ಸೆಕೆಂಡ್ಗಳ ಬಳಿಕ ತೆಗೆಯಿರಿ. ಇದರಿಂದ ನೆಟ್ವರ್ಕ್ ರಿಫ್ರೆಶ್ ಆಗುತ್ತದೆ.

ಹೆಚ್ಚಿನ ಮೊಬೈಲ್ ಫೋನ್ಗಳು ತಾಂತ್ರಿಕವಾಗಿ ಸಿಮ್–1 ಸ್ಲಾಟ್ಗೆ ಹೆಚ್ಚಿನ ಆದ್ಯತೆ ನೀಡುತ್ತಿರುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಇಂಟರ್ನೆಟ್ ಬಳಸುವ ಸಿಮ್ ಅನ್ನು ಮೊದಲ ಸಿಮ್ ಸ್ಲಾಟ್ನಲ್ಲಿ ಇಡುವುದು ಉತ್ತಮ. ಇದರಿಂದ ಇಂಟರ್ನೆಟ್ ವೇಗವಾಗುವ ಸಾಧ್ಯತೆ ಇದೆ.

ಮೊಬೈಲ್ನಲ್ಲಿ ಕೆಲವು ಅಪ್ಲಿಕೇಶನ್ಗಳು ನಮಗೆ ತಿಳಿಯದಂತೆ ಇಂಟರ್ನೆಟ್ ಅನ್ನು ತೆಗೆದುಕೊಳ್ಳುತ್ತವೆ. ಆಗ ನಿಮ್ಮ ಇಂಟರ್ನೆಟ್ ವೇಗ ನಿಧಾನವಾಗುತ್ತದೆ. ಜೊತೆಗೆ ಬೇಗನೆ ಇಂಟರ್ನೆಟ್ ಖಾಲಿಯಾಗುತ್ತದೆ. ಆದ್ದರಿಂದ ಆ್ಯಪ್ ಸೆಟ್ಟಿಂಗ್ಸ್ಗೆ ಹೋಗಿ ಅಲ್ಲಿ ಡೇಟಾ ಬಳಕೆಯನ್ನು ಆಫ್ ಮಾಡಬೇಕು.

ಬ್ರೌಸರ್ ಮತ್ತು ಇತರ ಆ್ಯಪ್ಗಳ ಕ್ಯಾಷ್ ಡೇಟಾವನ್ನು ನಿಯಮಿತವಾಗಿ ಡಿಲೀಟ್ ಮಾಡಬೇಕು. ಅಪ್ಲಿಕೇಶನ್ ಸೆಟ್ಟಿಂಗ್ಸ್ಗೆ ಹೋಗಿ. ಅಲ್ಲಿ ಅಪ್ಲಿಕೇಶನ್ ಮೇನೆಜರ್ನಲ್ಲಿ ‘Storage & Cach’ ಆಯ್ಕೆ ಮಾಡಿ ಅಲ್ಲಿರುವ ಬೇಡವಾದ ಮಾಹಿತಿಯನ್ನು ಡೀಲಿಟ್ ಮಾಡಿದರೆ ಸಾಕು. ಇಂಟರ್ನೆಟ್ ವೇಗವಾಗಬಹುದು

ಆಗಾಗ ನಿಮ್ಮ ಮೊಬೈಲ್ನ ಸಾಫ್ಟ್ವೇರ್ ಅಪ್ಡೇಟ್ ಮಾಡಿ. ಇದರಿಂದ ನಿಮ್ಮ ಮೊಬೈಲ್ ಹೆಚ್ಚು ಸರಾಗವಾಗಿ ಬಳಕೆಯಾಗುತ್ತದೆ. ಸೆಟ್ಟಿಂಗ್ಸ್ಗೆ ಹೋಗಿ ಅಲ್ಲಿ ಸಾಫ್ಟ್ವೇರ್ ಅಪ್ಡೇಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. (ಇದು ನಿಯಮತ ಮೊಬೈಲ್ ಕಂಪನಿಯಿಂದಲೇ ಅಪ್ಡೇಟ್ ಸಿಗುತ್ತದೆ) ಆದರೆ ಇದನ್ನು ಆಟೋ ಸೆಟ್ ಕೂಡ ಮಾಡಬಹುದು.

ಒಂದು ವೇಳೆ ನಿಮ್ಮ ಫೋನ್ನ ಸೆಟ್ಟಿಂಗ್ಗಳಲ್ಲಿ ಡೇಟಾ ಸೇವರ್ ಮೋಡ್ ಆನ್ ಆಗಿದ್ದರೆ, ಆಫ್ ಮಾಡಿರಿ. ಇದರಿಂದ ಇಂಟರ್ನೆಟ್ ವೇಗವಾಗಿ ಬಳಕೆಯಾಗುತ್ತದೆ. ಜತೆಗೆ ನೆಟ್ವರ್ಕ್ ಸೆಟ್ಟಿಂಗ್ಸ್ ರೀಸೆಟ್ ಮಾಡಿದರೆ ಈ ಸಮಸ್ಯೆ ಬಗೆ ಹರಿಯುತ್ತದೆ ಎನ್ನುತ್ತಾರೆ ಟೆಕ್ ತಜ್ಞರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.