ಹತ್ತು ಸಂಖ್ಯೆಯ ಫೋನ್ ನಂಬರ್ ನಮ್ಮ ಎಷ್ಟೆಲ್ಲ ಮಾಹಿತಿಯನ್ನು ಹಂಚುತ್ತದೆ ಎಂಬ ಕಲ್ಪನೆಯೂ ನಮಗೆ ಬಹುತೇಕ ಸಮಯದಲ್ಲಿ ಇರುವುದಿಲ್ಲ!

ಕೊರಿಯರ್ನವನೋ, ಯಾವುದೋ ಒಂದು ಸಣ್ಣ ರಿಪೇರಿ ಕೆಲಸದವನೋ ಅಥವಾ ಯಾವುದೋ ಸಣ್ಣದೊಂದು ಮಾತಿಗಾಗಿ ನಾವು ಯಾವುದೋ ವ್ಯಕ್ತಿಯ ಫೋನ್ ನಂಬರ್ ಸೇವ್ ಮಾಡಿಕೊಳ್ಳುತ್ತೇವೆ. ನಮ್ಮ ಫೋನ್ ನಂಬರ್ ಅನ್ನು ಆ ವ್ಯಕ್ತಿಯೂ ಸೇವ್ ಮಾಡಿಕೊಳ್ಳುತ್ತಾನೆ. ಆ ಫೋನ್ ನಂಬರ್ ಸೇವ್ ಮಾಡಿದ ಕ್ಷಣದಿಂದಲೇ ನಾವು ಎಷ್ಟೆಲ್ಲ ಮಾಹಿತಿಯನ್ನು ನಾವು ಹಂಚುತ್ತಿರು ತ್ತೇವೆ ಎಂಬ ಅರಿವೂ ನಮಗೆ ಇರುವುದೇ ಇಲ್ಲ!

ನಮ್ಮ ಬಗ್ಗೆ ಎಲ್ಲ ಮಾಹಿತಿ ತಿಳಿದುಕೊಳ್ಳುವುದಕ್ಕೆ ನಮ್ಮ ವಾಟ್ಸ್ಆ್ಯಪ್ ಸ್ಟೇಟಸ್ ಸಾಕು!

ಬಹುತೇಕರಿಗೆ ಬೆಳಿಗ್ಗೆ ವಾಕಿಂಗ್ಗೆ ಹೋದಾಗ ತೆಗೆದುಕೊಂಡ ಸೆಲ್ಫೀ ಇಂದ ಹಿಡಿದು, ಒಂದು ವಾರ ಬಿಟ್ಟು ಸಿಕ್ಕಿದ ಪಕ್ಕದ ಮನೆ ವ್ಯಕ್ತಿಯ ಜೊತೆಗೆ ತೆಗೆಸಿಕೊಂಡ ಸೆಲ್ಫೀ, ಪ್ರವಾಸಕ್ಕೆ ಹೊರಟರಂತೂ ಹೋಗಿ ಬರುವವರೆಗೆ ಪ್ರತಿ ಕ್ಷಣದ ಫೋಟೊ, ಯಾರದ್ದೋ ಮೇಲೆ ಸಿಟ್ಟಾದರೆ ಅವರಿಗೆ ‘ತಾಗಿಸುವ’ ಹಾಗೆ ಹಾಕುವ ಕೊಟೇಷನ್ಗಳು... ಹೀಗೆ ನಮ್ಮ ವಾಟ್ಸ್ಆ್ಯಪ್ ಸ್ಟೇಟಸ್ ಅನ್ನೋದು ವೈಯಕ್ತಿಕ ಬದುಕನ್ನು ಸಾರ್ವಜನಿಕ ಬದುಕನ್ನಾಗಿಸುವ ರಹದಾರಿ!

ಆದರೆ, ಇವು ನಮ್ಮ ವಲಯದಲ್ಲಿ ನಮ್ಮ ಇಮೇಜ್ ಬೆಳೆಸುವುದಕ್ಕೆ ಎಷ್ಟು ಉಪಕಾರಿಯೋ, ಅಷ್ಟೇ ಪ್ರಮಾಣದಲ್ಲಿ ನಮ್ಮ ವೈಯಕ್ತಿಕ ಬದುಕಿನ ಬುಡ ಅಲ್ಲಾಡಿಸುವುದಕ್ಕೆ ಅಪಕಾರಿಯೂ ಹೌದು! ನಾವು ನಮ್ಮ ವಿಳಾಸ, ನಮ್ಮ ಮನೆಯ ಲೊಕೇಷನ್, ಸಿಟ್ಟು, ಬೇಸರ, ಖುಷಿ, ಅಸಹನೆ, ಪ್ರೀತಿ, ವಿಶೇಷ ಕ್ಷಣಗಳು... ಇವೆಲ್ಲವನ್ನೂ ಆಫ್ಲೈನ್ನಲ್ಲಿ ಆಯ್ದ ವ್ಯಕ್ತಿಗಳ ಜೊತೆಗಷ್ಟೇ ಹಂಚಿಕೊಳ್ಳುತ್ತಿರುತ್ತೇವೆ.

ಆದರೆ, ಅದು ಆನ್ಲೈನ್ಗೂ ಅನ್ವಯ ಆಗಬೇಕು ಅನ್ನೋದನ್ನ ನಾವು ಮರೆಯುತ್ತೇವೆ.

ಈ ಹಿಂದೆ ವಾಟ್ಸ್ಆ್ಯಪ್ ಸ್ಟೇಟಸ್ ನೋಡಿಕೊಂಡು, ಮನೆಯ ಜನರು ಟ್ರಿಪ್ಗೆ ಹೋಗಿದ್ದಾರೆ ಅನ್ನೋದನ್ನ ಅರಿತು ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಪ್ರಕರಣಗಳೆಲ್ಲ ಬೇಕಾದಷ್ಟಾಗಿವೆ. ಆದರೆ, ಅದಕ್ಕಿಂತ ದೊಡ್ಡ ಆತಂಕದ ಸಂಗತಿಯೆಂದರೆ, ನಾವು ನಮ್ಮ ಭಾವನಾತ್ಮಕ ಸಂಗತಿಗಳನ್ನು ಬೇಡದವರ ಜೊತೆಗೂ ಹಂಚಿಕೊಳ್ಳುತ್ತಿರುವುದು! ಇಲ್ಲಿ ಯಾರು ಬೇಕಾದರೂ ನಮ್ಮ ಭಾವನೆಗಳ ಜೊತೆಗೆ ಆಟವಾಡುವುದಕ್ಕೆ ನಾವೇ ಅವಕಾಶ ಮಾಡಿಕೊಡುತ್ತಿರುತ್ತೇವೆ.

ಒಂದು ರಿಪೇರಿಗೆ ಯಾರೋ ಒಬ್ಬ ಎಲೆಕ್ಟ್ರಿಷಿಯನ್ ಅನ್ನು ಕರೆಸುತ್ತೇವೆ. ಆತನಿಗೆ ಫೋನ್ ಮಾಡುವಾಗ ನಾವು ಅವನ ಫೋನ್ ನಂಬರ್ ಸೇವ್ ಮಾಡಿಕೊಳ್ಳುತ್ತೇವೆ. ನಾವು ಫೋನ್ ಮಾಡಿದ ನಂತರ ಅವನೂ ನಮ್ಮ ಫೋನ್ ನಂಬರ್ ಸೇವ್ ಮಾಡಿಟ್ಟುಕೊಳ್ಳುತ್ತಾನೆ. ಆಮೇಲೆ, ಆತನನ್ನು ನಾವು ಕರೆಸುವುದು ಬರಿ ಎಲೆಕ್ಟ್ರಿಕಲ್ ಕೆಲಸಕ್ಕೆ ಅಷ್ಟೇ... ಅವನ ಬಳಿ ನಾವು ಬೇರೆ ವಿಷಯವನ್ನೇನೂ ಮಾತನಾಡುವುದಿಲ್ಲ. ಮಾತನಾಡಿದರೂ, ಅದಕ್ಕೊಂದು ಅಳತೆ, ಮಾಪನ ಇರುತ್ತದೆ. ಅದನ್ನು ಹಿಡಿದುಕೊಂಡೇ ಎಷ್ಟು ಬೇಕೋ ಅಷ್ಟನ್ನೇ ಹೇಳುತ್ತೇವೆ.

ಆದರೆ, ನಾವು ಶೇರ್ ಮಾಡಿಕೊಂಡ ಫೋನ್ ನಂಬರ್ ಇದೆಯಲ್ಲ... ಅದು ವಾಟ್ಸ್ಆ್ಯಪ್ಗೆ ಕನೆಕ್ಟ್ ಆಗುತ್ತದೆ. ವಾಟ್ಸ್ಆ್ಯಪ್ನಲ್ಲಿ ನಾವು ಹಾಕಿದ ಸ್ಟೇಟಸ್ ಅವನಿಗೆ, ಅವನು ಹಾಕಿದ ಸ್ಟೇಟಸ್ ನಮಗೆ ಕಾಣಿಸುತ್ತಿರುತ್ತದೆ. ಫೋನ್ ನಂಬರ್ ಇದ್ದ ತಕ್ಷಣ ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ನಾವು ಹಾಕಿದ ಪಬ್ಲಿಕ್ ಪೋಸ್ಟ್ಗಳೆಲ್ಲ ಪರಸ್ಪರರಿಗೂ ಕಾಣಿಸುತ್ತಿರುತ್ತವೆ.

ಒಂದೋ ನಮ್ಮ ಸ್ಟೇಟಸ್ ತೋರಿಸಿಕೊಳ್ಳುವ ಚಟವನ್ನು ಬಿಡಬೇಕು ಅಥವಾ ಯಾರಿಗೆ ನಮ್ಮ ಸ್ಟೇಟಸ್ ತೋರಿಸಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು! ಮೊದಲನೆಯದು ಮೇಲ್ನೋಟಕ್ಕೆ ಸುಲಭ ಅನ್ನಿಸಿದರೂ, ಈ ಕಾಲದಲ್ಲಿ ಬಹುತೇಕರಿಗೆ ಆಚರಣೆ ಕಷ್ಟ! ಆದರೆ, ಎರಡನೆಯದು ಮೇಲ್ನೋಟಕ್ಕೆ ಅಸಾಧ್ಯ ಅನ್ನಿಸಿದರೂ, ಸ್ವಲ್ಪ ಎಚ್ಚರ, ಪ್ರಜ್ಞೆ ಮತ್ತು ಜಾಣತನ ಬಳಸಿದರೆ ಅನುಷ್ಠಾನ ಸುಲಭ!

ಅದು ಹೇಗೆಂದರೆ, ನಾವು ಯಾವುದೇ ವ್ಯಕ್ತಿಯ ಫೋನ್ ನಂಬರ್ ಸೇವ್ ಮಾಡಿಕೊಳ್ಳುವ ಮುನ್ನ ಎರಡು ಬಾರಿ ಯೋಚನೆ ಮಾಡಬೇಕು. ಈ ವ್ಯಕ್ತಿಯ ಫೋನ್ ನಂಬರ್ ನಮಗೆ ಮತ್ತೊಮ್ಮೆ ಕಾಂಟ್ಯಾಕ್ಟ್ ಮಾಡುವುದಕ್ಕೆ ಬೇಕಾಗುತ್ತದೆಯೇ? ಅದನ್ನು ಸೇವ್ ಮಾಡಿಟ್ಟುಕೊಳ್ಳಬೇಕೆ? ಸೇವ್ ಮಾಡಿಕೊಳ್ಳಲೇಬೇಕು ಎನ್ನುವುದಾದರೆ ಸೇವ್ ಮಾಡಿ.

‘ಕೊರಿಯರ್ನವನು ದಾರಿ ಗೊತ್ತಾಗ್ತಾ ಇಲ್ಲ ಸರ್, ನಿಮ್ಮ ಮನೆ ಲೊಕೇಷನ್ ಕಳಿಸಿ’ ಅನ್ನುತ್ತಾನೆ. ಅವನಿಗೆ ನಾವೇ ಲೊಕೇಷನ್ ಕಳಿಸಬೇಕು ಎಂದಾದರೆ, ಫೋನ್ ನಂಬರ್ ಸೇವ್ ಮಾಡಿಕೊಂಡು, ವಾಟ್ಸ್ಆ್ಯಪ್ಗೆ ಹೋಗಿ, ಅವನಿಗೆ ಲೊಕೇಷನ್ ಕಳಿಸಬೇಕಾಗುತ್ತದೆ. ಹಾಗೆ ಮಾಡದೇ, ಅವನ ಬಳಿಯೇ, ‘ಆಯ್ತು, ವಾಟ್ಸ್ಆ್ಯಪ್ನಲ್ಲಿ ಹಾಯ್ ಅಂತ ಕಳಿಸು’ ಎಂದು ಅಂದುಬಿಡಿ. ಅಲ್ಲಿಗೆ, ಅವನು ನಿಮಗೆ ಹಾಯ್ ಎಂದು ಕಳಿಸಿದರೆ, ನೀವು ಅವನ ಕಾಂಟ್ಯಾಕ್ಟ್ ನಂಬರ್ ಸೇವ್ ಮಾಡುವ ಅಗತ್ಯವ ಬೀಳುವುದಿಲ್ಲ. ಸೀದಾ, ಅವನಿಗೆ ರಿಪ್ಲೈ ಮಾಡಿ ಲೊಕೇಷನ್ ಕಳಿಸಬಹುದು. ಒಂದು ವೇಳೆ, ಹಾಗಿದ್ದೂ... ನೀವೇ ಲೊಕೇಷನ್ ಕಳಿಸುವ ಅಥವಾ ಮತ್ತಿನ್ನೇನೋ ಕಳಿಸುವ ಅಗತ್ಯ ಬಿದ್ದಲಿ, ಅವನ ಫೋನ್ ನಂಬರ್ ಕಾಪಿ ಮಾಡಿಕೊಂಡು ಟ್ರ್ಯೂಕಾಲರ್ಗೆ ಹೋಗಿ, ಅಲ್ಲಿ ಆ ವ್ಯಕ್ತಿಯ ಫೋನ್ ನಂಬರ್ ಹಾಕಿ ಸರ್ಚ್ ಮಾಡಿ, ಅಲ್ಲಿ ಅವನ ಪ್ರೊಫೈಲ್ ಕೆಳಗಡೆ ವಾಟ್ಸ್ಆ್ಯಪ್ ಲಿಂಕ್ ಕೂಡ ಇರುತ್ತದೆ. ಅದರ ಮೇಲೆ ಒತ್ತಿದರೆ, ಸೀದಾ ಅವನ ಚಾಟ್ ಬಾಕ್ಸ್ ಓಪನ್ ಆಗುತ್ತದೆ. ಅಲ್ಲಿಗೆ, ನೀವು ಅವನ ಫೋನ್ ನಂಬರ್ ಸೇವ್ ಮಾಡುವ ಅಗತ್ಯ ಬೀಳುವುದಿಲ್ಲ!

ಆಗ ನಮ್ಮ ವಾಟ್ಸ್ಆ್ಯಪ್ನಲ್ಲಿ ಪರಸ್ಪರರ ಮಾಹಿತಿ ಸ್ಟೇಟಸ್ ಮೂಲಕ ತಿಳಿಯುವುದಿಲ್ಲ. ಜೊತೆಗೆ, ಇತರ ಅಪ್ಲಿಕೇಷನ್ಗಳೂ ಕೂಡ ನಮ್ಮ ಕಾಂಟ್ಯಾಕ್ಟ್ ಲಿಸ್ಟ್ ಮಾತ್ರ ಓದುವುದರಿಂದ ಈ ಸೇವ್ ಮಾಡಿಲ್ಲದ ಫೋನ್ ನಂಬರ್ ಜೊತೆಗೆ ನಾವು ಮಾಡಿರುವ ಯಾವ ಸಂವಹನವೂ ಡಿಜಿಟಲ್ ಸಂಬಂಧವನ್ನು ಬೆಸೆಯುವುದಿಲ್ಲ. ಇದೂ ಅಲ್ಲದೆ, ಇನ್ನೊಂದು ಆಯ್ಕೆಯೂ ವಾಟ್ಸ್ಆ್ಯಪ್ನಲ್ಲಿದೆ. ನಾವು ಸ್ಟೇಟಸ್ ಹಾಕುವಾಗಲೇ ಆ ಸ್ಟೇಟಸ್ ಯಾರಿಗೆ ಕಾಣಿಸುವಂತಿರಬಹುದು ಎಂದು ಎಕ್ಸ್ಕ್ಲೂಶನ್ ಲಿಸ್ಟ್ ಮಾಡಬಹುದು ಅಥವಾ ಯಾರಿಗೆ ಮಾತ್ರ ಕಾಣಿಸಬೇಕು ಅಂತಲೂ ಕಾಂಟ್ಯಾಕ್ಟ್ಗಳನ್ನು ಸೆಲೆಕ್ಟ್ ಮಾಡಬಹುದು. ಇವೆರಡೂ ಫೀಚರ್ಗಳು ನಮಗೆ ಬೇಡದವರನ್ನು ದೂರವಿಡುವುದಿಲ್ಲ. ನಮಗೆ ಯಾರದೋ ಮೇಲೆ ಸಿಟ್ಟಿದ್ದು, ಅವರು ನಮ್ಮ ಸ್ಟೇಟಸ್ ನೋಡಬಾರದು ಎಂದಾದರೆ ಅವರನ್ನು ಹೊರಗಿಟ್ಟು ಸ್ಟೇಟಸ್ ಹಾಕಬಹುದಷ್ಟೇ! ಆದರೆ, ನಮಗೆ ಗೊತ್ತಿಲ್ಲದೇ ಅಥವಾ ಪ್ರಜ್ಞೆಯಿಲ್ಲದೇ ನಮ್ಮ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಬಂದು ಕೂತಿರುವವರನ್ನು ಈ ಫೀಚರ್ನಿಂದ ಹೊರಹಾಕುವುದಕ್ಕೆ ಆಗುವುದಿಲ್ಲ. ಹೀಗಾಗಿ, ಇದಕ್ಕೆ ಅತ್ಯುತ್ತಮ ಪರಿಹಾರ ಅಂದರೆ, ಕಾಂಟ್ಯಾಕ್ಟ್ ಸೇವ್ ಮಾಡುವಾಗಲೇ ಬೇಕಾದ ಎಚ್ಚರ ವಹಿಸುವುದು! ಅಂದ ಹಾಗೆ, ನೀವು ಎಷ್ಟೇ ಆತ್ಮೀಯವಾಗಿ ಮಾತನಾಡಿದರೂ, ಆ ಕಡೆ ಮಾತನಾಡಿದವನು ನಿಮ್ಮ ಬಳಿ ‘ವಾಟ್ಸ್ಆ್ಯಪ್ನಲ್ಲಿ ಹಾಯ್ ಅಂತ ಕಳಿಸು...’ ಅಂದರೆ, ಅವ ನಿಮ್ಮನ್ನು ಎಷ್ಟು ನಂಬಿದ್ದಾನೆ ಅಂತಲೂ ಇದರಿಂದ ಅರ್ಥ ಮಾಡಿಕೊಳ್ಳಬಹುದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.