ಯುವತಿಯರ ಮತ್ತು ಮಹಿಳಾ ಸುರಕ್ಷತೆಗೆ ಎಷ್ಟೇ ಕ್ರಮ ಕೈಗೊಂಡರೂ ಸಾಲದು ಎನ್ನುವ ಪರಿಸ್ಥಿತಿ ಈಗಿನದ್ದು. ಇಂತಹ ಸನ್ನಿವೇಶದಲ್ಲಿ ಅವರ ಸುರಕ್ಷತೆಯ ದೃಷ್ಟಿಯಿಂದ ವಿಜಯವಾಡ ಮೂಲದ ಯುವ ಸಂಶೋಧಕರಿಬ್ಬರು ಉಪಕರಣ ಆಧರಿತ ಶೂ ಮಾದರಿ ಅಭಿವೃದ್ಧಿಪಡಿಸಿದ್ದಾರೆ. ಅದಕ್ಕೆ ಅವರಿಟ್ಟ ಹೆಸರೇ ‘ಟ್ರ್ಯಾಕ್ ಹರ್ ಶೂ’. ತೊಂದರೆಯಲ್ಲಿದ್ದಾಗ ಇವು ಮಹಿಳೆಯರ ನೆರವಿಗೆ ಬರಲಿದ್ದು, ಕ್ಷಣಾರ್ಧದಲ್ಲಿ ಸಂಬಂಧಪಟ್ಟವರ ಮೊಬೈಲ್ಗೆ ಅಲರ್ಟ್ ತಲುಪಿಸಿ ರಕ್ಷಣೆಗೆ ಬರುವಂತೆ ಕೋರಬಹುದು.

‘ಟ್ರ್ಯಾಕ್ ಹರ್ ಶೂ’ ಎನ್ನುವ ಶೂ ಆಧರಿತ ಸಾಧನ ಅಭಿವೃದ್ಧಿಪಡಿಸಿದವರು ವಿ. ಧನುಷ್ ಮತ್ತು ಇ. ಜಾನ್ ವೆಸ್ಲಿ. ಅಪಾಯದ ಸಮಯದಲ್ಲಿ ಮತ್ತು ತುರ್ತು ಸಂದರ್ಭದಲ್ಲಿ ಮಹಿಳೆಯರ ನೆರವಿಗೆ ಧಾವಿಸುವ ಈ ಸಾಧನವು ಏಕೀಕೃತ ತಂತ್ರಜ್ಞಾನದ ಸೆನ್ಸಾರ್ ನೆರವಿನೊಂದಿಗೆ ಕೆಲಸ ಮಾಡಲಿದೆ. ಶೂ ಸೇರಿದಂತೆ ಎಲ್ಲ ಮಾದರಿಯ ಪಾದರಕ್ಷೆಗಳಲ್ಲೂ ಇದನ್ನು ಅಳವಡಿಸಬಹುದಾಗಿದ್ದು, ಸಂಶೋಧಕರ ಆದ್ಯತೆ ಶೂಗಳಿಗೆ.

ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯ ಭಾಗವಾಗಿ ಈಚೆಗೆ ವಿಜಯವಾಡದಲ್ಲಿ ಆಯೋಜಿಸಿದ್ದ ‘ಟೆಕ್ಟ್ರಿಕ್ಸ್ 2026’ ಸ್ಟಾರ್ಟ್ಅಪ್ ಎಕ್ಸ್ಪೋದಲ್ಲಿ ಈ ಡಿವೈಸ್ ಗಮನಸೆಳೆದಿದ್ದು, ಇದು ಸಣ್ಣ ಬ್ಯಾಟರಿ ಸಹಾಯದಿಂದ ಕಾರ್ಯನಿರ್ವಹಿಸಲಿದೆ.

ಹೇಗೆ ಕೆಲಸ ಮಾಡಲಿದೆ?

ಇದೊಂದು ಸ್ಮಾರ್ಟ್ ಡಿವೈಸ್. ಶೂಗಳಲ್ಲಿ ಸುಲಭವಾಗಿ ಅಳವಡಿಸಬಹುದಾದ ಉಪಕರಣ. ಈ ಸಾಧನ ಅವಳಡಿಸಿದ ಶೂ ಧರಿಸಿ ಮಹಿಳೆಯರು ಸುಲಭವಾಗಿ ಓಡಾಡಬಹುದು. ಶೂ ಧರಿಸಿದಾಗ ಸಾಧನವು ಕಿರಿಕಿರಿ ಉಂಟುಮಾಡದು. ಆಪ್ತರಾದವರ, ತಂದೆ–ತಾಯಿಯ, ಗೆಳೆಯರ, ತುರ್ತಾಗಿ ನೆರವಿಗೆ ಧಾವಿಸುವವರ ಮೊಬೈಲ್ ನಂಬರ್ಗಳನ್ನು ಸೇವ್ ಮಾಡಬಹುದು.

ತೊಂದರೆಯಲ್ಲಿ ಸಿಲುಕಿದಾಗ ಈ ಶೂಗಳನ್ನು ಬಲವಾಗಿ ಎರಡು ಬಾರಿ ನೆಲಕ್ಕೆ ಒತ್ತಿದರೆ ಸಾಕು, ನೀವು ಡಿವೈಸ್ನಲ್ಲಿ ಸೇವ್ ಮಾಡಿಟ್ಟ ಮೊಬೈಲ್ ಸಂಖ್ಯೆಗಳಲ್ಲಿ ತಕ್ಷಣವೇ ಎಚ್ಚರಿಕೆ ಸಂದೇಶಗಳು ತಲುಪುತ್ತವೆ. ಅಲರ್ಟ್ನಿಂದ ಎಚ್ಚೆತ್ತುಕೊಂಡು ಸಹಾಯಕ್ಕೆ ಧಾವಿಸಬಹುದು. ಈ ಡಿವೈಸ್ನಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಸಹಾಯವಾಣಿ ಸಂಖ್ಯೆ ಸೇರಿದಂತೆ ಅಗತ್ಯವಿರುವವರ ನಂಬರ್ಗಳನ್ನು ಮೊದಲೇ ಪ್ರೋಗ್ರಾಮಿಂಗ್ ಮಾಡಬಹುದು.

ಶೂ ನೆಲಕ್ಕೆ ಒತ್ತಿದರೆ, ಡಿವೈಸ್ನಲ್ಲಿನ ಸಂವೇದಕವು ತಕ್ಷಣವೇ ಜಾಗೃತಗೊಳ್ಳುತ್ತದೆ. ತುರ್ತಾಗಿ ಸಂದೇಶ ಹೋಗುವುದರ ಜೊತೆಗೆ ಮಹಿಳೆ ಇರುವ ಜಾಗ ಮತ್ತು ಅವರ ಟ್ರ್ಯಾಕಿಂಗ್ ವಿವರಗಳನ್ನೂ ತಕ್ಷಣವೇ ರವಾನಿಸುತ್ತದೆ. ಈ ತ್ವರಿತ ಪ್ರತಿಕ್ರಿಯೆಯ ವ್ಯವಸ್ಥೆಯು ತುರ್ತು ಸಂದರ್ಭಗಳಲ್ಲಿ ಆಪತ್ಬಾಂಧವನಂತೆ ನೆರವಾಗುವುದರ ಜೊತೆಗೆ, ನೆರವಿಗೆ ಕೈಚಾಚುವ ಸಮಯವನ್ನು ಕಡಿಮೆ ಮಾಡುತ್ತದೆ. ಕುಟುಂಬ ಸದಸ್ಯರು ಅಥವಾ ಅಧಿಕಾರಿಗಳಿಗೆ ಸಂತ್ರಸ್ತರು ಇರುವ ಸ್ಥಳವನ್ನು ಶೀಘ್ರ ಪತ್ತೆಹಚ್ಚಲು ನೆರವಾಗುತ್ತದೆ. ಒಟ್ಟಾರೆಯಾಗಿ ಮಹಿಳೆಯರ ಸುರಕ್ಷತೆ ಹೆಚ್ಚಿಸುವಲ್ಲಿ ಈ ಸಾಧನ ಪರಿಣಾಮಕಾರಿ. ಈ ಡಿವೈಸ್ ಪ್ರಾಯೋಗಿಕ ಮಾದರಿಯಾಗಿದ್ದು, ಇದಿನ್ನೂ ಮಾರುಕಟ್ಟೆಗೆ ಬರಲು ತಡವಾಗಬಹುದು.

(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.