ಪ್ರಸ್ತುತ ದಿನಗಳಲ್ಲಿ ಇಂಟರ್ನೆಟ್ ಪ್ರತಿಯೊಬ್ಬರ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಂಟರ್ನೆಟ್ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ. ಬಹುತೇಕರು ತಮ್ಮ ಮನೆಗಳಿಗೆ ವೈ–ಫೈ ಅಳವಡಿಸಿಕೊಂಡಿರುತ್ತಾರೆ. ಆದರೆ, ಕೆಲವೊಮ್ಮೆ ಮನೆಗೆ ಅಳವಡಿಸಿರುವ ವೈ–ಫೈ ನಿಧಾನವಾಗುತ್ತದೆ. ಆ ಸಂದರ್ಭದಲ್ಲಿ ವೇಗ ಹೆಚ್ಚಿಸಲು ಕೆಲವು ಸರಳ ಸಲಹೆಗಳನ್ನು ನೋಡೋಣ.

ವೈ–ಫೈ ನಿಧಾನವಾಗಿ ಕೆಲಸ ಮಾಡಲು ಅನೇಕ ಕಾರಣಗಳಿವೆ. ವೈ–ಫೈ ಇರುವ ಸ್ಥಳ ಹಾಗೂ ಬಳಸುವ ಕ್ರಮ ಕೂಡ ಇದಕ್ಕೆ ಕಾರಣವಾಗುತ್ತದೆ. ಹಾಗಾದರೆ ನಿಮ್ಮ ಮನೆಯ ವೈ–ಫೈ ವೇಗವಾಗಿ ಕೆಲಸ ಮಾಡುವಂತೆ ಮಾಡುವುದು ಹೇಗೆ ಎಂಬ ಟಿಪ್ಸ್ ಇಲ್ಲಿದೆ.

ರೂಟರ್ ಸ್ಥಾನ ಬದಲಿಸಿ

ಮನೆಗಳಲ್ಲಿ ಅನಿಯಮಿತ ಇಂಟರ್ನೆಟ್ ಆಗಿ ವೈ–ಫೈ ಅನ್ನು ಬಳಸಲಾಗುತ್ತದೆ. ಟಿವಿ ಹಿಂಭಾಗ, ಕಂಪ್ಯೂಟರ್ ಬಳಿ ಹೀಗೆ ಟೇಬಲ್ ಮೇಲೆ ರೂಟರ್ ಅನ್ನು ಇಡಲಾಗುತ್ತದೆ. ಹೀಗೆ ಮಾಡುವುದರಿಂದ ಇಂಟರ್ನೆಟ್ ವೇಗ ತ್ವರಿತವಾಗಿ ಕಡಿಮೆಯಾಗುತ್ತದೆ. ಅದಕ್ಕಾಗಿ ಸಾಧ್ಯವಾದಷ್ಟು ತೆರೆದ ಹಾಗೂ ಎತ್ತರದ ಸ್ಥಳದಲ್ಲಿ ವೈ–ಫೈನ ರೂಟರ್ ಇಡಿ. ಇದರಿಂದ ವೇಗವಾದ ಇಂಟರ್ನೆಟ್ ಪಡೆಯಬಹುದು.

ಎಲೆಕ್ಟ್ರಾನಿಕ್ ವಸ್ತುಗಳಿಂದ ದೂರವಿಡಿ

ಮನೆಯಲ್ಲಿ ರೇಫ್ರಿಜರೇಟರ್ನಿಂದ ಹಿಡಿದು ವಾಶಿಂಗ್ ಮಷಿನ್ಗಳವರೆಗೆ ಸಾಕಷ್ಟು ಗೃಹ ಬಳಕೆಯ ಎಲೆಕ್ಟ್ರಾನಿಕ್ ವಸ್ತುಗಳಿರುತ್ತವೆ. ಇವು ವೈ–ಫೈ ವಿರೋಧಿಯಾಗಿವೆ. ಈ ಎಲೆಕ್ಟ್ರಾನಿಕ್ ವಸ್ತುಗಳಿಂದ ವೈ–ಫೈ ರೂಟರ್ಗೆ ಸಿಗಬೇಕಾದ ಸಿಗ್ನಲ್ಗಳು ಸಿಗುವುದಿಲ್ಲ. ಇದರಿಂದ ಸಾಮಾನ್ಯವಾಗಿ ವೇಗ ಕಡಿಮೆಯಾಗುತ್ತದೆ. ಅದ್ದರಿಂದ ಈ ವಸ್ತುಗಳಿಂದ ರೂಟರ್ ಅನ್ನು ದೂರ ಇರಿಸಿ.

ಅನ್ನೌನ್ ಡಿವೈಸ್ ಲಾಗೋಟ್ ಮಾಡಿ

ನಿಮ್ಮ ವೈ–ಫೈಗೆ ಬೇರೆ ಯಾವುದಾದರೂ ಡಿವೈಸ್ ಕನೆಕ್ಟ್ ಆಗಿದ್ದರೆ, ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ. ಆಗಾಗಿ ನಿಮ್ಮ ವೈ–ಫೈ ಅಪ್ಲಿಕೇಶನ್ ತೆರೆದು ಅಲ್ಲಿ ನಿಮಗೆ ಗೊತ್ತಿಲ್ಲದೇ ಕನೆಕ್ಟ್ ಆಗಿರುವ ಡಿವೈಸ್ಗಳನ್ನು ಲಾಗ್ ಔಟ್ ಮಾಡಿ. ನಂತರ ನಿಮ್ಮ ವೈ–ಫೈ ಫಾಸ್ವರ್ಡ್ ಮರುಹೊಂದಿಸಿ, ಇದರಿಂದ ನಿಮ್ಮ ವೈ–ಫೈ ವೇಗ ಹೆಚ್ಚಿಸಬಹುದು.

2.4GHz ಇಂದ 5GHzಗೆ ಬದಲಿಸಿ

ನಿಮ್ಮ ವೈ–ಫೈನ ಸೆಟ್ಟಿಂಗ್ಸ್ಗೆ ಹೋಗಿ 2.4ಜಿ ಇಂದ 5ಜಿಗೆ ವೈ–ಫೈ ಆನ್ ಮಾಡಿ. ಇದರಿಂದ ನಿಮ್ಮ ಇಂಟರ್ನೆಟ್ ವೇಗ ಹೆಚ್ಚಾಗುತ್ತದೆ.

ಫರ್ಮ್ವೇರ್ ಅಪ್ಡೇಟ್

ನಿಮ್ಮ ಮೊಬೈಲ್ನಂತೆಯೇ ರೂಟರ್ ಅನ್ನು ಆಗಾಗ ಅಪ್ಡೇಟ್ ಮಾಡಿರಿ. ರೂಟರ್ ಸೆಟ್ಟಿಂಗ್ಗಳಲ್ಲಿ ಫರ್ಮ್ವೇರ್ ಅನ್ನು ಅಪ್ಡೇಟ್ ಮಾಡಿ. ಇದರಿಂದ ಇಂಟರ್ನೆಟ್ ವೇಗ ತ್ವರಿತವಾಗಿ ಹೆಚ್ಚಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.