ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019ರಿಂದ ಕೆಲವು ಫೋನ್‍ಗಳಲ್ಲಿ ಸ್ಥಗಿತವಾಗಲಿದೆ ವಾಟ್ಸ್ಆ್ಯಪ್

Last Updated 31 ಡಿಸೆಂಬರ್ 2018, 13:13 IST
ಅಕ್ಷರ ಗಾತ್ರ

ಸ್ಯಾನ್ ಫ್ರಾನ್ಸಿಸ್ಕೊ: 2019 ಜನವರಿ 1ರಿಂದ ಕೆಲವೊಂದು ಫೋನ್‍ಗಳಲ್ಲಿ ವಾಟ್ಸ್ಆ್ಯಪ್ ಸ್ಥಗಿತವಾಗಿಲಿದೆ.iOS 7, ಅಂಡ್ರಾಯ್ಡ್ 2.3.7 ಮತ್ತು ನೋಕಿಯಾ ಸರಣಿ 40 (S 40) ಫೋನ್‍ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯ ನಿಲ್ಲಿಸಲಿದೆ.

ನೋಕಿಯಾ ಸೀರಿಸ್ 40 ಫೋನ್‍ ಬಳಕೆದಾರರು ಹೊಸದಾಗಿ ವಾಟ್ಸ್ಆ್ಯಪ್ ಖಾತೆ ತೆರೆಯಲು ಸಾಧ್ಯವಿಲ್ಲ.ಈ ಫೋನ್‍ನಲ್ಲಿರುವ ಕೆಲವು ಫೀಚರ್‌ಗಳು ಕಾರ್ಯವೆಸಗುವುದಿಲ್ಲ.
ನೋಕಿಯಾ ಎಸ್ 40 ಫೋನ್‍ನಲ್ಲಿ ಡಿಸೆಂಬರ್ 31 2018ರ ವರೆಗೆ, ಅಂಡ್ರಾಯ್ಡ್ ಆವೃತ್ತಿ 2.3.7 ಫೋನ್‍ನಲ್ಲಿ ಫೆಬ್ರುವರಿ 2020 ಮತ್ತು iOS7 ಮತ್ತು ಇದಕ್ಕಿಂತ ಹಳೆಯ ಆವೃತ್ತಿ‍ಗಳಲ್ಲಿ ಫೆಬ್ರುವರಿ 1, 2020ರ ವರೆಗೆ ಮಾತ್ರೆ ವಾಟ್ಸ್ಆ್ಯಪ್ ಕಾರ್ಯವೆಸಗಲಿದೆ.
ನೋಕಿಯಾ ಎಸ್‍40 ಆಪರೇಟಿಂಗ್ ಸಿಸ್ಟಂ ಇರುವ ಫೋನ್‍ಗಳು ಇವು- ನೋಕಿಯಾ ಆಶಾ 201, ನೋಕಿಯಾ ಆಶಾ 205, ನೋಕಿಯಾ ಆಶಾ 210, ನೋಕಿಯಾ ಆಶಾ 230, ನೋಕಿಯಾ ಆಶಾ 500, ನೋಕಿಯಾ ಆಶಾ 501, ನೋಕಿಯಾ ಆಶಾ 502, ನೋಕಿಯಾ ಆಶಾ 503, ನೋಕಿಯಾ 206, ನೋಕಿಯಾ 208, ನೋಕಿಯಾ 301, ನೋಕಿಯಾ 515.

ನಾವು 2009ರಲ್ಲಿ ನಾವು ವಾಟ್ಸ್ಆ್ಯಪ್ ಆರಂಭಮಾಡಿದಾಗ ಜನರ ಮೊಬೈಲ್ ಬಳಕೆಯ ರೀತಿಯೇ ಬದಲಾಗಿತ್ತು.ಆ್ಯಪಲ್ ಸ್ಟೋರ್ ಆರಂಭವಾಗಿ ಆಗ ಒಂದು ತಿಂಗಳು ಆಗಿತ್ತಷ್ಟೇ. ಆಗ ಮಾರಾಟವಾಗುತ್ತಿದ್ದ ಶೇ. 70ರಷ್ಟು ಸ್ಮಾರ್ಟ್ ಫೋನ್ ಗಳಲ್ಲಿ ಬ್ಲಾಕ್ ಬರ್ರಿ ಮತ್ತು ನೋಕಿಯಾದ ಆಪರೇಟಿಂಗ್ ಸಿಸ್ಟಂ ಇರುತ್ತಿತ್ತು. ಇದೀಗ ಮಾರಾಟವಾಗುವ ಶೇ.95 ಸ್ಮಾರ್ಟ್ ಫೋನ್‍ಗಳಲ್ಲಿ ಗೂಗಲ್, ಆ್ಯಪಲ್ ಮತ್ತು ಮೈಕ್ರೊಸಾಫ್ಟ್ ಆಪರೇಟಿಂಗ್ ಸಿಸ್ಟಂ ಹೊಂದಿವೆ ಎಂದು ವಾಟ್ಸ್ಆ್ಯಪ್‍ನ ಬ್ಲಾಗ್‍ನಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT