ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಲಿಸಿರಿ’ ಪುಸ್ತಕ ಪ್ರೇಮಿಗಳೇ

ಆ್ಯಪ್ ಪರಿಚಯ
Last Updated 5 ಜೂನ್ 2019, 19:31 IST
ಅಕ್ಷರ ಗಾತ್ರ

ದಿನ ನಿತ್ಯದ ಓಡಾಟದ ನಡುವೆ ಓದುವುದಕ್ಕೆ ಸಮಯ ಎಲ್ಲಿದೆ? ಎಂದು ಹೇಳುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ‘ಕೆಲವು ವರ್ಷಗಳ ಹಿಂದೆ ಅದೆಷ್ಟು ಪುಸ್ತಕ ಓದುತ್ತಿದ್ದೆವು’ ಎಂದು ಗತಕಾಲವನ್ನು ಮೆಲುಕು ಹಾಕುವವರು ಕೆಲವರಾದರೆ ಇನ್ನೂಕೆಲವರು ಸಿಕ್ಕ ಸಮಯದಲ್ಲಿ ಇ- ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಪುಸ್ತಕದ ಪುಟಗಳನ್ನು ತಿರುವಿ ಹಾಕುತ್ತಾ ಓದುವ ಖುಷಿಯೇ ಬೇರೆ ಎನ್ನುವವರ ನಡುವೆಯೇ ಮೊಬೈಲ್‌ನಲ್ಲಿಯೇ ಪುಸ್ತಕಗಳನ್ನು ಓದುವವರ ಸಂಖ್ಯೆಯೂ ಹೆಚ್ಚುತ್ತಿದೆ. ಪುಸ್ತಕಗಳನ್ನು ಓದುವುದಕ್ಕೆ ಸಮಯವಿಲ್ಲವೆ? ಹಾಗಾದರೆ ಆಡಿಯೊ ಬುಕ್‌ ಇದೆಯಲ್ಲಾ ಎಂಬ ಉತ್ತರವೂ ಸಿದ್ಧ. ಸರಿ, ಆಡಿಯೊ ಪುಸ್ತಕಗಳು ಇಂಗ್ಲಿಷ್‌ನಲ್ಲಿ ಲಭ್ಯ. ಕನ್ನಡದಲ್ಲಿ ಆಡಿಯೊ ಪುಸ್ತಕಗಳಿವೆಯೇ?ಹೀಗೊಂದು ಪ್ರಶ್ನೆ ನಿಮ್ಮದಾಗಿದ್ದರೆ ಅದಕ್ಕೆ ಉತ್ತರ ‘ಆಲಿಸಿರಿ’.

ಆಲಿಸಿರಿ– ಒಂದು ಮೊಬೈಲ್ ಅಪ್ಲಿಕೇಷನ್‌ (ಆ್ಯಪ್). ಆಲಿಸಿರಿ ಮೀಡಿಯಾ ತಯಾರಿಸಿರುವಂಥದ್ದು. ಇದು ಕನ್ನಡ ಓದುಗರಿಗಾಗಿ ಮೊದಲ ಬಾರಿಗೆ ಕನ್ನಡದ ‘ಕೇಳುಪುಸ್ತಕ’ಗಳನ್ನು ಹೊರತಂದಿದೆ.

ಇದು ಅಂಡ್ರಾಯ್ಡ್ ಮತ್ತು ಐಓಎಸ್ (iOS)ನಲ್ಲಿ ಲಭ್ಯವಿದೆ. ಈ ಆ್ಯಪ್‌ನಲ್ಲಿ ಟಿ ಪಿ ಕೈಲಾಸಂ, ಕುಂ.ವೀರಭದ್ರಪ್ಪ, ಎಚ್‌.ಎಸ್‌.ಅನುಪಮಾ, ಕೊಡಗಿನ ಗೌರಮ್ಮ, ವಸುಂಧರಾ ಭೂಪತಿ, ನಿರಂಜನ, ಶ್ರೀನಿವಾಸ ವೈದ್ಯ, ಡಾ. ಕೆ. ಎನ್. ಗಣೇಶಯ್ಯ, ಅಮರೇಶ ನುಗಡೋಣಿ, ಡಾ. ಜಿ. ಎಸ್. ಸಿದ್ದಲಿಂಗಯ್ಯ, ಬೋಳುವಾರು ಮಹಮ್ಮದ್ ಕುಂಞಿ, ಡಾ.ರಂಜಾನ್ ದರ್ಗಾ, ಉಷಾ ಪಿ ರೈ, ಜಿಮ್ ಕಾರ್ಬೆಟ್, ಭಾರ್ಗವ ಎಚ್. ಕೆ. ಅವರಂತಹ ಖ್ಯಾತ ಸಾಹಿತಿಗಳ ಕೃತಿಗಳು, ಹನುಮಂತ ಹಾಲಗೇರಿ, ದೀಪಾ ಗಿರೀಶ್, ದಯಾನಂದ ಟಿ. ಕೆ. ಅವರಂತಹ ಯುವ ಬರಹಗಾರರ ಪುಸ್ತಕಗಳೂಇವೆ.

ಹಿಮಾಲಯದ ನರಭಕ್ಷಕರು, ಸಂಪೂರ್ಣ ಮಹಾಭಾರತ, ಪಿ. ಮುರುಗನ್ ಅವರ ಅರ್ಧನಾರೀಶ್ವರ, ಬೆಳೆಗೆರೆ ಕೃಷ್ಣಶಾಸ್ತ್ರಿ ಅವರ ಯೇಗ್ದಾಗೆಲ್ಲಾ ಐತೆ ಪುಸ್ತಕವೂ ಇಲ್ಲಿ ಲಭ್ಯ. ಮಕ್ಕಳ ಕತೆಗಳು, ಸಣ್ಣ ಕತೆಗಳು, ಕಾದಂಬರಿಗಳು, ಆರೋಗ್ಯ ವೈದ್ಯಕೀಯ ಬರಹಗಳು ಸೇರಿದಂತೆ ವಿವಿಧ ಪ್ರಕಾರಗಳ ಪುಸ್ತಕಗಳನ್ನೂ ಇಲ್ಲಿ ಆಲಿಸಬಹುದು. ಆಕಾಶವಾಣಿ ಮತ್ತು ರಂಗಭೂಮಿಯ ಅತ್ಯುತ್ತಮ ಕಲಾವಿದರು ಈ ಆ್ಯಪ್‌ಗಾಗಿ ದನಿ ನೀಡಿದ್ದಾರೆ.

ಡೌನ್‌ಲೋಡ್ ಮಾಡಿ

ಆಲಿಸಿರಿ ಆಡಿಯೊ ಪುಸ್ತಕಗಳ ಆ್ಯಪ್ ಡೌನ್‌ಲೋಡ್ ಮಾಡಲು (https://bit.ly/2Mt1h44) ಲಿಂಕ್ ಕ್ಲಿಕ್ ಮಾಡಿ. ಇಲ್ಲವೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ Aalisiri ಎಂದು ಹುಡುಕಿ.

ಡೌನ್‌ಲೋಡ್ ಮಾಡಿಕೊಂಡ ಮೇಲೆ ನಿಮಗಿಷ್ಟವಾದ ಪುಸ್ತಕಗಳನ್ನು ಖರೀದಿ ಮಾಡಬಹುದು. ಪುಸ್ತಕಗಳು ಓದುಗರಿಗೆ ಕೈಗೆಟಕುವ ಬೆಲೆಗಳಲ್ಲಿ, ಮುದ್ರಿತ ಪುಸ್ತಕಗಳಿಗಿಂತ ಕಡಿಮೆ ದರದಲ್ಲಿ ಲಭ್ಯವಿದೆ. ಪುಸ್ತಕಗಳನ್ನು ಖರೀದಿಸಿದ ಮೇಲೆ ಒಂದು Access Codeನ್ನು SMS ಮತ್ತು ಇಮೇಲ್ ಮುಖಾಂತರ ಕಳಿಸಲಾಗುತ್ತದೆ. ಈ ಕೋಡ್ ಅನ್ನು ಆ್ಯಪ್‌ನಲ್ಲಿ ನಮೂದಿಸಿದರೆ ಸಾಕು, ಪುಸ್ತಕಗಳು ಲಭ್ಯ. ಈ ಆ್ಯಪ್‌ನ ವಿಶೇಷತೆಯೆಂದರೆ ‘ಲಾಗಿನ್’ ಬೇಕಿಲ್ಲ.ಹಾಗಾಗಿ ಆ್ಯಪ್ ಬಳಕೆ ಸುಲಭ.

ನಿಮ್ಮ ಪುಸ್ತಕ ಪ್ರಕಟಿಸಿ

ಆ್ಯಪ್ ಮೆನು ಕ್ಲಿಕ್ ಮಾಡಿದ ನಂತರ ‘ನಿಮ್ಮ ಪುಸ್ತಕ ಪ್ರಕಟಿಸಿ’ ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ಪುಸ್ತಕ ಆಲಿಸಿರಿಯಲ್ಲಿ ಲಭ್ಯವಾಗುವಂತೆ ಮಾಡಲು, ಆಡಿಯೊ ಪುಸ್ತಕಗಳ ವಿತರಕರಾಗಲು ಮತ್ತು ಆಡಿಯೊ ಪುಸ್ತಕಗಳ ನಿರ್ಮಾಪಕರಾಗಿ ಹಣ ಸಂಪಾದಿಸುವ ಅವಕಾಶದ ಬಗ್ಗೆಯೂ ಇಲ್ಲಿ ಮಾಹಿತಿ ಇದೆ.

ಅಂಧ ಮಕ್ಕಳಿಗೆ ಉಚಿತ

ಆಲಿಸಿರಿ ತಂಡವು ಈ ಆಡಿಯೊ ಪುಸ್ತಕಗಳನ್ನು ಅಂಧ ಮಕ್ಕಳ ಶಾಲೆಗಳಿಗೆ ಮತ್ತು ಅಂಧರಿಗಾಗಿ ಕೆಲಸ ಮಾಡುವ ಸಂಘಸಂಸ್ಥೆಗಳಿಗೆ ಉಚಿತವಾಗಿ ನೀಡಲಿದೆ. ಶಾಲೆಗಳು, ಕಾಲೇಜುಗಳು ಮತ್ತು ಸಮಾಜ ಸೇವಾ ಸಂಘ ಸಂಸ್ಥೆಗಳಿಗೆ ಶೇ 60 ರಷ್ಟು ರಿಯಾಯಿತಿ ದರದಲ್ಲಿ ಕೊಡಲು ಉದ್ದೇಶಿಸಿದೆ. ಈ ಪ್ರಯೋಜನಗಳನ್ನು ಪಡೆಯಲಿಚ್ಛಿಸುವ ಸಂಸ್ಥೆಗಳು ಆಲಿಸಿರಿ ತಂಡವನ್ನು alisiriaudiobook@gmail.com ಮೂಲಕ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT