ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್ ದಾಳಿಗೆ ತುತ್ತಾದ ಏಸರ್: $50 ಮಿಲಿಯನ್ ಮೊತ್ತಕ್ಕೆ ಹ್ಯಾಕರ್ಸ್ ಬೇಡಿಕೆ

Last Updated 22 ಮಾರ್ಚ್ 2021, 8:27 IST
ಅಕ್ಷರ ಗಾತ್ರ

ಕಳೆದ ವರ್ಷದ ಜೂನ್‌ನಲ್ಲಿ ಅಮೆರಿಕದ ಪ್ರಸಿದ್ಧ ಸ್ಮಾರ್ಟ್‌ವಾಚ್ ಮತ್ತು ಜಿಪಿಎಸ್ ಉಪಕರಣ ತಯಾರಿಕ ಸಂಸ್ಥೆ ಗಾರ್ಮಿನ್ ಮೇಲೆ ವೆಸ್ಟೆಡ್‌ಲಾಕರ್ ಎಂಬ ರಾನ್ಸಮ್‌ವೇರ್ ದಾಳಿ ನಡೆದಿತ್ತು. ಈ ಬಾರಿ ಕಂಪ್ಯೂಟರ್ ತಯಾರಿಕ ಕಂಪನಿ ಏಸರ್, ಆರ್‌ಎವಿಲ್ ಎಂಬ ಸೈಬರ್ ದಾಳಿಗೆ ಸಿಲುಕಿದೆ.

ರಷ್ಯಾದ ಹ್ಯಾಕರ್ಸ್ ಗ್ಯಾಂಗ್ ಎವಿಲ್ ಕಾರ್ಪ್ ಗಾರ್ಮಿನ್ ಮೇಲೆ ಸೈಬರ್ ದಾಳಿ ನಡೆಸಿದ್ದು, ಗಾರ್ಮಿನ್ ಕಂಪನಿಯಿಂದ $10 ಮಿಲಿಯನ್ ಮೊತ್ತ ಪಡೆದ ಬಳಿಕವಷ್ಟೇ ಅವರಿಗೆ ಗಾರ್ಮಿನ್ ನಿಯಂತ್ರಣ ಬಿಟ್ಟುಕೊಟ್ಟಿತ್ತು.

ಬ್ಲೀಪಿಂಗ್ ಕಂಪ್ಯೂಟರ್ ವರದಿ ಪ್ರಕಾರ ತೈಪೆ ಮೂಲದ ಏಸರ್ ಕಂಪನಿ ಬಳಿ ಹ್ಯಾಕರ್ಸ್ $50 ಮಿಲಿಯನ್ (ಅಂದಾಜು ₹362 ಕೋಟಿ) ಮೊತ್ತ ಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಏಸರ್ ಮತ್ತು ಹ್ಯಾಕರ್ಸ್ ನಡುವಣ ಸಂಭಾಷಣೆಯನ್ನು ಕೂಡ ಬಿಡುಗಡೆ ಮಾಡಲಾಗಿದ್ದು, ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಆರ್‌ಎವಿಲ್ ಬೇಡಿಕೆ ಮಾಡಿರುವ ಮೊತ್ತ ಹ್ಯಾಕರ್ಸ್ ತಂಡಗಳಲ್ಲಿ ಈವರೆಗಿನ ಅತ್ಯಂತ ಹೆಚ್ಚಿನ ಮೊತ್ತವಾಗಿದೆ. ಈ ಕುರಿತು ಏಸರ್ ಅಧಿಕೃತ ಹೇಳಿಕೆ ಪಡೆಯಲು ಡೆಕ್ಕನ್ ಹೆರಾಲ್ಡ್ ಸಂಪರ್ಕಿಸಿದರೂ, ಪ್ರತಿಕ್ರಿಯೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT