ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿದ್ಯಾರ್ಥಿಗಳಿಗೆ ಎಐಎಸ್‌ಇಸಿಟಿ ಕೌಶಲ

Last Updated 18 ಡಿಸೆಂಬರ್ 2019, 19:40 IST
ಅಕ್ಷರ ಗಾತ್ರ

ರಾಷ್ಟ್ರೀಯ ಕೌಶಲಾಭಿವೃದ್ಧಿ ಯೋಜನೆ ಅಡಿಯಲ್ಲಿ ರಾಜ್ಯದ ವಿವಿಧ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿವಿಧ ವೃತ್ತಿಪರ ಕೌಶಗಳನ್ನು ಕಲಿಸಲು ಎಐಎಸ್‌ಇಸಿಟಿ ಸಂಸ್ಥೆ (ಆಲ್‌ ಇಂಡಿಯನ್ ಸೊಸೈಟಿ ಫಾರ್ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಂಪ್ಯೂಟರ್ ಟೆಕ್ನಾಲಜಿ) ಮುಂದಾಗಿದೆ. ಇದಕ್ಕಾಗಿ ರಾಜ್ಯದ 150ಕ್ಕೂ ಹೆಚ್ಚು ತರಬೇತುದಾರರನ್ನು ಮತ್ತು ನಾಲ್ವರು ಸಂಯೋಜಕರನ್ನು ನೇಮಕ ಮಾಡಿಕೊಂಡಿದೆ.

ಇವರಲ್ಲಿ 107 ಮಂದಿ ತರಬೇತುದಾರರು ವಾಹನ ಉದ್ದಿಮೆ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. 55 ಮಂದಿ ಸೌಂದರ್ಯ ಮತ್ತು ಆರೋಗ್ಯ ಸೇವಾ ವಲಯದ ಕೌಶಲಗಳನ್ನು ಕಲಿಸಲಿದ್ದಾರೆ.

ಎಂಟನೇ ತರಗತಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳೆಲ್ಲರೂ ಈ ಕೌಶಲಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅರ್ಹರು. ಯಶಸ್ವಿಯಾಗಿ ಭಾಗವಹಿಸಿದ ಕೌಶಲಗಳನ್ನು ರೂಢಿಸಿಕೊಂಡ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವೂ ದೊರೆಯುತ್ತದೆ.

ಈ ಯೋಜನೆಯನ್ನು ಸಂಸ್ಥೆ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರುತ್ತಿದೆ. ದೇಶದಾದ್ಯಂತ ವಿವಿಧ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಕೌಶಲಗಳನ್ನು ಕಲಿಸಲು 1,348 ತರಬೇತುದಾರರನ್ನು ನಿಯೋಜಿಸಿದೆ.

1985ರಲ್ಲಿ ಆರಂಭವಾದ ಎಐಎಸ್‌ಇಸಿಟಿ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೌಶಲಗಳನ್ನು ಕಲಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಈ ಮೂಲಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದಕ್ಕೆ, ಆರ್ಥಿಕ ಸ್ವಾವಲಂಬನೆ ಸಾಧಿಸುವುದಕ್ಕೆ, ನೆರವಾಗುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ, ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ, ದೀನ್‌ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ, ನ್ಯಾಷನಲ್ ಸ್ಕಿಲ್‌ ಕ್ವಾಲಿಫಿಕೇಶನ್ ಫ್ರೇಮ್‌ವರ್ಕ್‌, ನ್ಯಾಷನಲ್ ಅರ್ಬನ್ ಲೈವ್ಲಿಹುಡ್‌ ಮಿಶನ್‌, ರಾಜ್ಯ ಕೌಶಲಾಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲೂ ಸಂಸ್ಥೆ ಶ್ರಮಿಸುತ್ತಿದೆ.

124– ಕೌಶಲಾಭಿವೃದ್ಧಿ ಕಾರ್ಯಕ್ರಮಗಳಿಗಾಗಿ ರಾಜ್ಯದಲ್ಲಿ ಆಯ್ಕೆ ಮಾಡಿಕೊಂಡಿರುವ ಶಾಲೆಗಳು

162– ತರಬೇತಿ ನೀಡಲು ನಿಯೋಜಿಸಿರುವ ತರಬೇತುದಾರರು

50 ಸಾವಿರ– ಈವರೆಗೆ ಎಐಎಸ್‌ಇಸಿಟಿಯಿಂದ ತರಬೇತಿ ಪಡೆದು ಉದ್ಯೋಗ ಪಡೆದಿರುವ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT