ಫೋನ್ ಕಳೆದರೆ ಏನು ಮಾಡುವುದು?

ಭಾನುವಾರ, ಮಾರ್ಚ್ 24, 2019
27 °C

ಫೋನ್ ಕಳೆದರೆ ಏನು ಮಾಡುವುದು?

Published:
Updated:

ಮೊಬೈಲ್ ಫೋನ್‍ಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ನಮ್ಮ ಹೆಚ್ಚಿನ ಮಾಹಿತಿಗಳೆಲ್ಲವೂ ಫೋನ್‍ನಲ್ಲಿಯೇ ಸೇವ್ ಆಗಿರುತ್ತದೆ. ಹೀಗಿರುವಾಗ ಮೊಬೈಲ್ ಫೋನ್ ಕಳೆದು ಹೋದರೆ, ಏನು ಮಾಡುವುದು ?

ಈ ಪ್ರಶ್ನೆಗೆ ಸಾಮಾನ್ಯವಾಗಿ ‘ಮೊದಲು ಸಿಮ್ ಬ್ಲಾಕ್ ಮಾಡಿಸಿ’ ಎಂಬ ಸಲಹೆ ಬರುತ್ತದೆ. ನಿಜ, ಮೊದಲು ಮಾಡಬೇಕಾಗಿರುವುದು ಅದನ್ನೇ. ನಂತರ, ಕಳೆದು ಹೋಗಿರುವ ಫೋನ್ ಅಂಡ್ರಾಯ್ಡ್ ಫೋನ್‍ ಆಗಿದ್ದರೆ ಅದರಲ್ಲಿರುವ ಮಾಹಿತಿಗಳನ್ನೂ ನಾವು ಡಿಲೀಟ್ ಮಾಡಬಹುದು.

ನಿಮ್ಮಿಂದ ಕಳೆದು ಹೋಗಿರುವ ಫೋನ್ ಸ್ವಿಚ್ ಆನ್ ಆಗಿದ್ದು, ಅದರಲ್ಲಿ ಮೊಬೈಲ್ ಡೇಟಾ ಆನ್ ಆಗಿರಬೇಕು. ಲೊಕೇಶನ್ ಆನ್ ಆಗಿದ್ದು, ಗೂಗಲ್ ಖಾತೆಗೆ ಸೈನ್ ಆಗಿರಬೇಕು. ಹೀಗಿದ್ದರೆ ಮಾತ್ರ ನೀವು ಕುಳಿತಲ್ಲಿಂದ ನಿಮ್ಮ ಫೋನ್‍ನಲ್ಲಿರುವ ಮಾಹಿತಿ ಡಿಲೀಟ್ ಮಾಡಬಹುದು.

ಫೋನ್ ಲಾಕ್ ಮಾಡಬಹುದು, ಮಾಹಿತಿ ಡಿಲೀಟ್ ಮಾಡಬಹುದು
ಗೂಗಲ್‍ನಲ್ಲಿ Find My phone ಸರ್ಚ್ ಮಾಡಿ https://myaccount.google.com/intro/find-your-phone ಲಿಂಕ್ ಕ್ಲಿಕ್ಕಿಸಿ. Sign into Start ಕ್ಲಿಕ್ ಮಾಡಿ ಗೂಗಲ್ ಖಾತೆಗೆ ಸೈನ್ ಇನ್ ಆಗಿ.

ಖಾತೆಗೆ ಸೈನ್ ಇನ್ ಆಗುತ್ತಿದ್ದಂತೆ ಗೂಗಲ್ ಮ್ಯಾಪ್ ಮತ್ತು ಎಡಭಾಗದಲ್ಲಿ ನಿಮ್ಮ ಫೋನ್ ವಿವರಗಳು ಡಿಸ್‍ಪ್ಲೇ ಆಗುತ್ತದೆ. ಮ್ಯಾಪ್‍ನಲ್ಲಿ ತೋರಿಸುವ ಲೊಕೇಶನ್ ನಿಮ್ಮ ಫೋನ್ ಇರುವ ಖಚಿತ ಲೊಕೇಶನ್ ಆಗಿರದಿದ್ದರೂ, ಹತ್ತಿರದ ಲೊಕೇಶನ್‍ಗಳನ್ನು ತೋರಿಸುತ್ತದೆ.

Play Sound
ನಿಮ್ಮ ಮೊಬೈಲ್ ಸೈಲಂಟ್ ಮೋಡ್‍ನಲ್ಲಿ ಇದ್ದರೂ Play Sound ಕ್ಲಿಕ್ ಮಾಡಿದಾಗ 5 ನಿಮಿಷಗಳ ಕಾಲ ನಿಮ್ಮ ಮೊಬೈಲ್ ರಿಂಗಣಿಸುತ್ತದೆ.

Secure Device
ಇಲ್ಲಿ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಫೋನ್‍ ಲಾಕ್ ಮಾಡುವುದು ಮಾತ್ರವಲ್ಲದೆ ಗೂಗಲ್ ಖಾತೆಯಿಂದ ಸೈನ್ ಔಟ್ ಆಗಬಹುದು. ನಿಮ್ಮ ಫೋನ್‍ಗೆ ಲಾಕ್ ಇಲ್ಲದೇ ಇದ್ದರೂ ಲಾಕ್ ಸೆಟ್ ಮಾಡಬಹುದು.

Erase device
ಇದು ಕ್ಲಿಕ್ ಮಾಡುವ ಮೂಲಕ ನಮ್ಮ ಫೋನ್‍ನಲ್ಲಿರುವ ಎಲ್ಲ ಮಾಹಿತಿ ಡಿಲೀಟ್ ಮಾಡಬಹುದು. ಈ ರೀತಿ ಮಾಡಿದ ನಂತರ ನಿಮ್ಮ ಫೋನ್ ಲೊಕೇಶನ್ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ನೆನಪಿಡಿ ಫೋನ್ ಮೆಮೊರಿಯಲ್ಲಿ ಸೇವ್ ಮಾಡಿಟ್ಟಿರುವ ಮಾಹಿತಿ ಮಾತ್ರ ಡಿಲೀಟ್ ಆಗುತ್ತದೆ. ಎಸ್‍ಡಿ ಕಾರ್ಡ್ ನಲ್ಲಿರುವ ಮಾಹಿತಿ ಡಿಲೀಟ್ ಆಗಲಾರದು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !