ಫೋನ್ ಸುರಕ್ಷತೆಗೆ ಆ್ಯಂಟಿ ವೈರಸ್ ಹಾಕಿಕೊಳ್ಳಿ

ಸೋಮವಾರ, ಏಪ್ರಿಲ್ 22, 2019
33 °C

ಫೋನ್ ಸುರಕ್ಷತೆಗೆ ಆ್ಯಂಟಿ ವೈರಸ್ ಹಾಕಿಕೊಳ್ಳಿ

Published:
Updated:

ನಮ್ಮ ಎಲ್ಲಾ ಮಾಹಿತಿಗಳು ಫೋನ್‌ನಲ್ಲಿಯೇ ಸೇವ್ ಆಗಿರುವುದರಿಂದ ಫೋನನ್ನು ಸುರಕ್ಷಿತವಾಗಿರಿಸುವುದು ತುಂಬ ಮುಖ್ಯ. ಫೋನ್ ಸ್ಕ್ರೀನ್ ರಕ್ಷಣೆಗೆ ಸ್ಕ್ರೀನ್ ಗಾರ್ಡ್ ಹಾಕಿ ಸುರಕ್ಷಿತವಾಗಿರಿಸುವ ನಾವು ಫೋನ್‌ನಲ್ಲಿರುವ ಮಾಹಿತಿಗಳನ್ನು ಸುರಕ್ಷಿತವಾಗಿರಿಸಲು ಹೆಚ್ಚು ಗಮನ ಹರಿಸುವುದಿಲ್ಲ. ಫೋನ್ ಸುರಕ್ಷೆಗಾಗಿ  ಆ್ಯಂಟಿ ವೈರಸ್ ಇನ್ ಸ್ಟಾಲ್ ಮಾಡಿದರೆ ಒಳ್ಳೆಯದು. ಆದರೆ ಈ ಆಂಟಿ ವೈರಸ್‌ನಿಂದ ತುಂಬಾ ಸ್ಪೇಸ್ ಹೋಗುತ್ತದೆ ಎಂದು ನಿಮಗನಿಸಿದರೆ ಫೋನ್‌ನನ್ನು ಸುರಕ್ಷಿತವಾಗಿರಿಸುವ ವಿಧಾನಗಳನ್ನೂ ಅಳವಡಿಸಿಕೊಳ್ಳಿ.

ಆ್ಯಪ್ ಡೌನ್‍ಲೋಡ್ ಮಾಡುವ ಮುನ್ನ ಗಮನಿಸಿ: ಪ್ಲೇ ಸ್ಟೋರ್‌ನಿಂದ ಯಾವುದಾದರೂ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ಹುಷಾರಾಗಿರಿ. ಆ ಆ್ಯಪ್ ಸುರಕ್ಷಿತವಾಗಿದೆಯೇ ಎಂಬುದನ್ನು ಗಮನಿಸಿ. ಆ್ಯಪ್ ಬಗ್ಗೆ  ಇರುವ ಮಾಹಿತಿ, ಮೂಲ ಯಾವುದು ಮತ್ತು ಬಳಕೆದಾರರರು ಅಲ್ಲಿ ನೀಡಿರುವ ರಿವ್ಯೂ ಓದಿದ ನಂತರವೇ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

ಗೂಗಲ್ ಪ್ಲೇ ಪ್ರೊಟೆಕ್ಟ್‌: ಗೂಗಲ್ ಪ್ಲೇ ಪ್ರೊಟೆಕ್ಟ್ ಎನೇಬಲ್ ಮಾಡಿದರೆ ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ಯಾವುದೇ ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ಅದು ಆ್ಯಪ್‌ನ್ನು ಸ್ಕ್ಯಾನ್ ಮಾಡುತ್ತದೆ. ಇದನ್ನು ಎನೇಬಲ್ ಮಾಡಲು ಸೆಟ್ಟಿಂಗ್ಸ್ ಕ್ಲಿಕ್ ಮಾಡಿ ಸೆಕ್ಯುರಿಟಿ ಅಡಿಯಲ್ಲಿ ಪ್ಲೇ ಪ್ರೊಟೆಕ್ಟ್ ಕ್ಲಿಕ್ ಮಾಡಿ.

ಆ್ಯಪ್  ಪರ್ಮಿಷನ್ ಗಮನಿಸಿ: ಯಾವುದಾದರೊಂದು ಆ್ಯಪ್ ಡೌನ್ ಲೋಡ್ ಮಾಡಿದಾಗ ಆ ಆ್ಯಪ್ ನಿಮ್ಮ ಮಾಹಿತಿಗಳನ್ನು ಪಡೆಯಲು ಅನುಮತಿ ಕೇಳುತ್ತದೆ. ಅದು ಅಗತ್ಯ ಎಂದು ಅನಿಸಿದರೆ ಮಾತ್ರ ಅನುಮತಿ ನೀಡಿ. ಯಾವುದಾದರೂ ಆ್ಯಪ್ ಸಂದೇಹಾಸ್ಪದವಾಗಿದ್ದರೆ ಅನುಮತಿ ನಿರಾಕರಿಸಿ.

ಲಿಂಕ್ ಕ್ಲಿಕ್ ಮಾಡುವ ಮುನ್ನ ಯೋಚಿಸಿ: ಯಾವತ್ತೂ ಸಂದೇಹಾಸ್ಪದ ಲಿಂಕ್ ಅಥವಾ ಮೇಲ್ ಕ್ಲಿಕ್ ಮಾಡಬೇಡಿ. ಈ ರೀತಿಯ ಲಿಂಕ್ ಗಳು ನಿಮ್ಮ ಫೋನ್‌ನಲ್ಲಿರುವ ಮಾಹಿತಿಗಳನ್ನು ಸೋರಿಕೆ/ಕದಿಯುವ ಸಾಧ್ಯತೆ ಇದೆ.

ಆಪರೇಟಿಂಗ್ ಸಿಸ್ಟಂ ಅಪ್ ಡೇಟ್ ಮಾಡಿಕೊಳ್ಳಿ: ನಿಮ್ಮ ಫೋನ್‌ನಲ್ಲಿರುವ ಆಪರೇಟಿಂಗ್ ಸಿಸ್ಟಂ ಹೊಸ ಆವೃತ್ತಿ ಬಂದಾಗ ಅದನ್ನು ಅಪ್‌ಡೇಟ್ ಮಾಡಿ.  ಆಪರೇಟಿಂಗ್ ಸಿಸ್ಟಂ ಅಟ್ ಡೇಟೆಡ್ ಆಗಿದ್ದರೆ ಮಾಲ್‌ವೇರ್ ದಾಳಿಯನ್ನು ತಡೆಯಲು ಸಾಧ್ಯವಾಗುವುದಿಲ್ಲ.

ಸಂದೇಹಾಸ್ಪದ ವೆಬ್ ಸೈಟ್‌ಗಳಿಗೆ ಭೇಟಿ ನೀಡಬೇಡಿ: ಆಕರ್ಷಿತವಾಗಿರುವ ಸಂದೇಹಾಸ್ಪದವಾಗಿರುವ ವೆಬ್ ಸೈಟ್‌ಗಳಿಗೆ  ಭೇಟಿ ನೀಡಬೇಡಿ.

ಆ್ಯಪ್ ಲಾಗ್ ಓಟ್ ಮಾಡಿ: ಫೋನ್‌ನಲ್ಲಿ ನೀವು ಗೂಗಲ್‌ ಮೇಲ್ ಫೇಸ್ ಬುಕ್ ಬಳಕೆ ಮಾಡುವಾಗ ಸದಾ ಲಾಗಿನ್ ಆಗಿರಬೇಡಿ. ಅಗತ್ಯ ಬಂದಾಗ ಲಾಗಿನ್ ಆಗಿ ಆಮೇಲೆ  ಲಾಗ್ ಔಟ್ ಆಗಿ. ನಿಮ್ಮ ಫೋನ್‌ನ್ನು ಬೇರೆಯವರ ಕೈಗೆ ನೀಡುವಾಗಲೂ ಈ ರೀತಿ ಮಾಡಿ. ರಿಪೇರಿಗೆ ನೀಡುವುದಾದರೆ ಎಲ್ಲ ಆ್ಯಪ್‌ಗಳಿಂದ ಲಾಗ್ ಔಟ್ ಆಗಿ. ಖಾಸಗಿ ಮಾಹಿತಿಗಳನ್ನು ಡಿಲೀಟ್ ಮಾಡಿದ ನಂತರವೇ ರಿಪೇರಿಗೆ ನೀಡಿ.

ವೈಫೈ ಕನೆಕ್ಟ್ ಮಾಡುವಾಗ ಗಮನಿಸಿ: ಫ್ರೀ ವೈಫೈ ಬಳಸುವಾಗ ಎಚ್ಚರವಿರಲಿ. ಪಾಸ್‌ವರ್ಡ್ ಇರುವ ವೈಫೈಯನ್ನೇ ಬಳಸಿ. ಫೋನ್‌ನಲ್ಲಿ ವೈಫೈ ಸೆಟ್ಟಿಂಗ್ ಆಫ್ ಮಾಡಿ, ಅಗತ್ಯವಿದ್ದಾಗ ಮಾತ್ರ ಎನೇಬಲ್ ಮಾಡಿ.

ಪಾಸ್ ವರ್ಡ್ ಸ್ಚ್ರಾಂಗ್ ಇರಲಿ: ಫೋನ್ ಪಾಸ್‌ವರ್ಡ್ ಮತ್ತು ನಿಮ್ಮ ಆ್ಯಪ್ ಪಾಸ್‌ವರ್ಡ್‌ಗಳು ಸ್ಟ್ರಾಂಗ್ ಇರಲಿ. ನೆನಪಿಡಲು ಸುಲಭ ಎಂದು ಎಲ್ಲ ಆ್ಯಪ್‍‌ಗಳಿಗೂ ಒಂದೇ ಪಾಸ್‌ವರ್ಡ್‌ ಕೊಡಬೇಡಿ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !