ಶುಕ್ರವಾರ, ನವೆಂಬರ್ 22, 2019
24 °C

ಕಟ್ಟಡ ಸಾಮಗ್ರಿ ಮಾಹಿತಿಗೆ ಆ್ಯಪ್

Published:
Updated:
ಆ್ಯಪ್ಟ್‌ ಪಾಯಿಂಟ್‌ ಆ್ಯಪ್‌

ನಿರ್ಮಾಣ ಕ್ಷೇತ್ರದ ಬೇಡಿಕೆಗೆ ಅನುಗುಣವಾಗಿ ‘ಆ್ಯಪ್ಟ್ ಪಾಯಿಂಟ್’ ಎನ್ನುವ ಆ್ಯಪ್ ಬಿಡುಗಡೆ ಆಗಿದೆ. ಈ ವಿಶೇಷ ಆ್ಯಪ್ ಮೂಲಕ ಕಟ್ಟಡ ನಿರ್ಮಾಣದ ಎಲ್ಲ ಮಾಹಿತಿ ಒಂದೇ ಡಿಜಿಟಲ್ ಸೂರಿನಡಿ ಪಡೆಯಬಹುದು.

ನಗರದಲ್ಲಿ ಸ್ವಂತ ಮನೆ ನಿರ್ಮಾಣ ಕನಸು ಹೊಂದಿರುವ ಜನರು ಯಾವ ವಸ್ತು ಎಷ್ಟು ಬೆಲೆಗೆ ಸಿಗುತ್ತದೆ ಎಂಬುದನ್ನು ಈ ಆ್ಯಪ್‌ ಮೂಲಕ ತಿಳಿಯಬಹುದು. ಗ್ರಾಹಕ ಮತ್ತು ಉದ್ದಿಮೆಗಳ ಮುಖಾಮುಖಿ ಆಗಿ ಈ ಆ್ಯಪ್ ಕಾರ್ಯ ನಿರ್ವಹಿಸುತ್ತದೆ. 

ಗ್ರಾಹಕರು ತಮ್ಮ ಯೋಜನೆಗೆ ಹೊಂದುವ ವಿನ್ಯಾಸಕಾರರು, ಕಂಟ್ರ್ಯಾಕ್ಟರ್, ಪ್ಲಂಬರ್ ಸಮಯಕ್ಕೆ ಸರಿಯಾಗಿ ಸಿಗದೆ ಪರದಾಡುತ್ತಾರೆ. ಈ ಸಮಸ್ಯೆಗೆ ಪರಿಹಾರವೇ ‘ಆ್ಯಪ್ಟ್ ಪಾಯಿಂಟ್’. ಮರಳು, ಸಿಮೆಂಟ್‌, ಕಬ್ಬಿಣದ ನಿಖರ ಬೆಲೆಯ ಮಾಹಿತಿ ಪಡೆಯಬಹುದು. 

ಈ ಆ್ಯಪ್‌ನ್ನು ನೋಂದಣಿ ಶುಲ್ಕ ರಹಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಆ್ಯಪ್ಟ್ ಪ್ರೊಕ್ಯೂರ್‌ಮೆಂಟ್ ಸ್ಟಾರ್ಟ್ ಅಪ್ ಕಂಪನಿ ಇದನ್ನು ಅಭಿವೃದ್ದಿಪಡಿಸಿದೆ.

ಪ್ರತಿಕ್ರಿಯಿಸಿ (+)