ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Apple Event: ಹೊಸ ಮ್ಯಾಕ್‌ಬುಕ್ ಬಿಡುಗಡೆಗೆ ಮತ್ತೊಂದು ಈವೆಂಟ್ ಘೋಷಿಸಿದ ಆ್ಯಪಲ್

Last Updated 13 ಅಕ್ಟೋಬರ್ 2021, 6:03 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಸೆಪ್ಟೆಂಬರ್‌ನಲ್ಲಿ ವಿಶೇಷ ಈವೆಂಟ್ ಮೂಲಕ ಹೊಸ ಸರಣಿಯ ಐಫೋನ್‌ಗಳನ್ನು ಪರಿಚಯಿಸಿದ್ದ ಆ್ಯಪಲ್, ಈ ಬಾರಿ ಮತ್ತೊಂದು ಈವೆಂಟ್‌ಗೆ ಸಜ್ಜಾಗಿದೆ.

ಆ್ಯಪಲ್ ಈವೆಂಟ್, ಅಕ್ಟೋಬರ್ 18ರಂದು ನಡೆಯಲಿದೆ ಎಂದು ಕಂಪನಿ ಘೋಷಿಸಿದೆ. ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10:30ಕ್ಕೆ ಆ್ಯಪಲ್ ಈವೆಂಟ್ ಆರಂಭವಾಗಲಿದೆ.

ನೂತನ ಸರಣಿಯ ಆ್ಯಪಲ್ ಮ್ಯಾಕ್‌ಬುಕ್ ಮತ್ತು ಹೊಸ ಏರ್‌ಪಾಡ್ಸ್‌ಗಳನ್ನು ಆ್ಯಪಲ್ ಈ ಸಂದರ್ಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ನೂತನ ಆ್ಯಪಲ್ ಎಂ1ಎಕ್ಸ್ ಪ್ರೊಸೆಸರ್ ಸಹಿತ ಆ್ಯಪಲ್ ಮ್ಯಾಕ್‌ಬುಕ್ ಪ್ರೊ ಮತ್ತು ವೃತ್ತಿಪರರಿಗೆ ಬಳಕೆಗೆ ಸೂಕ್ತವಾದ ಆ್ಯಪಲ್ ಮ್ಯಾಕ್ ಮಿನಿ ಮಾದರಿಯನ್ನು ಪರಿಚಯಿಸುವ ಸಾಧ್ಯತೆಯಿದೆ.

ಕಳೆದ ತಿಂಗಳು ಈವೆಂಟ್ ಆಯೋಜಿಸಿದ್ದ ಆ್ಯಪಲ್, ಐಫೋನ್ 13 ಸರಣಿಯಲ್ಲಿ ನಾಲ್ಕು ಹೊಸ ಮಾದರಿಗಳನ್ನು ಪರಿಚಯಿಸಿತ್ತು. ಜತೆಗೆ ಆ್ಯಪಲ್ ವಾಚ್ ಸಿರೀಸ್ 7 ಕೂಡ ಬಿಡುಗಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT