ಗುರುವಾರ , ನವೆಂಬರ್ 14, 2019
27 °C

ಟ್ರಾಯ್‌ ವಿರುದ್ಧ ಕಾನೂನು ಸಮರಕ್ಕೆ ತಯಾರಿ ನಡೆಸಿದೆ ಆ್ಯಪಲ್‌

Published:
Updated:

‘ಡೂ ನಾಟ್ ಡಿಸ್ಟರ್ಬ್‌’ ಆ್ಯಪ್‌ ಕುರಿತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ರೂಪಿಸಿರುವ ನಿಯಮಾವಳಿಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಆ್ಯಪಲ್ ಕಂಪನಿ ತಯಾರಿ ನಡೆಸಿದೆ. 

ಈ ಆ್ಯಪ್‌ ಅಥವಾ ಇದರಲ್ಲಿನ ಆಯ್ಕೆಗಳನ್ನೆ ಹೋಲುವ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡದ ಹ್ಯಾಂಡ್‌ಸೆಟ್‌ಗಳನ್ನು 6 ತಿಂಗಳೊಳಗೆ ಶಟ್‌ಡೌನ್‌ ಮಾಡುವ ಅವಕಾಶವನ್ನು ಟೆಲಿಕಾಂ ಸೇವಾದಾತ ಕಂಪನಿಗಳಿಗೆ ನೀಡಲು ಟ್ರಾಯ್‌ ನಿರ್ಧರಿಸಿದೆ.

ಹ್ಯಾಂಡ್‌ಸೆಟ್‌ಗಳನ್ನು ನಿಯಂತ್ರಿಸುವ ಅಧಿಕಾರವನ್ನು ಟೆಲಿಕಾಂ ಕಂಪನಿಗಳಿಗೆ ನೀಡುವ ಮೂಲಕ ಟ್ರಾಯ್‌ ತನ್ನ ಅಧಿಕಾರ ವ್ಯಾಪ್ತಿ ಮೀರಿ ನಿಯಮಾವಳಿ ರೂಪಿಸಿದೆ ಎಂದು ಆ್ಯಪಲ್‌ ದೂರಿದೆ. 

ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಈಗಾಗಲೇ ಬಳಸುತ್ತಿರುವ ಹಲವಾರು ಆ್ಯಪ್‌ಗಳ ಆಯ್ಕೆಗಳೇ ‘ಡೂ ನಾಟ್ ಡಿಸ್ಟರ್ಬ್‌’(ಡಿಎನ್‌ಡಿ)ನಲ್ಲಿವೆ. ಅವುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದರಿಂದ ಬಳಕೆದಾರರ ಕರೆ, ಸಂದೇಶಗಳ ಮಾಹಿತಿ ಸೋರಿಕೆ ಆಗುವುದಿಲ್ಲ. ಬೇಡವಾದ ಕರೆ, ಸಂದೇಶಗಳನ್ನು ತಡೆಯಬಹುದು. ವ್ಯಕ್ತಿಯ ಖಾಸಗಿತನಕ್ಕೂ ದಕ್ಕೆ ಆಗುವುದಿಲ್ಲ ಎಂದು ಆ್ಯಪಲ್‌ ಕಂಪನಿ ಟ್ರಾಯ್‌ಗೆ ತಿಳಿಸಿದೆ. ಹಾಗೆಯೇ ಕಂಪನಿಯ ಖಾಸಗಿತನ ನೀತಿಯನ್ನು ಮುಂದಿರಿಸಿ ಡಿಎನ್‌ಡಿ ಅನ್ನು ತನ್ನ ಆ್ಯಪ್‌ ಸ್ಟೋರ್‌ನಲ್ಲಿ ಸೇರಿಸಲು ನಿರಾಕರಿಸಿದೆ. ಆ್ಯಪಲ್‌ನೊಂದಿಗೆ ಮೊಬೈಲ್‌ ತಯಾರಿಕೆಯ ಇತರೆ ಕಂಪನಿಗಳು ದನಿಗೂಡಿಸಿವೆ.

ಡಿಎನ್‌ಡಿ ಆ್ಯಪ್‌ ಅನ್ನು ಈಗಾಗಲೇ 1 ಲಕ್ಷದಷ್ಟು ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಇದಕ್ಕೆ ಸದ್ಯ 2.6 ರೇಟಿಂಗ್‌ ಇದೆ.

ಪ್ರತಿಕ್ರಿಯಿಸಿ (+)