ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Apple WWDC 2021: ಇಂದಿನಿಂದ ಆ್ಯಪಲ್ ಆನ್‌ಲೈನ್ ಸಮಾವೇಶ

Last Updated 7 ಜೂನ್ 2021, 6:50 IST
ಅಕ್ಷರ ಗಾತ್ರ

ಬೆಂಗಳೂರು: ಗ್ಯಾಜೆಟ್ ಲೋಕದ ಜನಪ್ರಿಯ ಕಂಪನಿ ಆ್ಯಪಲ್ ಸೋಮವಾರ ಜಾಗತಿಕ ಡೆವಲಪರ್‌ಗಳ ಸಮ್ಮೇಳನ ನಡೆಸುತ್ತಿದೆ. ಕಳೆದ ವರ್ಷದಂತೆ, ಈ ಬಾರಿಯೂ ವರ್ಚುವಲ್ ಸಮಾವೇಶ ನಡೆಯುತ್ತಿದೆ.

ಜಾಗತಿಕ ತಂತ್ರಜ್ಞರ ಸಮಾವೇಶದಲ್ಲಿ ಆ್ಯಪಲ್ ಹಲವು ಹೊಸ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ.

ನೂತನ ಐಓಎಸ್, ಮ್ಯಾಕ್ ಓಎಸ್, ಆ್ಯಪಲ್ ವಾಚ್ ಮತ್ತು ಐಪ್ಯಾಡ್ ಓಎಸ್‌ಗಳನ್ನು ಆ್ಯಪಲ್ ಈ ಸಂದರ್ಭದಲ್ಲಿ ಪರಿಚಯಿಸಲಿದೆ. ಅಲ್ಲದೆ, ಹೊಸ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವ ತಂತ್ರಜ್ಞರೊಂದಿಗೆ ಆ್ಯಪಲ್ ಸಂವಾದ ನಡೆಸಲಿದೆ.

ಉಳಿದಂತೆ, ನೂತನ ಸರಣಿಯ ಗ್ಯಾಜೆಟ್‌ಗಳನ್ನು ಕೂಡ ಆ್ಯಪಲ್ ಬಿಡುಗಡೆ ಮಾಡುವ ನಿರೀಕ್ಷೆಯಿದ್ದು, ಐಪ್ಯಾಡ್ ಮಿನಿ, ಆ್ಯಪಲ್ ಏರ್‌ಪಾಡ್ಸ್ ಕೂಡ ಮಾರುಕಟ್ಟೆಗೆ ಲಗ್ಗೆ ಇರಿಸಬಹುದು ಎನ್ನಲಾಗಿದೆ.

ಆನ್‌ಲೈನ್ ಸಮಾವೇಶ ಆಗಿರುವುದರಿಂದ, ಜಾಗತಿಕವಾಗಿ ಏಕಕಾಲದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದ್ದು, ದೇಶದಲ್ಲಿ ಸ್ಥಳೀಯ ಕಾಲಮಾನ ಪ್ರಕಾರ ರಾತ್ರಿ 10:30ಕ್ಕೆ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT