ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ 23ರಂದು ಭಾರತದಲ್ಲಿ ತೆರೆಯಲಿದೆ ಆ್ಯಪಲ್‌ನ ಮೊದಲ ಆನ್‌ಲೈನ್‌ ಸ್ಟೋರ್

Last Updated 18 ಸೆಪ್ಟೆಂಬರ್ 2020, 9:00 IST
ಅಕ್ಷರ ಗಾತ್ರ

ಬೆಂಗಳೂರು: ಐಫೋನ್‌ ತಯಾರಿಕಾ ಸಂಸ್ಥೆ ಆ್ಯಪಲ್‌ ಇಂಕ್‌ ಭಾರತದಲ್ಲಿ ಮೊಟ್ಟ ಮೊದಲ ಆನ್‌ಲೈನ್‌ ಮಳಿಗೆಯನ್ನು ಸೆಪ್ಟೆಂಬರ್‌ 23ರಂದು ತೆರೆಯಲಿದೆ. ಈ ಬಗ್ಗೆ ಆ್ಯಪಲ್‌ ಶುಕ್ರವಾರ ಅಧಿಕೃತವಾಗಿ ತಿಳಿಸಿದೆ.

ಭಾರತದಲ್ಲಿ ಸರಣಿ ಹಬ್ಬಗಳು ಆರಂಭವಾಗುತ್ತಿರುವುದು ಆ್ಯಪಲ್‌ ಸಾಧನಗಳ ಮಾರಾಟಕ್ಕೆ ಉತ್ತಮ ಅವಕಾಶ ಕಲ್ಪಿಸಬಹುದಾಗಿದೆ. ಆ್ಯಪಲ್‌ ತಯಾರಿಸುವ ಸಾಧನಗಳು ಪ್ರಸ್ತುತ ಭಾರತದಲ್ಲಿ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಂತಹ ಇ–ಕಾಮರ್ಸ್‌ ವೇದಿಕೆಗಳು ಹಾಗೂ ಇತರೆ ಮಾರಾಟಗಾರರ ಮೂಲಕ ಮಾರಾಟ ಮಾಡಲಾಗುತ್ತಿದೆ.

ಆ್ಯಪಲ್‌ ಐಫೋನ್‌ 11 ಸೇರಿದಂತೆ ಕೆಲವು ಮಾದರಿಗಳ ಸ್ಮಾರ್ಟ್‌ಫೋನ್‌ಗಳನ್ನು ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಎರಡು ಕಡೆ ಫಾಕ್ಸ್‌ಕಾನ್‌ ಮತ್ತು ವಿಸ್ಟ್ರಾನ್ ಘಟಕಗಳಲ್ಲಿ ಜೋಡಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಭಾರತದಲ್ಲಿನ ಒಂದು ಬಿಲಿಯನ್‌ಗೂ ಹೆಚ್ಚಿನ ಮೊಬೈಲ್‌ ಬಳಕೆದಾರರ ಪೈಕಿ ಹೆಚ್ಚಿನವರು ಬೇಸಿಕ್‌ ಹ್ಯಾಂಡ್‌ಸೆಟ್‌ಗಳನ್ನೇ ಬಳಸುತ್ತಿದ್ದು, ಸ್ಮಾರ್ಟ್‌ಫೋನ್‌ ತಯಾರಿಕರಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಕಡಿಮೆ ವೇತನದಲ್ಲಿ ಕಾರ್ಮಿಕರು ದೊರೆಯುವ ಕಾರಣದಿಂದಾಗಿಯೂ ಇಲ್ಲಿಯೇ ಸಾಧನಗಳನ್ನು ತಯಾರಿಸಲು ಕಂಪನಿಗಳು ಉತ್ಸಾಹ ತೋರುತ್ತಿವೆ.

ಆ್ಯಪಲ್‌ ಆನ್‌ಲೈನ್‌ ಮಾರಾಟ ವೇದಿಕೆಯಲ್ಲಿ ಗ್ರಾಹಕರಿಗೆ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಸೇವೆ ನೀಡಲು ಯೋಜನೆ ರೂಪಿಸಿದೆ. ಐಪ್ಯಾಡ್ಸ್‌, ಆ್ಯಪಲ್‌ ಪೆನ್ಸಿಲ್‌ ಹಾಗೂ ಏರ್‌ಪಾಡ್ಸ್‌ಗಳ ಮೇಲೆ ಇಂಗ್ಲಿಷ್ ಜೊತೆಗೆ ಕೆಲವು ಭಾರತೀಯ ಭಾಷೆಗಳಲ್ಲಿಯೂ ಹೆಸರು ಬರೆಸಿಕೊಳ್ಳುವ ಅವಕಾಶ ಇರಲಿದೆ.

ಇದೇ ವಾರ ಆ್ಯಪಲ್‌ ವರ್ಚುವಲ್‌ ಫಿಟ್ನೆಸ್‌ ಸೇವೆಗಳು ಹಾಗೂ ಆ್ಯಪಲ್‌ ಒನ್‌ ಸೇವೆಗಳನ್ನು ಬಿಡುಗಡೆ ಮಾಡಿದೆ. ಐಪ್ಯಾಡ್‌ ಏರ್‌ ಹಾಗೂ ಹೊಸ ಸ್ಮಾರ್ಟ್‌ ವಾಚ್‌ಗಳನ್ನು ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT