'ಫೇಕ್’ ಆ್ಯಪ್ ಬಗ್ಗೆ ಎಚ್ಚರ

7

'ಫೇಕ್’ ಆ್ಯಪ್ ಬಗ್ಗೆ ಎಚ್ಚರ

Published:
Updated:

ಅಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಫೇಕ್‌ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡುತ್ತಿದ್ದು, 50,000ಗಿಂತಲೂ ಹೆಚ್ಚು ಮಂದಿ ಇಂಥಾ ಆ್ಯಪ್‌ ಇನ್‍ಸ್ಟಾಲ್ ಮಾಡಿದ್ದಾರೆ ಎಂದು ಗೂಗಲ್ ಪ್ಲೇ ಸ್ಟೋರ್ ಮಾಹಿತಿ ನೀಡಿದೆ.

ಅಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಇನ್‍ಸ್ಟಾಲ್ ಮಾಡಿದ ಫೇಕ್‌ ಆ್ಯಪ್‌ಗಳಲ್ಲಿ PDF converter ( PDF to Word Doc) ಎಂಬ ಆ್ಯಪ್‌ ಅನ್ನು 50000ಕ್ಕಿಂತಲೂ ಹೆಚ್ಚು ಮಂದಿ ಇನ್‍ಸ್ಟಾಲ್ ಮಾಡಿದ್ದಾರೆ. ಇನ್‍ಸ್ಟಾಲ್ ಮಾಡಿದ ನಂತರ ‘ಈ ಆ್ಯಪ್ ಫೇಕ್, ಇದರಿಂದ ಯಾವುದೇ ಪ್ರಯೋಜನ ಇಲ್ಲ’ ಎಂದು ಬಳಕೆದಾರರು ಫೀಡ್ ಬ್ಯಾಕ್ ಕೂಡಾ ನೀಡಿದ್ದಾರೆ. ಅಂದ ಹಾಗೆ ಗೂಗಲ್ ಪ್ಲೇ ಸ್ಟೋರ್‌ನಿಂದ ಯಾವುದೇ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುವ ಮುನ್ನ ಆ ಆ್ಯಪ್‍ಗಳು ಅಸಲಿಯೇ ಎಂಬುದನ್ನು ಪರಾಂಬರಿಸಿ ನೋಡುವುದು ಒಳಿತು.

ಆ್ಯಪ್ ಇನ್‍ಸ್ಟಾಲ್ ಮಾಡುವಮುನ್ನ ಗಮನಿಸಬೇಕಾದ ಸಂಗತಿಗಳು ಅಧಿಕೃತ ಆ್ಯಪ್ ಸ್ಟೋರ್‌ನಿಂದಲೇ ಡೌನ್‍ಲೋಡ್ ಮಾಡಿ ಯಾವುದೇ ಆ್ಯಪ್ ಆಗಿರಲಿ ಅಧಿಕೃತ ಆ್ಯಪ್‌ಸ್ಟೋರ್‌ನಿಂದ ಮಾತ್ರ ಡೌನ್‍ಲೋಡ್ ಮಾಡಿ. ಇಂಥ ಆ್ಯಪ್‌ಸ್ಟೋರ್‌ಗಳಲ್ಲಿ ಫೇಕ್‌ ಆ್ಯಪ್‍ಗಳ ಸಂಖ್ಯೆ ಕಡಿಮೆ ಇರುತ್ತದೆ.

ಆ್ಯಪ್ ವಿವರಣೆ ಓದಿ

ಆ್ಯಪ್‌ಡೌನ್‍ಲೋಡ್ ಮಾಡುವ ಮುನ್ನ ಆ್ಯಪ್‌ ಬಗ್ಗೆ ನೀಡಿರುವ ವಿವರಣೆಯನ್ನು ಓದಿ. ಆ ವಿವರಣೆ ವ್ಯಾಕರಣ ದೋಷ, ಅಕ್ಷರ ತಪ್ಪುಗಳಿಂದ ಕೂಡಿದ್ದರೆ ಅದೊಂದು ಫೇಕ್ ಆ್ಯಪ್. ಯಾವುದೇ ಕಾರಣಕ್ಕೂ ಇಂಥ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಬೇಡಿ.

ಆಪ್‌ ರಿವ್ಯೂವ್‌ ಓದಿ

ಆ್ಯಪ್ ಡೌನ್‍ಲೋಡ್ ಮಾಡುವ ಮುನ್ನ ಆ ಆ್ಯಪ್‍ ಬಗ್ಗೆ ಬಳಕೆದಾರರು ನೀಡಿರುವ ರಿವ್ಯೂವ್‌ಗಳನ್ನು ಓದಿ. ಅದೊಂದು ಫೇಕ್ ಆ್ಯಪ್ ಆಗಿದ್ದರೆ ಬಳಕೆದಾರರು ಈ ಬಗ್ಗೆ ಬರೆದಿರುತ್ತಾರೆ. ಯಾವುದೇ ಆ್ಯಪ್‍ ಆಗಲಿ ಬಳಕೆದಾರರು ಅದು ಹೇಗಿದೆ? ಪ್ಲಸ್ ಪಾಯಿಂಟ್/ ಮೈನಸ್ ಪಾಯಿಂಟ್ ಎಲ್ಲವನ್ನೂ ಇಲ್ಲ ಬರೆಯುತ್ತಾರೆ. ಇದನ್ನೆಲ್ಲಾ ಓದಿದ ನಂತರವೇ ಆ್ಯಪ್ ಇನ್‍ಸ್ಟಾಲ್ ಮಾಡಿ.

ಡೆವಲಪರ್ ಬಗ್ಗೆ ತಿಳಿದುಕೊಳ್ಳಿ

ಆ್ಯಪ್ ಡೆವಲಪರ್ ಯಾರು ಎಂಬುದನ್ನು ತಿಳಿದುಕೊಳ್ಳಿ. ಆ ಡೆವಲಪರ್‌ಗಳ ವೆಬ್‍ಸೈಟ್‍ಗೆ ಭೇಟಿ ನೀಡಿ. ಡೆವಲಪರ್‌ಗಳು ಯಾವುದೇ ಸಾಮಾಜಿಕ ಮಾಧ್ಯಮಗಳ ಲಿಂಕ್ ಹೊಂದಿಲ್ಲ ಎಂದಾದರೆ ಆ ಆ್ಯಪ್ ಇನ್‍ಸ್ಟಾಲ್ ಮಾಡದಿದ್ದರೆ ಒಳ್ಳೆಯದು.

ಡೌನ್‍ಲೋಡ್‍ಗಳ ಸಂಖ್ಯೆ ನೋಡಿ

ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿರುವ ಸಂಖ್ಯೆಯನ್ನೂ ಗಮನಿಸಿ. ಹೆಚ್ಚು ಮಂದಿ ಡೌನ್‍ಲೋಡ್ ಮಾಡಿದ್ದರೆ ಆ್ಯಪ್ ನಂಬಿಕೆಗೆ ಯೋಗ್ಯವಾಗಿರುತ್ತದೆ.

Tags: 

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !