ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಾನಿಕ್‌ ಸಾಧನಗಳಿಗೆಮಿಂಚಿನ ವೇಗ ನೀಡುವ ಚಿಪ್‌!

ಐಐಎಸ್‌ಸಿಯ ನ್ಯಾನೋ ಸೈನ್ಸ್‌ ವಿಭಾಗದಿಂದ ಅಭಿವೃದ್ಧಿ
Last Updated 7 ಡಿಸೆಂಬರ್ 2022, 21:03 IST
ಅಕ್ಷರ ಗಾತ್ರ

ಬೆಂಗಳೂರು: ಸ್ಮಾರ್ಟ್‌ ಫೋನ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್ ಸೇರಿ ಎಲ್ಲ ಬಗೆಯ ಎಲೆಕ್ಟ್ರಾನಿಕ್ ಸಾಧನಗಳು ಮಿಂಚಿನ ವೇಗದಲ್ಲಿ ಕಾರ್ಯ ನಿರ್ವಹಿಸಲು, ಇಂಧನ (ಎನರ್ಜಿ) ಬಳಕೆ
ಯಲ್ಲಿ ಮಿತವ್ಯಯ ಮತ್ತು ಕ್ಷಮತೆ ಸಾಧಿಸುವುದರ ಜೊತೆಗೆ ದತ್ತಾಂಶ ಸಂಗ್ರಹಿಸಿ, ಸ್ವಯಂ ಲೆಕ್ಕಾಚಾರ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರುವ ಪುಟಾಣಿ ಚಿಪ್‌ ಅಭಿವೃದ್ಧಿಪಡಿಸಲಾಗಿದೆ.

ಸದ್ಯಕ್ಕೆ ಇವೆಲ್ಲ ಕಾರ್ಯಗಳೂ ಪ್ರತ್ಯೇಕವಾಗಿ ನಡೆಯುತ್ತಿವೆ. ಇದರಿಂದ ಅಪಾರ ಪ್ರಮಾಣದ ವಿದ್ಯುತ್‌ ಬಳಕೆ ಆಗುತ್ತಿದ್ದು, ವೇಗವೂ ಕಡಿಮೆ ಇದೆ. ಈಗ ಅಭಿವೃದ್ಧಿಪಡಿಸಿರುವ ಪುಟಾಣಿ ಚಿಪ್‌ ಎಲ್ಲ ಕೆಲಸಗಳನ್ನೂ ನಿರ್ವಹಿಸಲಿದ್ದು, ಎಲೆಕ್ಟ್ರಾನಿಕ್‌ ಸಾಧನಗಳ ಕ್ಷೇತ್ರದಲ್ಲಿ ಕ್ರಾಂತಿಯನ್ನು ಸೃಷ್ಟಿಸಬಲ್ಲದು. ಈ ಚಿಪ್‌ಗೆ ‘ಮೆರ್ಮಿಸ್ಟರ್‌’ ಎಂದು ಕರೆಯಲಾಗಿದೆ.

ಜಗತ್ತಿನಲ್ಲಿ ವಿವಿಧ ರೀತಿಯ ಎಲೆಕ್ಟ್ರಾನಿಕ್‌ ಸಾಧನಗಳು ಅಗಾಧ ಪ್ರಮಾಣದಲ್ಲಿ ಇಂಧನ ಅಥವಾ ವಿದ್ಯುತ್‌ ಬಳಕೆ ಮಾಡುತ್ತಿದ್ದು, ವಿಶ್ವದೆಲ್ಲೆಡೆ ಇವುಗಳಿಗಾಗಿ ವಿದ್ಯುತ್‌ ಪೂರೈಕೆ ಮಾಡುವುದೇ ದೊಡ್ಡ ಸಮಸ್ಯೆಯಾಗಿದ್ದು, ಪರ್ಯಾಯಕ್ಕಾಗಿ ಹುಡುಕಾಟ ನಡೆದಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ‘ನ್ಯಾನೊ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್‌ ವಿಭಾಗ’ದ ವಿಜ್ಞಾನಿಗಳು ‘ಮೆರ್ಮಿಸ್ಟರ್‌’ ಅಭಿವೃದ್ಧಿಪಡಿಸಿದ್ದಾರೆ. ಸಾಮಾನ್ಯವಾಗಿ ಎಲೆಕ್ಟ್ರಾನಿಕ್‌ ಸರ್ಕ್ಯೂಟ್‌ಗಳಲ್ಲಿ ಲೋಹದ ಆಕ್ಸೈಡ್‌ ಸೆಮಿಕಂಡಕ್ಟರ್‌ ಬಳಸಲಾಗುತ್ತದೆ. ಅವುಗಳ ಬದಲಿಗೆ ಮೆರ್ಮಿಸ್ಟರ್‌ಗಳನ್ನು ಬಳಸಬಹುದು. ಇದರಿಂದಾಗಿ ಇದರ ವೇಗ ಮತ್ತು ಕ್ಷಮತೆ ಹೆಚ್ಚಲು ಕಾರಣವಾಗಿದೆ.

ಜಗತ್ತಿನಲ್ಲಿ ಹೆಚ್ಚು ಬುದ್ಧಿಮತ್ತೆಯುಳ್ಳ ಮತ್ತು ಅತ್ಯಂತ ವೇಗದ ಕಂಪ್ಯೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಮತ್ತುಮುಂದಿನ ತಲೆಮಾರಿನ ಎಲೆಕ್ಟ್ರಾನಿಕ್‌ ಸಾಧನಗಳಿಗೆ ‘ಮೆರ್ಮಿಸ್ಟರ್‌’ನ ಅಭಿವೃದ್ಧಿ ಮೈಲಿಗಲ್ಲು ಎನಿಸಿದೆ.

‘ಸೂಕ್ಷ್ಮಾತಿ ಸೂಕ್ಷ್ಮ ಕಣಗಳಿಂದ ಕೂಡಿದ ಸರ್ಕ್ಯೂಟ್‌ (ಮಾಲೆಕ್ಯುಲರ್ ಸರ್ಕ್ಯೂಟ್‌) ಅನ್ನು ನಾವು ಕಂಡು ಹಿಡಿದಿದ್ದು, ಇದು ಅತ್ಯಂತ ಸಂಕೀರ್ಣ ಕಾರ್ಯಗಳನ್ನು ಗ್ರಹಿಸಿ ತನ್ನ
ಷ್ಟಕ್ಕೇ ನಿರ್ವಹಣೆ ಮಾಡುವ ಗುಣವನ್ನು ಹೊಂದಿದೆ. ಸ್ಮರಣೆಯನ್ನು ಆಧ
ರಿಸಿ ಲೆಕ್ಕವನ್ನೂ ಮಾಡುತ್ತದೆ’ ಎಂದು ನ್ಯಾನೊ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರೊಫೆಸರ್‌ ಸ್ರಿತೋಷ್ ಗೋಸ್ವಾಮಿ ಹೇಳಿದ್ದಾರೆ.

ಮಾಲೆಕ್ಯುಲರ್ ಸರ್ಕ್ಯೂಟ್‌ ಸೆಮಿಕಂಡಕ್ಟರ್‌ ಎಲೆಕ್ಟ್ರಾನಿಕ್‌ನಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎನ್ನುತ್ತಾರೆ ಇದೇ ವಿಭಾಗದ ಪ್ರೊ.ನವಕಾಂತ್‌ ಭಟ್‌.

ವೇಗ 97 ಪಟ್ಟು ಅಧಿಕ

ಇದಕ್ಕೂ ಹಿಂದೆ ಅಭಿವೃದ್ಧಿಪಡಿಸಲಾಗಿದ್ದ ಮೆರ್ಮಿಸ್ಟರ್‌ಗೆ ವೇಗವೂ ಸೇರಿ ಕೆಲವು ಮಿತಿಗಳಿದ್ದವು. ಕಾರ್ಯಾಚರಣೆಗಳನ್ನು ಅನುಕ್ರಮಣಿಕೆಯಲ್ಲಿ ನಡೆಸಬೇಕಾಗುತ್ತಿತ್ತು. ಅದರಿಂದ ಸಾಕಷ್ಟು ಸಮಸ್ಯೆಗಳೂ ಆಗುತ್ತಿದ್ದವು. ಹೊಸದಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಮೆರ್ಮಿಸ್ಟರ್‌ನಲ್ಲಿ ಅಂತಹ ಸಮಸ್ಯೆಗಳು ಇಲ್ಲ. ವಿದ್ಯುತ್‌ ಕ್ಷಮತೆ 47 ಪಟ್ಟು ಅಧಿಕ, ಕಾರ್ಯಾಚರಣೆ ವೇಗ 97 ಪಟ್ಟು ಅಧಿಕವಾಗಿದೆ ಎಂದುಸ್ರಿತೋಷ್ ಗೋಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT