ಥಾಮ್ಸನ್: ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಫ್ಲಿಪ್ಕಾರ್ಟ್ನಲ್ಲಿ ವಿಶೇಷ ಕಡಿತ

ನವದೆಹಲಿ: ಯೂರೋಪ್ನ ಪ್ರಮುಖ ಟೆಕ್ನಾಲಜಿ ಬ್ರ್ಯಾಂಡ್ ಥಾಮ್ಸನ್ನ ಗೃಹ ಬಳಕೆಯ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಇಳಿಕೆಯಾಗಿದೆ.
ಫ್ಲಿಪ್ಕಾರ್ಟ್ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ 'ಬಿಗ್ ಸೇವಿಂಗ್ಸ್ ಡೇ ಸೇಲ್' ಉತ್ಸವ ನಡೆಯುತ್ತಿದೆ. ಸ್ಮಾರ್ಟ್ ಟಿವಿಗಳು, ವಾಷಿಂಗ್ ಮೆಷಿನ್ಗಳು ಮತ್ತು ಏರ್ ಕೂಲರ್ಗಳು ವಿಶೇಷ ರಿಯಾಯಿತಿ ದರಗಳಿಗೆ ಸಿಗಲಿವೆ.
ಮೇ 29ರ ವರೆಗೆ ನಡೆಯಲಿರುವ ವಿಶೇಷ ಆನ್ಲೈನ್ ಮೇಳದಲ್ಲಿ ಥಾಮ್ಸನ್ನ 40 ಇಂಚಿನ ಎಲ್ಇಡಿ ಟಿವಿ 18,999ಕ್ಕೆ ಲಭ್ಯವಿದೆ. ಎಚ್ಡಿಎಫ್ಸಿ ಬ್ಯಾಂಕ್ನ ಗ್ರಾಹಕರಿಗೆ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ಗಳ ಮೇಲೆ ಥಾಮ್ಸನ್ ಉತ್ಪನ್ನಗಳಿಗೆ ಶೇ.10ರಷ್ಟು ವಿಶೇಷ ರಿಯಾಯಿತಿ ಸಿಗಲಿದೆ.
ಸಂಕಷ್ಟದ ಸಮಯದಲ್ಲೂ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ನೀಡುತ್ತಿದ್ದೇವೆ. ಪ್ರಸ್ತುತ ಸನ್ನಿವೇಶವನ್ನು ಗಮನದಲ್ಲಿರಿಸಿಕೊಂಡು ಪ್ರಾಮಾಣಿಕ ಮತ್ತು ಗ್ರಾಹಕ ಸ್ನೇಹಿ ದರಗಳಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಸಿಇಒ ಅವನೀತ್ ಸಿಂಗ್ ಮರ್ವಾಹ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.