ಸೋಷಿಯಲ್ ಮೀಡಿಯಾ ಲಿಂಕ್‌ ಅಳಿಸಬೇಕೇ?

7

ಸೋಷಿಯಲ್ ಮೀಡಿಯಾ ಲಿಂಕ್‌ ಅಳಿಸಬೇಕೇ?

Published:
Updated:

ನೀವು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ವಿಷಯಗಳು ಗೂಗಲ್ ಸರ್ಚ್ ಮಾಡಿದಾಗ ಸಿಗುವುದು ನಿಮಗೆ ಬೇಡ ಎಂದೆನಿಸಿದರೆ ಈ ಲಿಂಕ್‌ಗಳನ್ನು ತೆಗೆದು ಹಾಕಬಹುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ.

ನೀವು ಗೂಗಲ್ ಸರ್ಚ್‌ನಿಂದ ಡಿಲೀಟ್ ಮಾಡಲು ಇಚ್ಛಿಸುತ್ತಿರುವ ಲಿಂಕ್ ಕಾಪಿ ಮಾಡಿ. ಈ ಲಿಂಕ್ ಕ್ಲಿಕ್ ಮಾಡಿ

ಈಗ ನಿಮ್ಮ ಗೂಗಲ್ ಖಾತೆಗೆ ಲಾಗಿನ್ ಆಗಿ

ಈಗ Request removal ಎಂದು ಕಾಣಿಸುವ ಬಾಕ್ಸ್‌ನಲ್ಲಿ ನೀವು ಡಿಲೀಟ್ ಮಾಡಬೇಕು ಎಂದು ಬಯಸುವ ಪೋಸ್ಟ್ ಲಿಂಕ್ ಪೇಸ್ಟ್ ಮಾಡಿ ಕ್ಲಿಕ್ ಮಾಡಿ

ನೀವು ರಿಕ್ವೆಸ್ಟ್ ಮಾಡಿದ ಲಿಂಕ್ ಡಿಲೀಟ್ ಆಗಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ನೀವು ರಿಕ್ವೆಸ್ಟ್ ಮಾಡಿದ ಲಿಂಕ್‌ನ ಸ್ಟೇಟಸ್‌ ಅನ್ನು ಕೆಳಗೆ ನೋಡಬಹುದು. ಒಂದು ವೇಳೆ ನಿಮ್ಮ ರಿಕ್ವೆಸ್ಟ್ ಸ್ವೀಕರಿಸದೇ ಇದ್ದರೆ, ಇನ್ನೊಂದು ಬಾರಿ ಪ್ರಯತ್ನಿಸಿ.

ಕೆಟ್ಟ ಅಭಿರುಚಿಯ ಪೋಸ್ಟ್ ಗಳನ್ನು report ಮಾಡಿ

ಒಂದು ವೇಳೆ ಯಾರಾದರೂ ವ್ಯಕ್ತಿಗಳು ಕೆಟ್ಟ ಅಭಿರುಚಿಯ ಪೋಸ್ಟ್ ಗಳನ್ನು ಶೇರ್ ಮಾಡಿದ್ದರೆ ಅಂಥಾ ಪೋಸ್ಟ್ ಗಳನ್ನು ರಿಪೋರ್ಟ್ ಮಾಡಬಹುದು.

ಫೇಸ್ ಬುಕ್ ನಲ್ಲಿ ನೀವು ಈ ರೀತಿಯ ಪೋಸ್ಟ್ ಗಳನ್ನು ನೋಡಿದರೆ ಬಲಬದಿಯಲ್ಲಿ ಡ್ರಾಪ್‌ಡೌನ್ ಮೆನು ಕ್ಲಿಕ್ ಮಾಡಿ. ಅಲ್ಲಿ Give Feedback on this post ಎಂಬ ಆಪ್ಶನ್ ಇದೆ. ಅದನ್ನು ಕ್ಲಿಕ್ ಮಾಡಿದರೆ ಆ ಪೋಸ್ಟ್ ಯಾವ ವಿಷಯಕ್ಕೆ ಸಂಬಂಧಪಟ್ಟದ್ದು ಎಂದು ಸೂಚಿಸಬಹುದು. ನೀವು ರಿಪೋರ್ಟ್ ಮಾಡಲು ಬಯಸುವ ಪೋಸ್ಟ್ ಅಶ್ಲೀಲತೆ, ಸುಳ್ಳು ಸುದ್ದಿ, ಆತ್ಮಹತ್ಯೆ, ಕಿರುಕುಳ, ಹಿಂಸಾಚಾರ ಮೊದಲಾದ ವಿಷಯಗಳಿಗೆ ಸಂಬಂಧಪಟ್ಟಿದ್ದೇ ಎಂಬ ಪ್ರಶ್ನೆ ಇಲ್ಲಿರುತ್ತದೆ. ಅದಕ್ಕೆ ಉತ್ತರ ಕ್ಲಿಕ್ ಮಾಡಿ send ಮಾಡಿದರೆ ಫೇಸ್ ಬುಕ್ ಆ ಪೋಸ್ಟ್‌ನ್ನು review ಮಾಡುತ್ತದೆ. ಒಂದು ವೇಳೆ ಫೇಸ್‌ಬುಕ್‌ನ ನಿಯಮಗಳಿಗೆ ವಿರುದ್ಧವಾದ ಪೋಸ್ಟ್ ಅದಾಗಿದ್ದರೆ, ಅದನ್ನು ಫೇಸ್‌ಬುಕ್ ತೆಗೆದುಹಾಕುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !