ಎಚ್ಚರಿಕೆ: ‘ವಾಟ್ಸ್ಯಾಪ್ ಗೋಲ್ಡ್’ ಡೌನ್‌ಲೋಡ್ ಮಾಡಿಕೊಳ್ಳಬೇಡಿ, ಅದೊಂದು ವೈರಸ್

7

ಎಚ್ಚರಿಕೆ: ‘ವಾಟ್ಸ್ಯಾಪ್ ಗೋಲ್ಡ್’ ಡೌನ್‌ಲೋಡ್ ಮಾಡಿಕೊಳ್ಳಬೇಡಿ, ಅದೊಂದು ವೈರಸ್

Published:
Updated:

ಬೆಂಗಳೂರು: ‘ವಾಟ್ಸ್ಯಾಪ್ ಗೋಲ್ಡ್‌ (WhatsApp Gold) ಅಪ್‌ಡೇಟ್ ಮಾಡಿಕೊಳ್ಳಿ’ ಎನ್ನುವ ಸಂದೇಶ ನಿಮಗೂ ಬಂದಿದೆಯೇ? ಬಂದಿದ್ದರೆ ಅದನ್ನು ಡಿಲೀಟ್ ಮಾಡಿ ಅಥವಾ ನಿರ್ಲಕ್ಷಿಸಿ. ವಾಟ್ಸ್ಯಾಪ್‌ ಗೋಲ್ಡ್‌ ಎನ್ನುವುದು ನಾವು ನಿತ್ಯ ಬಳಸುವ ವಾಟ್ಸ್ಯಾಪ್‌ಗೆ ಅಪ್‌ಡೇಟ್ ಖಂಡಿತ ಅಲ್ಲ. ಅದೊಂದು ಮಾಲ್‌ವೇರ್ (ವೈರಸ್).

ವಾಟ್ಸ್ಯಾಪ್‌ ಗ್ರೂಪ್‌ಗಳಲ್ಲಿ ಮತ್ತು ವೈಯಕ್ತಿಕ ಬಳಕೆದಾರರಲ್ಲಿ ಅಪ್‌ಡೇಟ್ ಕುರಿತ ಸಂದೇಶ ವೈರಲ್ ಆದ ನಂತರ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಎಚ್ಚರಿಕೆಯ ಸಂದೇಶಗಳು ಕಾಣಿಸುತ್ತಿವೆ.


ವಾಟ್ಸ್ಯಾಪ್‌ನಲ್ಲಿ ಬಂದ ಎಚ್ಚರಿಕೆ ಸಂದೇಶ

‘ವಾಟ್ಸ್ಯಾಪ್ ಗೋಲ್ಡ್ ಹೆಸರಿನಲ್ಲಿ ವೈರಸ್‌ ಹರಡಲು ಯತ್ನಿಸುತ್ತಿರುವವರು ಕಳುಹಿಸುತ್ತಿರುವ ಲಿಂಕ್‌ನಲ್ಲಿ ಒಂದು ವೈರಸ್ ಇದೆ. ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಪುಸಲಾಯಿಸುವ ಮೆಸೇಜ್‌ನಲ್ಲಿ ಮರ್ಟಿಲೆನಿ (Martinelli) ಎನ್ನುವ ಇಟಲಿ ಹೆಸರು ಇದೆ ಗಮನಿಸಿ’ ಎಂದು ‘ಕ್ವಿಂಟ್’ ಸುದ್ದಿತಾಣ ಎಚ್ಚರಿಸಿದೆ.

‘ಗೋಲ್ಡ್‌’ ತಾಪತ್ರಯಗಳನ್ನು ಅರಿತುಕೊಂಡಿರುವ ನೂರಾರು ಬಳಕೆದಾರರು ತಮ್ಮ ವಾಲ್‌ಗಳ ಮೇಲೆ ಎಚ್ಚರಿಕೆಯ ಸಂದೇಶ ಪ್ರಕಟಿಸಿದ್ದಾರೆ. ‘ಗೋಲ್ಡ್‌ನ ಉಸಾಬರಿಗೆ ಹೋಗಬೇಡಿ’ ಎಂದು ಕಿವಿಮಾತು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !