ವ್ಲೋಗಿಂಗ್ ಮಾಡಿ ಸಂಪಾದನೆ ಮಾಡಿ

7

ವ್ಲೋಗಿಂಗ್ ಮಾಡಿ ಸಂಪಾದನೆ ಮಾಡಿ

Published:
Updated:

ಸ್ಮಾರ್ಟ್‌ಫೋನ್ ಬಳಸಿ ಫೋಟೊ ಕ್ಲಿಕ್ ಮಾಡುತ್ತೇವೆ, ವಿಡಿಯೊ ಚಿತ್ರೀಕರಣ ಮಾಡುತ್ತೇವೆ, ಹೀಗೆ ಕ್ಲಿಕ್ ಮಾಡಿದ ಫೋಟೊ, ವಿಡಿಯೊಗಳನ್ನು ಸಾಮಾಜಿಕ ತಾಣ ಗಳಲ್ಲಿ ಶೇರ್ ಮಾಡಿ ಲೈಕ್ ಗಿಟ್ಟಿಸಿಕೊಳ್ಳುತ್ತೇವೆ. ಆದರೆ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ ವಿಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ ಸಂಪಾದನೆ ಕೂಡ ಮಾಡಬಹುದು. ಹಾಗಂತ ಸುಮ್ ಸುಮ್ನೆ ವಿಡಿಯೊ ಚಿತ್ರೀಕರಿಸಿ ಅಪ್‌ಲೋಡ್ ಮಾಡಿದರೆ ಯಾವ ಪ್ರಯೋಜನವೂ ಇಲ್ಲ. ಒಂದಷ್ಟು ಕಲಾತ್ಮಕತೆ ಮತ್ತು ವಿಷಯಗಳನ್ನು ಪ್ರಸ್ತುತಪಡಿಸುವ ರೀತಿಯೂ ಇಲ್ಲಿ ಮುಖ್ಯ. ನಾನಿಲ್ಲಿ ಹೇಳಲು ಹೊರಟಿರುವುದು ವ್ಲೋಗಿಂಗ್ ಬಗ್ಗೆ.

ಏನಿದು ವ್ಲೋಗಿಂಗ್? ವಿಡಿಯೊ ಬ್ಲಾಗಿಂಗ್‌ನ ಹೃಸ್ವ ರೂಪವೇ ವ್ಲೋಗಿಂಗ್. ದಿನ ನಿತ್ಯದ ಜೀವನದಲ್ಲಿ ನಡೆಯುವ ಆಸಕ್ತಿಕರ ವಿಷಯಗಳ ಬಗ್ಗೆ, ಉದಾಹರಣೆಗೆ ಪ್ರವಾಸ, ಅಡುಗೆ, ತಂತ್ರಜ್ಞಾನ ಮೊದಲಾದವುಗಳ ಬಗ್ಗೆ ಮಾಹಿತಿ ನೀಡುವ ವಿಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಬಹುದು. ನಿಮಗೆ ತಿಳಿದಿರುವ ಯಾವುದೇ ವಿಷಯದ ಬಗ್ಗೆ ಆಸಕ್ತಿಕರ ವಿಡಿಯೊ ತಯಾರಿಸಿ ಪ್ರತಿ ವಾರ ಅಥವಾ ವಾರಕ್ಕೆ ಎರಡು ವಿಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ. ಈ ವಿಡಿಯೊಗಳು ಆಸಕ್ತಿದಾಯಕವಾಗಿದ್ದರೆ ವೀಕ್ಷಕರ ಸಂಖ್ಯೆ ಹೆಚ್ಚುತ್ತದೆ. ನಿಮ್ಮ ಯೂಟ್ಯೂಬ್ ಚಾನೆಲ್‌ಗೆ ಚಂದಾದಾರರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಜಾಹೀರಾತುಗಳ ಮೂಲಕ ಹಣ ಸಂಪಾದನೆ ಮಾಡಬಹುದು.

ವ್ಲೋಗರ್ ಆಗುವುದು ಹೇಗೆ?: ವಿಷಯದ ಬಗ್ಗೆ ಅರಿವು: ನಿಮಗೆ ತಿಳಿದಿರುವ ವಿಷಯ, ಅನುಭವವಿರುವ ವಲಯ ಅಥವಾ ಆಸಕ್ತಿಯಿರುವ ವಿಷಯದ ಬಗ್ಗೆಯೇ ವಿಡಿಯೊ ಮಾಡಿ

ಪ್ರಸ್ತುತಿ ಹೇಗೆ? ಪ್ರವಾಸೀ ತಾಣಗಳ ಬಗ್ಗೆ ಆಗಿದ್ದರೆ ಸೆಲ್ಫಿ ವಿಡಿಯೊ ಮಾಡಬಹುದು, ಅಡುಗೆ ವಿಷಯವಾಗಿದ್ದರೆ ರೆಕಾರ್ಡ್ ಮಾಡಿ, ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಾಗಿದ್ದರೆ ಅದಕ್ಕೆ ಪೂರಕ ಗ್ರಾಫಿಕ್ಸ್, ಉಪಕರಣಗಳನ್ನು ಬಳಸಿ ವಿವರಣೆ ನೀಡಿ. ಭಾಷೆಯಲ್ಲಿ ಸ್ಪಷ್ಟತೆ ಹಾಗೂ ರೆಕಾರ್ಡಿಂಗ್ ಮಾಡುವ ರೀತಿ ಬಗ್ಗೆ ಅರಿವು ಮುಖ್ಯ.

ಏನಿರಬೇಕು?: ವಿಡಿಯೊ ಚಿತ್ರೀಕರಣಕ್ಕೆ ಸ್ಮಾರ್ಟ್‌ಫೋನ್ ಇದ್ದರೆ ಸಾಕು. ಸ್ಮಾರ್ಟ್‌ಫೋನ್‌ನಲ್ಲಿಯೇ ವಿಡಿಯೊ ಎಡಿಟಿಂಗ್ APP ಮೂಲಕ ಎಡಿಟ್ ಮಾಡಬಹುದು. ಡೆಸ್ಕ್‌ಟಾಪ್‌ನಲ್ಲಾದರೆ ಮೂವಿ ಮೇಕರ್‌ನಲ್ಲಿ ವಿಡಿಯೊ ಎಡಿಟ್ ಮಾಡಬಹುದು. iMACನಲ್ಲಿ ಎಡಿಟಿಂಗ್ ಮಾಡಿದರೆ ಗುಣಮಟ್ಟ ಉತ್ತಮವಾಗಿರುತ್ತದೆ.

ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುವುದು ಹೇಗೆ? : ಯೂಟ್ಯೂಬ್‌ನಲ್ಲಿ ನಿಮ್ಮ ಚಾನೆಲ್ ಆರಂಭಿಸಿ, ಅದಕ್ಕೆ ಸೂಕ್ತ, ಆಕರ್ಷಣೀಯ ಹೆಸರೊಂದನ್ನು ನೀಡಿ. ನೀವು ಚಿತ್ರೀಕರಿಸಿದ ವಿಡಿಯೊಗಳನ್ನು ಪುಟ್ಟ ವಿವರಣೆ ನೀಡಿ ಅಪ್‌ಲೋಡ್ ಮಾಡಿ. ಸಾಮಾಜಿಕ ತಾಣಗಳಲ್ಲಿ ವಿಷಯಗಳನ್ನು ಶೇರ್ ಮಾಡುವಾಗ ನಿಗದಿತ ಸಮಯದ ಬಗ್ಗೆ ಗಮನವಿರಲಿ. ವಾರದಲ್ಲಿ ಒಂದು ಅಥವಾ ಎರಡು ವಿಡಿಯೊಗಳನ್ನು ಅಪ್‌ಲೋಡ್‌ ಮಾಡಿ.

ಸಂಪಾದನೆ ಹೇಗೆ?: ಯೂಟ್ಯೂಬ್ ವಿಡಿಯೊಗಳಿಗೆ 4000 ವೀಕ್ಷಣೆ, 1000 ಚಂದಾದಾರರು ಇದ್ದರೆ ADSENSE ಗಾಗಿ ಬೇಡಿಕೆ ಸಲ್ಲಿಸಹುದು. ವಿಡಿಯೊವನ್ನು ಎಷ್ಟು ಜನರು ವೀಕ್ಷಿಸುತ್ತಾರೆ ಎಂಬುದನ್ನು ಅವಲಂಬಿಸಿರುತ್ತದೆ ಜಾಹೀರಾತಿನ ಸಂಪಾದನೆ. ವೀಕ್ಷಕರು ಬೇರೆ ದೇಶದವರಾಗಿದ್ದರೆ ಜಾಹೀರಾತು ಮೊತ್ತದಲ್ಲಿಯೂ ವ್ಯತ್ಯಾಸವಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry