ಮುಖಭಾವ ಗ್ರಹಿಸುವ ‘ಎಮೊಜಿ8’

7

ಮುಖಭಾವ ಗ್ರಹಿಸುವ ‘ಎಮೊಜಿ8’

Published:
Updated:

ಅನುಕರಣೆ ಒಂದು ಕಲೆ. ಇಷ್ಟದ ನಟ, ನಟಿಯರು, ಕ್ರೀಡಾಪಟುಗಳನ್ನು ಅನುಕರಿಸುವುದನ್ನು ಕೆಲವರು ಹವ್ಯಾಸವಾಗಿಸಿಕೊಂಡಿರುತ್ತಾರೆ. ಆದರೆ, ಮೈಕ್ರೊಸಾಫ್ಟ್‌ ಕಂಪನಿ ವಿಂಡೋಸ್‌ಗಾಗಿ ಅಭಿವೃದ್ಧಿಪಡಿಸಿರುವ Emoji8 (ಎಮೋಜಿ8) ಆ್ಯಪ್‌ ಮೋಜಿನಿಂದ ಕೂಡಿದ್ದಾಗಿದೆ. ಈ ಆ್ಯಪ್‌ನಲ್ಲಿರುವ ಎಮೊಜಿಗಳನ್ನು ನೀವು ಎಷ್ಟು ಸರಿಯಾಗಿ ಅನುಕರಿಸಬಲ್ಲಿರಿ ಎಂದು ತಿಳಿಯಬಹುದು.

ಈ ಆ್ಯಪ್‌ ನಿಮಗೆ ಒಂದು ಎಮೊಜಿ ನೀಡಿ ಅದನ್ನು ಅನುಕರಿಸುವಂತೆ ಸೂಚನೆ ನೀಡುತ್ತದೆ. ನಿಮ್ಮ ಅನುಕರಣೆ ಎಷ್ಟರ ಮಟ್ಟಿಗೆ ಸರಿಯಾಗಿದೆ ಎನ್ನುವುದನ್ನು ಶೇಕಡಾವಾರು ಮೂಲಕ ತಿಳಿಸುತ್ತದೆ. ಉದಾಹರಣೆಗೆ ಅಳುವ, ಅಚ್ಚರಿ ಪಡುವ ಎಮೊಜಿ ಫೋನ್‌ ಪರದೆಯ ಮೇಲೆ ಕಾಣಿಸುತ್ತದೆ. ಆಗ ಕಂಪ್ಯೂಟರ್‌ನ ವೆಬ್‌ಕ್ಯಾಮ್‌ನಲ್ಲಿ ಅಂತೆಯೇ ನಮ್ಮ ಮುಖಭಾವ ಬದಲಾಯಿಸಿದರೆ, ಅದಕ್ಕೆ ಎಷ್ಟರ ಮಟ್ಟಿಗೆ ಹೋಲುತ್ತದೆ ಎನ್ನುವುದನ್ನು ಪರಿಶೀಲಿಸಿ ಶೇ 80, ಶೇ 90 ಹೀಗೆ ಅಂಕಗಳನ್ನು ನೀಡುತ್ತದೆ.

ಇಷ್ಟೇನಾ ಎನ್ನಬೇಡಿ. ಕೆಲವೊಮ್ಮೆ ನಾವು ಚಿತ್ರ, ವಿಚಿತ್ರವಾದ ಮುಖಭಾವ ಮಾಡುತ್ತೇವೆ. ಅಂತಹ ಮುಖಭಾವಗಳನ್ನು ‘ಜಿಫ್‌’ (.gif) ಆಗಿಸಿ ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಆಯ್ಕೆಯನ್ನೂ ನೀಡಿದೆ. ಮಷಿನ್‌ ಲರ್ನಿಂಗ್‌ ಮೂಲಕ ಈ ಆ್ಯಪ್‌ ಮುಖಭಾವ ಗುರುತಿಸುತ್ತದೆ. ಮೈಕ್ರೊಸಾಫ್ಟ್‌ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !