7

ಜಿಎಂಐಟಿ 3 ಪ್ರಾಜೆಕ್ಟ್‌ ರಾಜ್ಯಮಟ್ಟಕ್ಕೆ ಆಯ್ಕೆ

Published:
Updated:
ದಾವಣಗೆರೆಯ ಜಿಎಂಐಟಿಯ ಮೆಕ್ಯಾನಿಕಲ್‌ ವಿಭಾಗದ ಪ್ರೊ. ಸಂದೀಪ್‌ ಎಸ್‌.ಎಚ್‌ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶರತ್ ಕುಮಾರ ಎಚ್‌.ಎಂ, ಶ್ರೀನಿಧಿ ಎಂ.ಎನ್., ಓಂಕಾರ್‌ ಎ.ಡಿ, ಸೂರಜ್‌ ಎಸ್‌.ಡಿ. ಅವರು ಅಭಿವೃದ್ಧಿಪಡಿಸಿದ ಈರುಳ್ಳಿಯ ಲೀಕ್ (ಮೇಲ್ಭಾಗದ ಎಲೆ) ಕತ್ತರಿಸುವ ಮತ್ತು ಈರುಳ್ಳಿಯನ್ನು ವಿವಿಧ ಗಾತ್ರಗಳಲ್ಲಿ ವಿಂಗಡಿಸುವ ಯಂತ್ರ

ದಾವಣಗೆರೆ: ನಗರದ ಜಿ.ಎಂ.ಐ.ಟಿ.ಯ ಮೆಕ್ಯಾನಿಕಲ್‌ ವಿಭಾಗದ ಮೂರು ಸೃಜನಾತ್ಮಕ ಪ್ರಾಜೆಕ್ಟ್‌ಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾ ಮಂಡಳಿಯ ಆರ್ಥಿಕ ನೆರವು ಪಡೆದು ರಾಜ್ಯ ಮಟ್ಟದ ವಸ್ತುಪ್ರದರ್ಶನಕ್ಕೆ ಆಯ್ಕೆಯಾಗಿವೆ.

ಪ್ರೊ. ಸಂದೀಪ್‌ ಎಸ್‌.ಎಚ್‌ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶರತ್‌ಕುಮಾರ ಎಚ್‌.ಎಂ, ಶ್ರೀನಿಧಿ ಎಂ.ಎನ್., ಓಂಕಾರ್‌ ಎ.ಡಿ,  ಸೂರಜ್‌ ಎಸ್‌.ಡಿ. ಅವರು ಈರುಳ್ಳಿಯ ಲೀಕ್ (ಮೇಲ್ಭಾಗದ ಎಲೆ) ಕತ್ತರಿಸುವ ಮತ್ತು ಈರುಳ್ಳಿಯನ್ನು ವಿವಿಧ ಗಾತ್ರಗಳಲ್ಲಿ ವಿಂಗಡಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.

ಪ್ರೊ. ಮಲ್ಲಿಕಾರ್ಜುನ ವಿ. ಬಿದರಿ ಮಾರ್ಗದರ್ಶನದಲ್ಲಿ ಶಾಖೋತ್ಪನ್ನ, ರಾಸಾಯನಿಕ ಉತ್ಪಾದನಾ ಘಟಕಗಳಲ್ಲಿ ಉಪಯೋಗಿಸುವ ಯಂತ್ರದ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಾದ ದೀಪಾ ಎಸ್.ಕೆ., ಪಲ್ಲವಿ ಎಂ., ಅವಿನಾಶ್ ಬಿ.ಎಸ್. ಮತ್ತು ಮೊಹಮ್ಮದ್ ಐ.ಕೆ. ಸಹಭಾಗಿತ್ವದಲ್ಲಿ ಉಪಕರಣವನ್ನು ಅಭಿವೃದ್ಧಿಪಡಿಸಲಾಗಿದೆ.

ಪ್ರೊ. ಪ್ರಶಾಂತ್ ಎಚ್.ಆರ್. ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಸಾಯಿ ಕಿಶನ್ ಸಾವಂತ್, ಶ್ರೇಯಸ್ ಜಿ.ಎಸ್., ವರುಣ್ ಎಸ್‌.ಬಿ., ಶಶಾಂಕ್ ಎಚ್. ಸಹಭಾಗಿತ್ವದಲ್ಲಿ ಕ್ರಯೋಜೆನಿಕ್ ತಾಪಮಾನದಲ್ಲಿ ಸ್ಟೀಲ್ ಲೋಹದ ಗುಣಲಕ್ಷಣಗಳನ್ನು ಪರಿಶೀಲಿಸಿ ಅದರ ಬಗ್ಗೆ ಸಂಶೋಧನೆ ನಡೆಸಲಾಗಿದೆ.

2017–18ನೇ ಸಾಲಿನ ಮೆಕ್ಯಾನಿಕಲ್‌ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಒಟ್ಟು 31 ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸಿದ್ದರು.

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಪ್ರಾಜೆಕ್ಟ್‌ ಸಿದ್ಧಪಡಿಸಿ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಪ್ರಕಾಶ್, ಆಡಳಿತಾಧಿಕಾರಿ ವೈ.ಯು. ಸುಭಾಷ್‌ಚಂದ್ರ ಮತ್ತು ಮೆಕ್ಯಾನಿಕಲ್‌ ವಿಭಾಗದ ಮುಖ್ಯಸ್ಥರಾದ ಡಾ. ಗಣೇಶ್ ಡಿ.ಬಿ. ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !