ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ಆಟೊ ಡಿಲೀಟ್‌ ಆಯ್ಕೆ

Last Updated 5 ಜೂನ್ 2019, 19:30 IST
ಅಕ್ಷರ ಗಾತ್ರ

ಅಂತರ್ಜಾಲ ಬಳಸುತ್ತಿರುವವರ ಮೇಲೆ ನಿಗಾ ಇಡುವುದರಲ್ಲಿ ಗೂಗಲ್‌ ಎತ್ತಿದ ಕೈ. ಸ್ಮಾರ್ಟ್‌ಫೋನ್‌ ಬಳಸುತ್ತಿರುವ ಪ್ರತಿಯೊಬ್ಬರೂ ಗೂಗಲ್‌ ಖಾತೆ ಹೊಂದಿರುತ್ತಾರೆ. ಹೀಗಾಗಿ ಗೂಗಲ್‌ನಲ್ಲಿ ಏನೆಲ್ಲಾ ಹುಡುಕುತ್ತೀರಿ, ಗೂಗಲ್‌ ಮ್ಯಾಪ್‌ ಮೂಲಕ ಯಾವ ಸ್ಥಳಗಳ ಮಾಹಿತಿ ಕಲೆ ಹಾಕಿದ್ದೀರಿ ಅಥವಾ ಯಾವೆಲ್ಲಾ ಸ್ಥಳಗಳಿಗೆ ದಾರಿ ಕಂಡುಕೊಳ್ಳುತ್ತೀರಿ ಹೀಗೆ ಎಲ್ಲವೂ ದಾಖಲಾಗುತ್ತಿರುತ್ತವೆ. ಆದರೆ, ನಾವು ಲೊಕೇಷನ್‌ ಆಫ್‌ ಮಾಡಿದ ಬಳಿಕವೂ ಈ ಎಲ್ಲಾ ಮಾಹಿತಿಗಳು ನಮಗರಿವಿಲ್ಲದೇ ಹಂಚಿಕೆಯಾಗುತ್ತಿವೆ ಎನ್ನುವುದು ಬಹುತೇಕ ಬಳಕೆದಾರರಿಗೆ ತಿಳಿದಿಲ್ಲ.

ಮೊಬೈಲ್‌ನಲ್ಲಿ ಟ್ಯಾಕ್ಸಿ ಬುಕ್‌ ಮಾಡುವಾಗ ನೀವಿರುವ ಸ್ಥಳ ಗುರುತಿಸಲು ಲೊಕೇಷನ್‌ ಆನ್‌ ಮಾಡುವುದು ಅಗತ್ಯ. ಆದರೆ ಪ್ರಯಾಣ ಪೂರ್ತಿಗೊಳಿಸಿದ ಬಳಿಕವೂ ನಮ್ಮ ಚಲನವಲನಗಳನ್ನು ಆ್ಯಪ್‌ ಅಥವಾ ಗೂಗಲ್‌ ದಾಖಲಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಹೌದು ಹೀಗಾಗುತ್ತಿದೆ. ನಾವು ಟ್ಯಾಕ್ಸಿ ಪ್ರಯಾಣ ಮುಗಿಸಿದ ಬಳಿಕವೂ ನಾವಿರುವ ಲೊಕೇಷನ್‌ ಗೂಗಲ್‌ನಲ್ಲಿ ದಾಖಲಾಗುತ್ತಿದೆ.ಇಷ್ಟೇ ಅಲ್ಲ, ಕೆಲವು ಆ್ಯಪ್‌ಗಳು ಮೊಬೈಲ್‌ನಲ್ಲಿ ಇರುವ ಮೈಕ್ರೊಫೋನ್‌ಗಳ ಮೂಲಕವೂ ನಮ್ಮ ಸುತ್ತ ಏನೆಲ್ಲಾ ನಡೆಯುತ್ತಿದೆ ಎನ್ನುವುದನ್ನು ದಾಖಲಿಸಿಕೊಳ್ಳುತ್ತಿವೆ.

ಈ ಬಗ್ಗೆ ಗ್ರಾಹಕರಿಂದ ಆಕ್ಷೇಪ, ಅಸಮಾಧಾನ ವ್ಯಕ್ತವಾಗುತ್ತಿರುವುದರಿಂದ ಸ್ವತಃ ಗೂಗಲ್‌ ಸಂಸ್ಥೆಯೇ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾರಂಭಿಸಿದೆ. ಹೀಗೆ ಇತ್ತೀಚೆಗೆ ನೀಡಿರುವ ಸುರಕ್ಷತಾ ವೈಶಿಷ್ಟ್ಯವೇ auto delete privacy feature. ಈ ಸೌಲಭ್ಯವನ್ನು ಸಕ್ರಿಯಗೊಳಿಸಿದರೆ, ನಿಮ್ಮಿಂದ ಸಂಗ್ರಹಿಸಿದ ಕೆಲವು ದತ್ತಾಂಶಗಳನ್ನು ಸ್ವಯಂಚಾಲಿತವಾಗಿ ಡಿಲೀಟ್‌ ಮಾಡಲಿದೆ.

ಮೂರು ತಿಂಗಳಿಗೊಮ್ಮೆ ಅಥವಾ 18 ತಿಂಗಳಿಗೊಮ್ಮೆ ಲೊಕೇಷನ್‌ ಮತ್ತು ಆ್ಯಕ್ಟಿವಿಟಿಗಳನ್ನು ಸ್ವಯಂಚಾಲಿತವಾಗಿ ಡೇಟಾ ಡಿಲಿಟ್‌ ಮಾಡುವ ಆಯ್ಕೆ ಲಭ್ಯವಾಗಿದೆ. ಇದನ್ನು ಸಕ್ರಿಯಗೊಳಿಸುವ ಬಗೆ: Web & App activity-choose delete automatically-kee for 3 months/18 months ಆಯ್ಕೆಯಲ್ಲಿ ಒಂದನ್ನು ಕ್ಲಿಕ್‌ ಮಾಡಿ Next ಕೊಟ್ಟು confirm ಆಯ್ಕೆ ಒತ್ತಿದರೆ ಮೂರು ತಿಂಗಳಿಗಿಂತ ಹಿಂದಿನ ಚಟುವಟಿಕೆಗಳೆಲ್ಲವೂ ಡಿಲಿಟ್‌ ಆಗುತ್ತವೆ.

ಐಫೋನ್‌ನಲ್ಲಿ: Settings- Privacy- Location Services-Never, Always, and While Using the App ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಆ್ಯಪ್‌ಗಳನ್ನು ಬಳಸುವಾಗ ಮಾತ್ರ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ಏಕೆಂದರೆ ಟ್ಯಾಕ್ಸಿ ಆ್ಯಪ್‌ಗಳನ್ನು ಬಳಸುವಾಗ ಲೊಕೇಷನ್‌ ಅತ್ಯಗತ್ಯ.

Settings–Location-Google Location History ಮೇಲೆ ಕ್ಲಿಕ್ ಮಾಡಿ. ನೀವು ಯಾವ ಖಾತೆ ಬಳಸಿ ಲಾಗಿನ್‌ ಆಗಿದ್ದೀರಿ ಎನ್ನುವುದು ಆಯ್ಕೆ ಮಾಡಿದ ಮೇಲೆ ಅಲ್ಲಿ Location History pause ಮಾಡಬಹುದು. ಸಾಮಾನ್ಯವಾಗಿ ಮೊಬೈಲ್‌ಗೆ ನಮ್ಮ ಖಾಸಗಿ ಜಿ–ಮೇಲ್‌ ಅನ್ನೇ ನೀಡುತ್ತೇವೆ. ಇಂತಹ ಸಂದರ್ಭದಲ್ಲಿ ಲೊಕೇಷನ್‌ ಹಿಸ್ಟರಿ ಆಯ್ಕೆ ಮೇಲೆ ಕ್ಲಿಕ್‌ ಮಾಡಿದಾಗ ಆ ಖಾತೆಯ ಸೆಟ್ಟಿಂಗ್ಸ್‌ ತೆರೆದುಕೊಳ್ಳುತ್ತದೆ. ಕೆಲವರು ಮೊಬೈಲ್‌ಗೆಂದೇ ಪ್ರತ್ಯೇಕವಾದ ಜಿ–ಮೇಲ್‌ ಸೃಷ್ಟಿಸಿರುತ್ತಾರೆ. ಆಗ ಯಾವ ಖಾತೆಯಲ್ಲಿ ಬದಲಾವಣೆ ಮಾಡಬೇಕು ಎನ್ನುವುದನ್ನು ಸೂಚಿಸಬೇಕು. ಹೀಗೆ ಮಾಡುವುದರಿಂದ ಹಿಸ್ಟರಿ ದಾಖಲಾಗುವುದಕ್ಕೆ ತಡೆ ಬೀಳುತ್ತದೆ. ಆದರೆ ಅದಕ್ಕೂ ಹಿಂದೆ ದಾಖಲಾಗಿರುವ ಹಿಸ್ಟರಿ ಅಳಿಸಿಹೋಗುವುದಿಲ್ಲ.

ಬಳಕೆದಾರರ ಖಾಸಗಿತನದ ರಕ್ಷಣೆಯೇ ನಮ್ಮ ಆದ್ಯತೆ. ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸುರಕ್ಷತಾ ಆಯ್ಕೆಗಳನ್ನು ನೀಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT