ಸೋಮವಾರ, ಅಕ್ಟೋಬರ್ 26, 2020
28 °C

ಉಚಿತ 'ಗೂಗಲ್‌ ಮೀಟ್‌' ಬಳಕೆದಾರರಿಗೆ 60 ನಿಮಿಷಗಳ ಮಿತಿ; ಸೆ.30ರಿಂದ ಅನ್ವಯ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಗೂಗಲ್‌ ಮೀಟ್‌

ಆನ್‌ಲೈನ್‌ ತರಗತಿಗಳು, ಕಚೇರಿಗಳ ಸಭೆಗಳಿಗೆ ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿರುವ ವಿಡಿಯೊ ಕಾನ್ಫರೆನ್ಸಿಂಗ್‌ ಆ್ಯಪ್‌ ಗೂಗಲ್‌ 'ಮೀಟ್‌' ಈಗ ಸಮಯದ ಮಿತಿಯನ್ನು ಪ್ರಕಟಿಸಿದೆ. ಉಚಿತ ಆವೃತ್ತಿಯ ಮೀಟ್‌ ಅಪ್ಲಿಕೇಷನ್‌ ಬಳಸುತ್ತಿರುವವರಿಗೆ 60 ನಿಮಿಷಗಳ ವರೆಗೂ ಮಾತ್ರ ವಿಡಿಯೊ ಕಾನ್ಫರೆನ್ಸ್ ನಡೆಸಲು ಸಾಧ್ಯವಾಗಲಿದೆ.

ಸಮಯದ ಮಿತಿಯೊಂದಿಗೆ 250 ಜನರವರೆಗೂ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗುವ ಅವಕಾಶ, ಲೈವ್‌ ಸ್ಟ್ರೀಮಿಂಗ್‌ ಹಾಗೂ ಮೀಟಿಂಗ್‌ ರೆಕಾರ್ಡ್‌ ಮಾಡಿರುವ ವಿಡಿಯೊ ಗೂಗಲ್‌ ಡ್ರೈವ್‌ನಲ್ಲಿ ಉಳಿಸುವಂತಹ ಅತ್ಯಾಧುನಿಕ ಜಿ–ಸ್ಯೂಟ್‌ ಸೌಲಭ್ಯಗಳ ಬಳಕೆಗೂ ಮಿತಿ ನಿಗದಿಯಾಗಲಿದೆ. ಸೆಪ್ಟೆಂಬರ್‌ 30ರಿಂದ ಗೂಗಲ್‌ನ ಹೊಸ ನಿಯಮಗಳು ಅನ್ವಯವಾಗಲಿವೆ.

ಗೂಗಲ್‌ ಮೀಟ್‌ ಬಳಕೆದಾರರು ಒಮ್ಮೆಗೆ 60 ನಿಮಿಷಗಳಿಗೂ ಹೆಚ್ಚು ಸಮಯದವರೆಗೂ ಸಭೆ ನಡೆಸಲು ಇಚ್ಛಿಸಿದರೆ, ಪಾವತಿಸಿ ಮಾಡಿ ಜಿ–ಸ್ಯೂಟ್‌ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ತಿಂಗಳಿಗೆ ಜಿ–ಸ್ಯೂಟ್‌ಗೆ ಪ್ರತಿ ಬಳಕೆದಾರರಿಗೆ ತಿಂಗಳಿಗೆ ಕನಿಷ್ಠ ₹125 (ಬೇಸಿಕ್‌) ಅಥವಾ ₹672 (ಬಿಸಿನೆಸ್) ಪಾವತಿಸಬೇಕಾಗುತ್ತದೆ.

ಅದಾಗಲೇ ಗೂಗಲ್‌ ಜಿ–ಮೇಲ್‌ ಮೊಬೈಲ್‌ ಆ್ಯಪ್‌ನಲ್ಲೇ 'ಮೀಟ್‌' ಆಯ್ಕೆಯನ್ನು ಹೊರ ತಂದಿದೆ. ಇದರಿಂದಾಗಿ ಪ್ರತ್ಯೇಕ ಆ್ಯಪ್‌ ಬಳಸದೆಯೇ ನೇರವಾಗಿ ಮೀಟ್‌ ಸಭೆಗಳಲ್ಲಿ ಭಾಗಿಯಾಗಬಹುದಾಗಿದೆ.

ಕೊರೊನಾ ವೈರಸ್‌ ಲಾಕ್‌ಡೌನ್‌ ನಂತರದಲ್ಲಿ ಜೂಮ್‌ ಹಾಗೂ ಗೂಗಲ್‌ ಮೀಟ್‌ನಂತಹ ವಿಡಿಯೊ ಕಾನ್ಫರೆನ್ಸ್‌ ವ್ಯವಸ್ಥೆಗಳಿಗೆ ಬೇಡಿಕೆ ಹೆಚ್ಚಿದೆ. ಗೂಗಲ್‌ ಮೀಟ್‌ ಮತ್ತು ಜೂಮ್‌ ಅಪ್ಲಿಕೇಷನ್‌ಗಳನ್ನು ನಿತ್ಯ 10 ಕೋಟಿಗೂ ಹೆಚ್ಚು ಜನರು ಬಳಸುತ್ತಿದ್ದಾರೆ. ಗೂಗಲ್‌ ಈ ಹಿಂದೆ ಮೀಟ್‌ನಲ್ಲಿ ಒಮ್ಮೆಗೆ 49 ಜನರು ಜನರನ್ನು ಕಾಣಬಹುದಾದ ಹೊಸ ಫೀಚರ್‌ ಬಿಡುಗಡೆ ಮಾಡಿದೆ. ಮೀಟ್‌ನ ವೆಬ್‌ ಆವೃತ್ತಿಗಳಲ್ಲಿ ಮಾತ್ರವೇ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿರುವವರ ಪೈಕಿ ಒಂದೇ ಸ್ಕ್ರೀನ್‌ನಲ್ಲಿ 49 ಜನರನ್ನು ಕಾಣಲು ಸಾಧ್ಯವಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು