ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ಮತ್ತು ಪ್ರವಾಸ

Last Updated 21 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಯಾವುದೇ ಪ್ರಶ್ನೆಗಳಿದ್ದರೂ ಗೂಗಲಿಸಿ ಉತ್ತರ ಕಂಡುಕೊಳ್ಳುವುದು ಸುಲಭ. ಅದರಲ್ಲೂ ಪ್ರವಾಸ ಹೋಗುವ ಮುನ್ನ ನಾವು ಭೇಟಿ ನೀಡುವ ಸ್ಥಳಗಳ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಮೊರೆ ಹೋಗದವರು ಕಡಿಮೆ. ಹೀಗೆ ನಾವು ಸರ್ಚ್ ಮಾಡಿದ ಸ್ಥಳಗಳನ್ನು ಗೂಗಲ್ ನೆನಪಿಟ್ಟುಕೊಂಡು ಆ ಸ್ಥಳದಲ್ಲಿರುವ ಹೋಟೆಲ್, ಪ್ರೇಕ್ಷಣೀಯ ಸ್ಥಳಗಳ ಮಾಹಿತಿಯನ್ನು ನಮಗೆ ತೋರಿಸುತ್ತದೆ. ಇಷ್ಟೇ ಅಲ್ಲ ಆ ಸ್ಥಳಕ್ಕೆ ಹೋಗಲು ವಿಮಾನ ದರ, ಇನ್ನಿತರ ಸಾರಿಗೆ ಸೌಕರ್ಯಗಳು ಹೇಗಿರುತ್ತವೆ ಎಲ್ಲವನ್ನೂ ಗೂಗಲ್ ನಮಗೆ ನೀಡುತ್ತದೆ. ಇಲ್ಲಿ ಗೂಗಲ್ ಒಬ್ಬ ಟ್ರಾವೆಲ್ ಏಜೆಂಟ್ ನಂತೆ ಕೆಲಸ ಮಾಡುತ್ತದೆ.

ಪ್ರವಾಸಕ್ಕೆ ಗೂಗಲ್ ಸಹಾಯ
* ಬ್ರೌಸರ್ ನಲ್ಲಿ googe.com/trave/trips ಎಂದು ಟೈಪ್ ಮಾಡಿ

* ಅಲ್ಲಿ ನಿಮ್ಮ ಮುಂದಿನ ಪ್ರವಾಸ upcoming trips ಎಲ್ಲಿಗೆ ಎಂಬುದನ್ನು ತೋರಿಸುತ್ತದೆ. ನೀವು ಈಗಾಗಲೇ ನಿಮ್ಮ ಜಿಮೇಲ್ ಬಳಸಿ ಬಸ್ ಟಿಕೆಟ್ ಬುಕ್ ಮಾಡಿದ್ದರೆ, ಆ ಊರಿಗೆ ನೀವು ಈ ದಿನ ಹೋಗುತ್ತಿದ್ದೀರಿ. ನಿಮ್ಮ ಟೆಕೆಟ್ ಕಾಯ್ದಿರಿಸಿದೆ ಎಂಬುದು ಇಲ್ಲಿ ಡಿಸ್ ಪ್ಲೇ ಆಗುತ್ತದೆ.

* ಅದರ ಕೆಳಗೆ ಇತ್ತೀಚೆಗೆ ನೀವು ಮಾಡಿದ ಸರ್ಚ್ ಮಾಡಿದ ಸ್ಥಳಗಳ ಹೆಸರು ಕಾಣಿಸುತ್ತದೆ.

* ನೀವು ಈಗಾಗಲೇ ಹೋಗಲು ಪ್ಲಾನ್ ಮಾಡಿರುವ ಸ್ಥಳದಲ್ಲಿ Continue P*anning ಎಂದು ಕ್ಲಿಕ್ ಮಾಡಿದರೆ ಅಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೋಟೆಲ್ ಗಳ ಬಗ್ಗೆ ಮಾಹಿತಿ ಡಿಸ್ ಪ್ಲೇ ಆಗುತ್ತದೆ.

* ವಿಮಾನ ಪ್ರಯಾಣ ದರ ಬಗ್ಗೆಯೂ ಮಾಹಿತಿ

* ನೀವು ಪ್ರವಾಸ ಮಾಡಲು ಬಯಸಿರುವ ಸ್ಥಳಕ್ಕೆ ವಿಮಾನ ಸೌಕರ್ಯವಿದ್ದರೆ ಕಡಿಮೆ ವೆಚ್ಚದ ವಿಮಾನ ಪ್ರಯಾಣದದ ಬಗ್ಗೆಯೂ ಇಲ್ಲಿ ಮಾಹಿತಿ ಲಭ್ಯವಾಗುತ್ತದೆ,

Expore ಮಾಡಿ
* ಯಾವ ಸ್ಥಳಗಳಲ್ಲಿ ಯಾವ ರೀತಿಯ ಹವೆ ಇದೆ, ರೋಡ್ ಟ್ರಿಪ್ ಗೆ ಯಾವುದು ಸೂಕ್ತ , ಅಲ್ಲಿನ ಜನಪ್ರಿಯ ಪ್ರದೇಶಗಳು ಯಾವುದು, ಊಟ, ತಿಂಡಿ, ಒಂದು ದಿನದಲ್ಲಿ ನೋಡ ಬಹುದಾದ ಸ್ಥಳ ಎಲ್ಲದಕ್ಕೂ ಇಲ್ಲಿ ಗೂಗಲ್ ಸಲಹೆ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT