ಗುರುವಾರ , ನವೆಂಬರ್ 26, 2020
22 °C

ಮರುಬಳಕೆ ವಸ್ತುಗಳಿಂದ ಗೂಗಲ್‌ ಸಾಧನಗಳ ತಯಾರಿ; ಪರಿಸರ ಸ್ನೇಹಿಯಾಗುವ ಗುರಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಗೂಗಲ್‌ ಪಿಕ್ಸೆಲ್‌ ಫೋನ್‌–ಸಾಂದರ್ಭಿಕ ಚಿತ್ರ

ಕ್ಯಾಲಿಫೋರ್ನಿಯಾ: ಮರುಬಳಕೆ ವಸ್ತುಗಳನ್ನೇ ಬಳಸಿ ಸಾಧನಗಳನ್ನು ತಯಾರಿಸುವ ಗುರಿಯನ್ನು ಸಾಧಿಸಿರುವುದಾಗಿ ಗೂಗಲ್‌ ಹೇಳಿಕೊಂಡಿದೆ. 2022ರ ವೇಳೆಗೆ ಮರುಬಳಕೆಯ ವಸ್ತುಗಳನ್ನೇ ಉಪಯೋಗಿಸಿ ತನ್ನ ಎಲ್ಲ ಪ್ರಾಡಕ್ಟ್‌ಗಳನ್ನು ಸಿದ್ಧಪಡಿಸುವ ಯೋಜನೆ ರೂಪಿಸಿತ್ತು.

ಪಿಕ್ಸೆಲ್‌ 5 ಫೋನ್‌ನ ಬ್ಯಾಕ್‌ ಕವರ್‌ ಶೇ 100ರಷ್ಟು ಮರುಬಳಕೆ ಮಾಡಿದ ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ. ಇನ್ನೂ ಹೊಸ 'ನೆಸ್ಟ್‌ ಆಡಿಯೊ' ಸಾಧನವು ಶೇ 70ರಷ್ಟು ಮರುಬಳಕೆ ಪ್ಲಾಸ್ಟಿಕ್‌ನಿಂದಾಗಿದೆ. ನೆಸ್ಟ್ ಥರ್ಮೊಸ್ಟ್ಯಾಟ್‌ನ ಟ್ರಿಮ್‌ ಪ್ಲೇಟ್‌ (ಗೋಡೆಗೆ ಅಂಟಿಸುವ ಭಾಗ) ಸಹ ಮರುಬಳಕೆ ಪ್ಲಾಸ್ಟಿಕ್‌ನಿಂದ ಸಿದ್ಧಪಡಿಸಲಾಗಿದೆ ಎಂದು ಗೂಗಲ್‌ ಮಾಹಿತಿ ನೀಡಿದೆ.

'ಗೂಗಲ್‌ನ ಎಲ್ಲ ಮಾದರಿಯ ಪಿಕ್ಸೆಲ್‌ ಫೋನ್‌ಗಳು ಹಾಗೂ ನೆಸ್ಟ್‌ ಸಾಧನಗಳನ್ನು ಮರುಬಳಕೆ ವಸ್ತುಗಳನ್ನೇ ಬಳಸಿ ವಿನ್ಯಾಸಗೊಳಿಸಲಾಗುತ್ತಿದೆ. ಇಡೀ ಪ್ರಾಡಕ್ಟ್‌ ಸಂಪೂರ್ಣ ಮರುಬಳಕೆಯ ವಸ್ತುಗಳಿಂದಲೇ ಆಗಿದೆ ಎಂದು ಹೇಳಲಾಗದು, ಆದರೆ ಪ್ರಾಡಕ್ಟ್‌ಗಳಲ್ಲಿ ಮರುಬಳಕೆ ವಸ್ತುಗಳು ಸೇರಿರುತ್ತವೆ' ಎಂದು ಗೂಗಲ್‌ನ ಸುಸ್ಥಿರತೆ ವ್ಯವಸ್ಥೆ ವಿನ್ಯಾಸಕ ಡೇವಿಡ್‌ ಬೋರ್ನ್ ಹೇಳಿದ್ದಾರೆ.

ಗೂಗಲ್‌ 2030ರ ವೇಳೆಗ ಕಾರ್ಬನ್‌ (ಇಂಗಾಲ) ಮುಕ್ತ ಕಾರ್ಯಾಚರಣೆ ನಡೆಸುವ ಗುರಿ ಹೊಂದಿದೆ. ಇನ್ನೂ ಪ್ರಾಡಕ್ಟ್‌ಗಳ ತಯಾರಿಕೆಯಲ್ಲಿ ನಿರುಪಯುಕ್ತವಾಗಿ ಉಳಿಯುವ ವಸ್ತುಗಳನ್ನು ಕೂಡ ಮರುಬಳಕೆ ಮಾಡುವ ಮೂಲಕ 'ಶೂನ್ಯ ಕಸ' ಉತ್ಪಾದನೆಗೂ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ಸಾಧನಗಳ ಪ್ಯಾಕೇಜಿಂಗ್‌ನಲ್ಲಿ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಲು ಪ್ರಯತ್ನಿಸಲಾಗುತ್ತಿದೆ.

ಪಿಕ್ಸೆಲ್‌ ಫೋನ್‌ಗಳು, ಪಿಕ್ಸೆಲ್‌ ಬುಕ್ಸ್‌, ಗೂಗಲ್‌ ಹೋಂ ಸ್ಪೀಕರ್‌ಗಳು, ನೆಸ್ಟ್‌ ಸಾಧನಗಳು ಹಾಗೂ ಫೋನ್‌ ಕೇಸ್‌ಗಳು, ಚಾರ್ಜಿಂಗ್‌ ಸ್ಟ್ಯಾಂಡ್‌ಗಳನ್ನು ಗೂಗಲ್‌ ತಯಾರಿಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು