ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021: ಭಾರತೀಯರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ್ದೇನು?

Last Updated 9 ಡಿಸೆಂಬರ್ 2021, 7:33 IST
ಅಕ್ಷರ ಗಾತ್ರ

ಬೆಂಗಳೂರು: ಈ ವರ್ಷ ದೇಶದಲ್ಲಿ ಗೂಗಲ್ ಬಳಕೆದಾರರು ಅತಿಹೆಚ್ಚು ಯಾವ ವಿಚಾರವಾಗಿ ಹುಡುಕಾಟ ನಡೆಸಿದ್ದಾರೆ ಎನ್ನುವ ಬಗ್ಗೆ ವರದಿ ಪ್ರಕಟಿಸಿದೆ.

ಕೋವಿಡ್ ಲಾಕ್‌ಡೌನ್ ಮತ್ತು ವರ್ಕ್ ಫ್ರಮ್ ಹೋಮ್ ಹೊರತಾಗಿ ಜನರು ‘Indian Premier League', ‘CoWIN', ‘ICC T20 World Cup', ‘Euro Cup', ಮತ್ತು ‘Tokyo Olympics' ಎಂಬ ವಿಚಾರಗಳ ಕುರಿತು ಅತಿ ಹೆಚ್ಚು ಹುಡುಕಾಡಿದ್ದಾರೆ.

ಈ ಐದು ವಿಚಾರಗಳು ಗೂಗಲ್ ಸರ್ಚ್ ಟಾಪ್ 5 ಪಟ್ಟಿಯಲ್ಲಿವೆ.

ಕೋವಿಡ್ ಲಸಿಕೆ ಮತ್ತು ಕೋವಿನ್ ಅಪ್ಲಿಕೇಶನ್ ಬಗ್ಗೆ ಗೂಗಲ್ ಕೂಡ ಹೆಚ್ಚಿನ ಪ್ರಚಾರ ಮಾಡುವ ಮೂಲಕ ಲಸಿಕೆ ಪಡೆದುಕೊಳ್ಳಲು ಜಾಗೃತಿ ಮೂಡಿಸಿತ್ತು.

ಉಳಿದಂತೆ, ಆಕ್ಸಿಜನ್ ಸಿಲಿಂಡರ್ ಮತ್ತು ಸಿಟಿ ಸ್ಕ್ಯಾನ್ ಕುರಿತು ಕೂಡ ಜನರು ಹುಡುಕಾಟ ನಡೆಸಿದ್ದಾರೆ.

ಜತೆಗೆ ಹೇಗೆ ಮತ್ತು ಏನು ಎನ್ನುವ ಬಗ್ಗೆಯೂ ಕೋವಿಡ್ ಲಸಿಕೆ, ಲಸಿಕೆ ಪ್ರಮಾಣಪತ್ರದ ಕುರಿತು ಜನರು ಗೂಗಲ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT