ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅತ್ಯುತ್ತಮ ಉದ್ಯಮಶೀಲ ಶಾಲೆ’: ಗ್ರೀನ್‌ವುಡ್‌ ಹೈ ಇಂಟರ್‌ನ್ಯಾಷನಲ್‌ ಸ್ಕೂಲ್‌

Last Updated 17 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಸರ್ಜಾಪುರದಲ್ಲಿರುವ ಗ್ರೀನ್‌ವುಡ್‌ ಹೈ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ಮೂವರು ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿ ಜನರಿಗೆ ಉಪಯುಕ್ತವಾಗುವ ಆ್ಯಪ್‌ ಮತ್ತು ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಪುಣೆಯಲ್ಲಿ ಜರುಗಿದ ರಾಷ್ಟ್ರಮಟ್ಟದ ಇನೊವೆಂಚರ್‌ ಸ್ಪರ್ಧೆಯಲ್ಲಿ ಭಾಗವಹಿಸಿಅವರು ಬಹುಮಾನ ಗಳಿಸಿದ್ದಾರೆ.

ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 400 ಶಾಲೆಗಳ ವಿದ್ಯಾರ್ಥಿಗಳಲ್ಲಿ 110 ಶಾಲೆಗಳ 200 ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಅರ್ಹತೆಗಳಿಸಿದ್ದರು. ಈ ಮೂರು ವಿದ್ಯಾರ್ಥಿಗಳ ಹೊಸ ಆವಿಷ್ಕಾರಗಳಿಂದ ಗ್ರೀನ್‌ವುಡ್‌ ಶಾಲೆಗೆ ‘ಅತ್ಯುತ್ತಮ ಉದ್ಯಮಶೀಲ ಶಾಲೆ’ ಎಂಬ ಕೀರ್ತಿಯೂ ಲಭಿಸಿತು.

ಏಳನೇ ತರಗತಿಯ ವಿದ್ಯಾರ್ಥಿ ಕಾರ್ತಿಕ್‌ ಘೋಷಾಲ್‌ (ಪ್ರಥಮ), ಏಳನೇ ತರಗತಿಯ ಅನ್ಷ ಕುಂದು ಹಾಗೂ 6ನೇ ತರಗತಿಯ ವೇದಾಂತ ನಾರಾಯಣಸ್ವಾಮಿ (ದ್ವಿತೀಯ) ಬಹುಮಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಕಾರ್ತಿಕ್‌ ಘೋಷಾಲ್‌: ಮಕ್ಕಳು ಹಣ ಖರ್ಚು ಮಾಡುವುದರ ಮೇಲೆ ಪೋಷಕರ ಕಣ್ಗಾವಲಿಡಬಹುದಾದ ಆ್ಯಪ್‌ ಅನ್ನು ಘೋಷಾಲ್‌ ಅಭಿವೃದ್ಧಿ ಮಾಡಿದ್ದಾರೆ. ಮಕ್ಕಳು ಎಲ್ಲಿ ಎಷ್ಟು ಖರ್ಚು ಮಾಡಿದ್ದಾರೆ, ಆನ್‌ಲೈನ್‌, ಎಟಿಎಂಗಳಲ್ಲಿ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಬಳಸಿ ಎಷ್ಟು ವ್ಯಯಿಸಿದ್ದಾರೆ ಎಂಬುದರ ಮಾಹಿತಿ ಪೋಷಕರ ಮೊಬೈಲ್‌ಗೆ ಬರುವಂತೆ ಈ ಆ್ಯಪ್‌ ಮಾಡುತ್ತದೆ.

ಅನ್ಷ ಕುಂದು: ಪ್ರವಾಹ ಎದುರಾದಾಗ ಪ್ರಾಣಿಗಳನ್ನು ರಕ್ಷಿಸುವುದಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಯೋಜನೆಗೆ ದ್ವಿತೀಯ ಸ್ಥಾನ ದೊರೆತಿದೆ.

ವೇದಾಂತ ನಾರಾಯಣ ಸ್ವಾಮಿ: ಮಾಲ್‌, ಬಹು ಮಹಡಿ ಕಟ್ಟಡಗಳಲ್ಲಿ ಪಾರ್ಕಿಂಗ್‌ ತಾಣವನ್ನು ಹುಡುಕಲು ಸರಳವಾಗುವಂತ ಆ್ಯಪ್‌ ಸಿದ್ಧಪಡಿಸಿ ಎರಡನೇ ಬಹುಮಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT