ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಬ್‌ ಕಂಡಿದ್ದೀರಾ?

Last Updated 24 ಜುಲೈ 2019, 19:30 IST
ಅಕ್ಷರ ಗಾತ್ರ

ನೀವು ಎಲ್ಲಾದರೂ ತಿರುಗಾಡುವಾಗ ಎಷ್ಟು ಜನರ ಕೈಯಲ್ಲಿ ಟ್ಯಾಬ್ಲೆಟ್‌ ಇದೆ ಎನ್ನುವುದನ್ನು ಗಮನಿಸಿದ್ದೀರಾ? ನನಗಂತೂ ಒಂದೇ ಒಂದು ಟ್ಯಾಬ್‌ ಕಂಡಿಲ್ಲ. ಎಲ್ಲಿ ನೋಡಿದರೂ ಸ್ಮಾರ್ಟ್‌ಫೋನ್‌ಗಳೇ ಕಾಣುತ್ತಿವೆ.

ಏಕೀ ಪ್ರಶ್ನೆ ಎಂದರೆ, ಟ್ಯಾಬ್ಲೆಟ್‌ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಅದು ಲ್ಯಾಪ್‌ಟಾಪ್‌, ಡೆಸ್ಕ್ ಟಾಪ್‌ ಕಂಪ್ಯೂಟರ್‌ಗೆ ಪರ್ಯಾಯ ಆಗಲಿದೆ ಎಂದೇ ಬಿಂಬಿಸಲಾಗಿತ್ತು. 6 ಇಂಚಿನ ಪರದೆ, ಸುಲಭವಾಗಿ ಸಾಗಿಸಬಹುದಾದ ಗಾತ್ರದಿಂದಾಗಿ ಟೆಕ್‌ ಪ್ರಿಯರನ್ನು ಸೆಳೆದಿತ್ತು. ಆದರೆ, ಪರ್ಯಾಯವಾಗಿ ರೂಪುಗೊಳ್ಳುವಲ್ಲಿ ಹಿನ್ನಡೆ ಅನುಭವಿಸಿದೆ.

ಆನ್‌ಲೈನ್‌ ಬಳಸುವವರಲ್ಲಿ ಅರ್ಧಕ್ಕೂ ಹೆಚ್ಚಿನವರು ಲ್ಯಾಪ್‌ಟಾಪ್‌ ಅಥವಾ ಡೆಸ್ಕ್‌ಟಾಪ್‌ಗಿಂತಲೂ ಮೊದಲ ಟ್ಯಾಬ್ಲೆಟ್‌ ಅಥವಾ ಸ್ಮಾರ್ಟ್‌ಫೋನ್‌ ಬಳಸುತ್ತಾರೆ ಎಂದು ಐದು ವರ್ಷಗಳ ಹಿಂದೆ ಗಾರ್ಟ್‌ನರ್‌ ಸಂಸ್ಥೆ ಅಂದಾಜು ಮಾಡಿತ್ತು. ಆದರೆ ಸದ್ಯದ ಮಾರುಕಟ್ಟೆ ಪಾಲು ಗಮನಿಸಿದರೆ, ಟ್ಯಾಬ್ಲೆಟ್‌ ಬಳಕೆ ಕ್ಷೀಣಿಸುತ್ತಲೇ ಇದೆ ಎನ್ನುವುದು ತಿಳಿಯುತ್ತದೆ.

ಡೆಸ್ಕ್‌ಟಾಪ್‌ ಆದರೆ ಮನೆ ಅಥವಾ ಕಚೇರಿಯಲ್ಲಿ ಮಾತ್ರ ಬಳಸಬಹುದು. ಇನ್ನು ಲ್ಯಾಪ್‌ಟಾಪ್‌ ಗಾತ್ರದಲ್ಲಿ ದೊಡ್ಡದಾಗಿರು ವುದರಿಂದ ಕೊಂಡೊಯ್ಯಲು ಅದಕ್ಕೆಂದೇ ಪ್ರತ್ಯೇಕ ಬ್ಯಾಗ್‌ ಬೇಕು. ಈ ಸಮಸ್ಯೆಗಳಿಗೆ ಟ್ಯಾಬ್ಲೆಟ್‌ ಉತ್ತಮ ಪರಿಹಾರ ಎನ್ನುವ ಭಾವನೆ ಬಳಕೆಗೂ ಮುನ್ನವೇ ಬಹಳಷ್ಟು ಜನರಲ್ಲಿ ಮೂಡಿತ್ತು. ಆದರೆ, ವಾಸ್ತವದಲ್ಲಿ ಹಾಗಿಲ್ಲ. ಭೌತಿಕವಾದ ಕಿಬೋರ್ಡ್‌ ಇಲ್ಲದೇ ಟೈಪಿಂಗ್‌ ಮಾಡುವುದು ರಗಳೆ, ಅದರಲ್ಲಿಯೂ ಕಚೇರಿ ಕೆಲಸಗಳನ್ನು ಮಾಡುವುದು ಕಷ್ಟವಾಗುತ್ತದೆ ಎನ್ನುವುದು ನಿಧಾನವಾಗಿ ಅರಿವಾಗತೊಡಗಿತು. ಇದರಿಂದ ಮತ್ತೆ ಲ್ಯಾಪ್‌ಟಾಪ್‌ ಬಳಕೆ ಆರಂಭವಾಯಿತು.

ಸ್ಮಾರ್ಟ್‌ಫೋನ್‌ ಪರದೆಯೇ ಹಿಗ್ಗುತ್ತಿರುವುದರಿಂದ ಟ್ಯಾಬ್‌ ಬಳಕೆ ಕುಗ್ಗುತ್ತಿದೆ ಎನ್ನುವ ವಾದವೂ ಇದೆ. ಟ್ಯಾಬ್‌ಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ, ಸ್ಮಾರ್ಟ್‌ಫೋನ್‌ಗಳು ಹಾಗಿಲ್ಲ. ಸುಲಭವಾಗಿ ಜೇಬಲ್ಲಿ ಇಳಿದುಬಿಡುತ್ತವೆ. ಫೋಲ್ಡಿಂಗ್‌ ಫೋನ್‌ಗಳು ಬಂದರಂತೂ ಆಗ ಮತ್ತಷ್ಟು ಸರಳವಾಗಲಿದೆ. ಸ್ಮಾರ್ಟ್‌ಫೋನ್‌ ಸಹ ಟ್ಯಾಬ್‌ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿದೆ.

ದೊಡ್ಡ ಪರದೆಯ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಹೆಚ್ಚಿದೆ. 6 ಇಂಚು ಅಥವಾ ಅದಕ್ಕಿಂತ ಹೆಚ್ಚಿನ ಗಾತ್ರದ ಪರದೆ ಇರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಆ್ಯಪಲ್‌ ಕಂಪನಿಯ 6.5 ಇಂಚು ಪರದೆಯ ಐಫೋನ್‌ 10ಎಸ್‌ ಮ್ಯಾಕ್ಸ್‌, ಸ್ಯಾಮ್ಸಂಗ್‌ನ 6.4 ಇಂಚಿನ ಗ್ಯಾಲಕ್ಸಿ ಎಸ್‌10 ಪ್ಲಸ್‌, ಸ್ಯಾಮ್ಸಂಗ್‌ನ ಗ್ಯಾಲಕ್ಸಿ ಫೋಲ್ಡ್‌ ಪರದೆ ಬಿಡಿಸಿದಾಗ 7.3 ಇಂಚಿಗೆ ಹಿಗ್ಗುತ್ತದೆ. ಹೀಗಿರುವಾಗ ಟ್ಯಾಬ್ಲೆಟ್‌ ಅಗತ್ಯವಾದರೂ ಏನು ಎನ್ನುವುದು ತಜ್ಞರ ಪ್ರಶ್ನೆ

ಎಲ್ಲಿ ಕಾಣಬಹುದು: ಸಣ್ಣ ಉದ್ದಿಮೆ ನಡೆಸುವವರು, ರೆಸ್ಟೋರೆಂಟ್‌ಗಳಲ್ಲಿ ಪಾಯಿಂಟ್‌ ಆಫ್‌ ಸೇಲ್‌ಗೆ ಬಳಕೆಯಾಗುತ್ತಿದೆ. ಸರಕುಗಳ ದಾಸ್ತಾನು ಪಟ್ಟಿ ನಿಯಂತ್ರಿಸುವಂತಹಾ ಕೆಲಸಗಳಲ್ಲಿಯೂ ಬಳಕೆಯಾಗುತ್ತಿದೆ.

ಯಾವುದು, ಎಷ್ಟು?

ಸ್ಮಾರ್ಟ್‌ಫೋನ್‌ - 54%

ಡೆಸ್ಕ್ ಟಾಪ್‌ ಮತ್ತು ಲ್ಯಾಪ್‌ಟಾಪ್‌ -41%

ಟ್ಯಾಬ್ಲೆಟ್ಸ್‌ -5%

ಮಾಹಿತಿ: ನೆಟ್‌ಮಾರ್ಕೆಟ್‌ ಷೇರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT