ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುವಾದಿಸಲು ಗೂಗಲ್‌ಗೆ ನೆರವಾಗಿ

Last Updated 7 ಆಗಸ್ಟ್ 2019, 8:42 IST
ಅಕ್ಷರ ಗಾತ್ರ

ಯಾವುದೇ ಭಾಷೆಯಿರಲಿ ಆ ಭಾಷೆ ನಮಗೆ ಅರ್ಥವಾಗದೇ ಇದ್ದರೆ ಅದರ ಅನುವಾದ ಏನು ಎಂಬುದನ್ನು ಅರಿಯಲು ನಾವು ಗೂಗಲ್ ಮೊರೆ ಹೋಗುವುದು ಸಹಜ. ಗೂಗಲ್ ಟ್ರಾನ್ಸ್‌ಲೇಟ್ ಓಪನ್ ಮಾಡಿದರೆ ಯಾವುದೇ ಭಾಷೆಯ ಪದಗಳನ್ನು ನಮ್ಮ ಭಾಷೆಗೆ ಅನುವಾದ ಮಾಡಿಕೊಂಡು ಅದರ ಅರ್ಥ ತಿಳಿದುಕೊಳ್ಳಬಹುದು.

ಈ ರೀತಿ ಗೂಗಲ್ ಟ್ರಾನ್ಸ್‌ಲೇಟರ್‌ನ ಮೊರೆ ಹೋದಾಗ ಕೆಲವೊಂದು ವಾಕ್ಯಗಳು ಸರಿಯಾಗಿ ಅನುವಾದವಾಗಿರುವುದಿಲ್ಲ. ಇಂಗ್ಲಿಷ್‌ನಲ್ಲಿರುವ ಒಂದು ವಾಕ್ಯವನ್ನು ಕನ್ನಡಕ್ಕೆ ಅನುವಾದ ಮಾಡಿದಾಗ ಕೆಲವು ಪದಗಳ ಅರ್ಥವೇ ಬದಲಾಗಿರುತ್ತದೆ.
ಈ ರೀತಿಯ ಅನುವಾದಗಳು ಕಂಡು ಬಂದಾಗ ನಾವು ಗೂಗಲ್‌ ಅನ್ನು ದೂರುವ ಬದಲು ಗೂಗಲ್ ಅನುವಾದಕ್ಕೆ ನಮ್ಮಿಂದಾದ ಸಹಕಾರವನ್ನು ಮಾಡಬಹುದು.

ಗೂಗಲ್‌ಗೆ ಅನುವಾದ ಮಾಡಲು ಸಹಕರಿಸಿ
1. https://translate.google.com ಲಿಂಕ್ ಕ್ಲಿಕ್ ಮಾಡಿ
2.ಗೂಗಲ್ ಖಾತೆಗೆ ಲಾಗಿನ್ ಆಗಿ
3. ಯಾವ ಭಾಷೆಗೆ ಅನುವಾದ ಮಾಡಲು ನಿಮಗೆ ಇಷ್ಟವೋ, ಆ ಭಾಷೆಯ ಮೇಲೆ ನಿಮಗೆ ಹಿಡಿತ ಇದ್ದರೆ ಆ ಭಾಷೆಯನ್ನು ಆಯ್ಕೆ ಮಾಡಿ. ಉದಾಹರಣೆಗೆ ಕನ್ನಡ ಭಾಷೆ ನಿಮಗೆ ತಿಳಿದಿದ್ದರೆ ಇಂಗ್ಲಿಷ್‌ನಿಂದ ಕನ್ನಡ ಭಾಷೆ ಅನುವಾದ ಮಾಡಲು ಸಹಕರಿಸಬಹುದು.

4. Translate ಕ್ಲಿಕ್ ಮಾಡಿ

5.ಇಲ್ಲಿ ನಿಮಗೆ ಗೂಗಲ್ ಕೆಲವು ವಾಕ್ಯಗಳನ್ನು ನೀಡುತ್ತದೆ. ಅದನ್ನು ಕನ್ನಡಕ್ಕೆ ಅನುವಾದ ಮಾಡಿ. ನಿಮಗೆ ಆ ವಾಕ್ಯವನ್ನು ಅನುವಾದ ಮಾಡಲು ಸಾಧ್ಯವಾಗದೇ ಇದ್ದರೆ Skip ಮಾಡಿ ಮುಂದಿನ ವಾಕ್ಯವನ್ನು ಅನುವಾದ ಮಾಡಬಹುದು.

6. ಪ್ರತಿ ಬಾರಿ 10 ವಾಕ್ಯಗಳನ್ನು ಅನುವಾದ ಮಾಡುವ ಕೆಲಸವನ್ನು ಗೂಗಲ್ ನಿಮಗೆ ನೀಡುತ್ತದೆ. ಅದರಲ್ಲಿ ನಿಮಗೆ ಎಷ್ಟು ಸಾಧ್ಯವೋ ಅಷ್ಟು ವಾಕ್ಯಗಳನ್ನು ಅನುವಾದ ಮಾಡಬಹುದು. ಹೀಗೆ ನೂರು ವಾಕ್ಯಗಳನ್ನು ಅನುವಾದ ಮಾಡಿದರೆ Badges ಸಿಗುತ್ತದೆ.

ಅನುವಾದ ತಪ್ಪಾಗಿದ್ದರೆ ತಿದ್ದಿ

ಕೆಲವೊಂದು ಅನುವಾದಗಳು ತಪ್ಪಾಗಿ ಇರುತ್ತವೆ. ಉದಾಹರಣೆಗೆ cigarette smoking is injurious to health ಎಂಬುದನ್ನು ಗೂಗಲ್ ಟ್ರಾನ್ಸ್ ಲೇಟ್ ಅನುವಾದ ಮಾಡಿದರೆಸಿಗರೆಟ್ ಧೂಮಪಾನ ಆರೋಗ್ಯಕ್ಕೆ ಹಾನಿಯಾಗಿದೆ ಎಂಬ ವಾಕ್ಯ ಸಿಗುತ್ತದೆ. ಇಲ್ಲಿ ವಾಕ್ಯ ರಚನೆ ಸರಿಯಾಗಿಲ್ಲ. ಅದನ್ನು ನಾವೇ ತಿದ್ದಿ ಸರಿ ಮಾಡಬಹುದು. ಕನ್ನಡ ಅನುವಾದದ ಬಾಕ್ಸ್‌ನಲ್ಲಿ ಕೆಳಗೆ suggest an edit ಎಂದು ಕಾಣುತ್ತದೆ. ಅಲ್ಲಿ ಕ್ಲಿಕ್ ಮಾಡಿ ಸರಿಯಾದ ಅನುವಾದವನ್ನು ಟೈಪ್ ಮಾಡಿ submit ಒತ್ತಿದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT