ಗೂಗಲ್ ಕ್ರೋಮ್ Sync ಡಿಸೇಬಲ್ ಮಾಡುವುದು ಹೇಗೆ?

7

ಗೂಗಲ್ ಕ್ರೋಮ್ Sync ಡಿಸೇಬಲ್ ಮಾಡುವುದು ಹೇಗೆ?

Published:
Updated:

ಕ್ರೋಮ್ Sync ಡಿಸೇಬಲ್ ಮಾಡುವುದು ಹೇಗೆ?

ಗೂಗಲ್ ಕ್ರೋಮ್ ಬ್ರೌಸರ್ ಬಳಸುತ್ತಿರುವವರಿಗೆ ಗೊತ್ತಿರಬಹುದು. ಈ ಬ್ರೌಸರ್ ನಲ್ಲಿ ನಾವು ಸೇವ್ ಮಾಡಿದ ಬುಕ್ ಮಾರ್ಕ್ಸ್ , ಪಾಸ್ವರ್ಡ್ ಮತ್ತು ಇತರ ಸೆಟ್ಟಿಂಗ್ಸ್ಗಳನ್ನು ಗೂಗಲ್ ಖಾತೆಗೆ ಸಿಂಕ್ ಮಾಡುವ ಮೂಲಕ ಎಲ್ಲವನ್ನೂ ಸೇವ್ ಮಾಡಬಹುದು.

ಹೀಗೆ ಸಿಂಕ್ ಆಗಿರುವ ಸೆಟ್ಟಿಂಗ್‌ಗಳನ್ನು ಗೂಗಲ್ ಖಾತೆಗೆ ಕನೆಕ್ಟ್ ಆಗಿರುವ ಎಲ್ಲ ಡಿವೈಸ್ಗಳಲ್ಲಿ ನೀವು ನೋಡಬಹುದಾಗಿದೆ. ಒಂದು ವೇಳೆ ನಿಮ್ಮ ಗೂಗಲ್ ಖಾತೆಗೆ ಈ ಸೆಟ್ಟಿಂಗ್ಗಳು ಸಿಂಕ್ ಆಗುವುದು ಬೇಡ ಎಂದಿದ್ದರೆ ಅದನ್ನು ಡಿಸೇಬಲ್ ಮಾಡಬಹುದು.

ಹೀಗೆ ಮಾಡಿ

ಕಂಪ್ಯೂಟರ್‌ನಲ್ಲಾದರೆ ಗೂಗಲ್ ಕ್ರೋಮ್ ಬ್ರೌಸರ್ ಓಪನ್ ಮಾಡಿ, ಡ್ರಾಪ್ ಡೌನ್ ಮೆನು ಕ್ಲಿಕ್ಕಿಸಿ

ಮೆನುನಲ್ಲಿ ಸೆಟ್ಟಿಂಗ್ಸ್ ಆಯ್ಕೆ ಮಾಡಿ. ಅಲ್ಲಿ people ಕೆಳಗೆ ನಿಮ್ಮ ಗೂಗಲ್ ಖಾತೆಯ ಮುಂದೆ Turn off ಬಟನ್ ಕಾಣುತ್ತದೆ. ಈ ಬಟನ್ ಕ್ಲಿಕ್ ಮಾಡಿದ ಕೂಡಲೇ ನೀವು ಗೂಗಲ್ ಖಾತೆಯಿಂದ ಸೈನ್ ಔಟ್ ಆಗುತ್ತೀರಿ. ಒಂದು ವೇಳೆ ಸಿಂಕ್ ಎನೇಬಲ್ ಮಾಡಬೇಕು ಎಂದಾದರೆ ಗೂಗಲ್ ಕ್ರೋಮ್ ಗೆ ಸೈನ್ ಇನ್ ಆದರೆ ಸಾಕು.

ಅಂಡ್ರಾಯ್ಡ್ ಫೋನ್‌ನಲ್ಲಿ

ಗೂಗಲ್ ಕ್ರೋಮ್ app ಓಪನ್ ಮಾಡಿ. ಹೊಸ ಆವೃತ್ತಿಯ ಕ್ರೋಮ್ app ಇಲ್ಲದೇ ಇದ್ದರೆ, app ಅಪ್ಡೇಟ್ ಮಾಡಿಕೊಳ್ಳಿ.

ಮೆನು -> ಸೆಟ್ಟಿಂಗ್ಸ್ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಗೂಗಲ್ ಇಮೇಲ್ ಐಡಿ ಕಾಣಿಸುತ್ತದೆ. ಅದರ ಕೆಳಗೆ ಸಿಂಕ್ ಆಪ್ಶನ್ ಇದೆ. ಸಿಂಕ್ ಆಪ್ಶನ್ನ್ನು ಟರ್ನ್ ಆಫ್ ಮಾಡಿ. ಒಂದಕ್ಕಿಂತ ಹೆಚ್ಚು ಗೂಗಲ್ ಖಾತೆ ಹೊಂದಿದ್ದರೆ ಯಾವ ಗೂಗಲ್ ಖಾತೆಗೆ ಸಿಂಕ್ ಮಾಡಬೇಕು ಎಂಬುದನ್ನೂ ನೀವು ಇಲ್ಲಿ ಆಯ್ಕೆ ಮಾಡಬಹುದು.

ಗಮನಿಸಿ, ಗೂಗಲ್ ಖಾತೆಗೆ ನಿಮ್ಮ ಫೋನ್ನಲ್ಲಿರುವ ಸಂಪರ್ಕ ಸಂಖ್ಯೆಗಳು ಸಿಂಕ್ ಆಗಿದ್ದರೆ ಒಳ್ಳೆಯದು. ಫೋನ್ ಕಳೆದುಕೊಂಡರೂ ಈ ಎಲ್ಲ ಮಾಹಿತಿಗಳು ನಿಮ್ಮ ಗೂಗಲ್ ಖಾತೆಯಲ್ಲಿ ಸುರಕ್ಷಿತವಾಗಿರುತ್ತವೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !