ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೋಮ್‌ ಬ್ರೌಸರ್‌ನಲ್ಲಿ ಪಾಸ್‌ವರ್ಡ್ ನೋಡುವುದು ಹೇಗೆ?

Last Updated 2 ಜನವರಿ 2020, 2:25 IST
ಅಕ್ಷರ ಗಾತ್ರ

ಯಾವುದಾದರೂ ವೆಬ್‌ಸೈಟ್‌ಗೆ ಲಾಗಿನ್ ಆದಾಗ ನಿಮ್ಮ ಪಾಸ್‌ವರ್ಡ್ ಸೇವ್ ಮಾಡಬೇಕೆ? ಎಂದು ಕ್ರೋಮ್ ಬ್ರೌಸರ್ ಕೇಳಿದಾಗ ’ಯೆಸ್’ ಎಂದು ಪಾಸ್‌ವರ್ಡ್ ಸೇವ್ ಮಾಡಿರುತ್ತೀರಿ. ನಿಮ್ಮದೇ ಕಂಪ್ಯೂಟರ್ ಆಗಿದ್ದರೆ ಈ ರೀತಿ ಪಾಸ್‌ವರ್ಡ್ ಸೇವ್ ಮಾಡುವುದಾದರೆ ಸಮಸ್ಯೆ ಇಲ್ಲ. ಆದರೆ ಇನ್ನೊಬ್ಬರ ಕಂಪ್ಯೂಟರ್ ಬಳಸುವುದಾದರೆ ಯಾವತ್ತೂ ಪಾಸ್‌ವರ್ಡ್ ಸೇವ್ಮಾಡಲು ಹೋಗಬೇಡಿ.

ಕ್ರೋಮ್ ಬ್ರೌಸರ್‌ನಲ್ಲಿ ಸೇವ್ ಮಾಡಿದ ಪಾಸ್‌ವರ್ಡ್‌ಗಳು ಯಾವುದು ಎಂದು ನೋಡಬೇಕಾದರೆ ಹೀಗೆ ಮಾಡಿ
ಕ್ರೋಮ್ ಬೌಸರ್‌ನ ಬಲಭಾಗದಲ್ಲಿ ಮೆನು ಕ್ಲಿಕ್ ಮಾಡಿ ಸೆಟ್ಟಿಂಗ್ಸ್ ಆಯ್ಕೆ ಮಾಡಿ

ಪಾಸ್‌ವರ್ಡ್ಸ್ ಕ್ಲಿಕ್ ಮಾಡಿ

ಅಲ್ಲಿ ವೆಬ್‌ಸೈಟ್, ಯೂಸರ್ ನೇಮ್ ಮತ್ತು ಪಾಸ್‌ವರ್ಡ್ -ಹೀಗೆ ನೀವು ಸೇವ್ ಮಾಡಿರುವ ಪಾಸ್‌ವರ್ಡ್ ಪಟ್ಟಿ ಅಲ್ಲಿ ಕಾಣಿಸಿಕೊಳ್ಳುತ್ತದೆ.

ಪಾಸ್‌ವರ್ಡ್ ಯಾವುದು ಎಂದು ನೋಡಲು ಅಲ್ಲಿ ಐಕಾನ್ ಕ್ಲಿಕ್ ಮಾಡಿ. ಐಕಾನ್ ಕ್ಲಿಕ್ ಮಾಡಿದ ಕೂಡಲೇ ಅದು ಕಂಪ್ಯೂಟರ್ ಲಾಗಿನ್ ಪಾಸ್‌ವರ್ಡ್ ಕೇಳುತ್ತದೆ. ಲಾಗಿನ್ ಪಾಸ್‌ವರ್ಡ್ ನಮೂದಿಸಿದ ಕೂಡಲೇ ನೀವು ಸೇವ್ ಮಾಡಿರುವ ಪಾಸ್‌ವರ್ಡ್ ಡಿಸ್‌ಪ್ಲೇ ಆಗುತ್ತದೆ.

ಅಲ್ಲಿಯೇ ಬಲಭಾಗದಲ್ಲಿ ಮೆನು (ಮೂರು ಚುಕ್ಕಿ) ಕ್ಲಿಕ್ ಮಾಡಿ ಸೇವ್ ಆಗಿರುವ ಪಾಸ್‌ವರ್ಡ್ ರಿಮೂವ್ ಮಾಡಬಹುದು.

ಅಕಸ್ಮಾತ್ ನೀವು ಬೇರೆಯವರ ಕಂಪ್ಯೂಟರ್‌ನಲ್ಲಿ ಪಾಸ್‌ವರ್ಡ್ ಸೇವ್ ಮಾಡಿದ್ದರೆ ಅದನ್ನು ರಿಮೂವ್ ಮಾಡುವುದಕ್ಕೆ ಮರೆಯಬೇಡಿ.

ನೀವು ಪಾಸ್‌ವರ್ಡ್ ಅಪ್‌ಡೇಟ್ ಮಾಡಿದಾಗ ಕ್ರೋಮ್ ಬ್ರೌಸರ್ ಪಾಸ್‌ವರ್ಡ್ ಅಪ್‌ಡೇಟ್ ಮಾಡಲೇ? ಎಂದು ಕೇಳುತ್ತದೆ. ಅಪ್‌ಡೇಟ್ ಮಾಡಿಬಿಡಿ

ಈ ರೀತಿ ನಿಮ್ಮ ಪಾಸ್‌ವರ್ಡ್ ಸೇವ್ ಮಾಡಬೇಕೇ? ಎಂಬ ಪ್ರಶ್ನೆಯನ್ನು ಕ್ರೋಮ್ ಕೇಳುವುದು ಬೇಡ ಎಂದೆನಿಸಿದರೆ ಅಲ್ಲಿ Offer to save passwords ಆಫ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT