ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ನಿಂದ ದೊಡ್ಡ ಗಾತ್ರದಫೈಲ್ ಕಳುಹಿಸುವುದು ಹೇಗೆ?

Last Updated 12 ಜೂನ್ 2019, 19:30 IST
ಅಕ್ಷರ ಗಾತ್ರ

ಮೊಬೈಲ್‌ನಿಂದ ದೊಡ್ಡ ಗಾತ್ರದಫೈಲ್ ಕಳುಹಿಸುವುದು ಹೇಗೆ?
ಕಂಪ್ಯೂಟರ್‌ನಿಂದ ದೊಡ್ಡ ಗಾತ್ರದ ಫೈಲ್‌ ಕಳುಹಿಸಲು ಹಲವು ತಂತ್ರಾಂಶಗಳು ಚಾಲ್ತಿಯಲ್ಲಿವೆ. ಅದೇ ರೀತಿ ಮೊಬೈಲ್‌ ಫೋನ್‌ನಿಂದ ದೊಡ್ಡ ಗಾತ್ರದ ಫೈಲ್‌ಗಳನ್ನು ಕಳುಹಿಸಲು ಕೆಲವೊಂದು ಆ್ಯಪ್‌ಗಳಿವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.

Easy Join
ಲೋಕಲ್ ನೆಟ್‌ವರ್ಕ್‌ನಲ್ಲಿ ಫೈಲ್ ಶೇರ್ ಮಾಡುವುದಾದರೆ Easy join ಉತ್ತಮ App. ಇದರಲ್ಲಿ ads ಅಥವಾ catches ಇಲ್ಲದೇ ಇರುವುದರಿಂದ ಸುಲಭವಾಗಿ, ಇಂಟರ್‌ನೆಟ್ ಸಂಪರ್ಕ ಇಲ್ಲದೆಯೇ ಫೈಲ್‌ಗಳನ್ನು ಶೇರ್ ಮಾಡಬಹುದು. End to end encryption protection ಇಲ್ಲಿರುತ್ತದೆ. ಇನ್ನೊಂದು ಮೊಬೈಲ್‌ಗೆ ನೀವು ಸಂದೇಶ ಮತ್ತು ನೋಟಿಫಿಕೇಶನ್‌ಗಳನ್ನು ಕೂಡಾ ಕಳುಹಿಸಬಹುದು.

ಲೋಕಲ್ ನೆಟ್‌ವರ್ಕ್‌ನಲ್ಲಿ ಫೈಲ್ ಟ್ರಾನ್ಸ್ ಫರ್ ಮಾಡಲು ಹಲವಾರು app ಗಳು ಇವೆ ಆದರೂ Easy join ಅತಿ ವೇಗದಲ್ಲಿ ಫೈಲ್ ಟ್ರಾನ್ಸ್ ಫರ್ ಮಾಡುತ್ತದೆ.2

WeTransfer
Wetransfer.com
ಮೂಲಕ ಅಧಿಕ ಗಾತ್ರದ ಫೈಲ್‌ಗಳನ್ನು ಸುಲಭವಾಗಿ ಟ್ರಾನ್ಸ್ ಫರ್ ಮಾಡಬಹುದು. 2 GB – 20GB ಗಾತ್ರದ ಫೈಲ್‌ಗಳನ್ನು ಈ ಮೂಲಕ ಟ್ರಾನ್ಸ್ ಫರ್ ಮಾಡಬಹುದು. Wetransfer ಅಂಡ್ರಾಯ್ಡ್ version ಲಭ್ಯವಿದೆ. ಆದರೆ app ಡೌನ್‌ಲೋಡ್ ಮಾಡಿಕೊಳ್ಳದೆ web version ಬಳಸಿ ಫೈಲ್‌ಗಳನ್ನು ಟ್ರಾನ್ಸ್ ಫರ್ ಮಾಡಬಹುದಾಗಿದೆ. ಇಲ್ಲಿ ಫೈಲ್ ಟ್ರಾನ್ಸ್ ಫರ್ ಮಾಡುವುದು ತುಂಬಾ ಸುಲಭ. ಇನ್ನೊಬ್ಬರಿಗೆ ಫೈಲ್ ಕಳುಹಿಸುವುದಾದರೆ ಅವರ ಇಮೇಲ್ ಮತ್ತು ನಿಮ್ಮ ಇಮೇಲ್ ವಿಳಾಸ ನಮೂದಿಸಿ, ಫೈಲ್ ಲಗತ್ತಿಸಿ. ಸಂದೇಶ ನಮೂದಿಸುವುದಕ್ಕೂ ಇಲ್ಲಿ ಅವಕಾಶವಿದೆ.

Send Anywhere
Send Anywhere app ಬಳಸಿ ಗರಿಷ್ಠ 50 GB ಗಾತ್ರದ ಫೈಲ್‌ಗಳನ್ನು ಕಳುಹಿಸಬಹುದು. ಇದರಲ್ಲಿ 256 bit encrypted ಆಗಿದ್ದು, ನೀವು ಇನ್ನೊಬ್ಬರಿಗೆ ಫೈಲ್ ಕಳುಹಿಸಿಕೊಡುವಾಗ ನಿಮಗೊಂದು key ಸಿಗುತ್ತದೆ. ಅದನ್ನು ನಿಮ್ಮ ಫೈಲ್ ಸ್ವೀಕರಿಸುತ್ತಿರುವವರಿಗೆ ನೀಡಿದರೆ ಮಾತ್ರ ಅವರು ಆ ಫೈಲ್ ಪಡೆಯಲು ಸಾಧ್ಯ

ಗೂಗಲ್ ಡ್ರೈವ್
ಗೂಗಲ್ ಖಾತೆಗೆ ಲಾಗಿನ್ ಆಗಿ ಗೂಗಲ್ ಡ್ರೈವ್ ಮೂಲಕ ಫೈಲ್ ಕಳುಹಿಸಬಹುದು. ಇಲ್ಲಿ 10GB ಗಾತ್ರದ ಫೈಲ್‌ಗಳನ್ನು ಕಳುಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT