ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ಫ್ಲಿಕ್ಸ್‌ ವೀಕ್ಷಣೆಗೆ ನಾಲ್ಕು ಆಯ್ಕೆ: ತಿಂಗಳಿಗೆ ₹199  

Last Updated 11 ಮಾರ್ಚ್ 2020, 10:38 IST
ಅಕ್ಷರ ಗಾತ್ರ

ಜಾಗತಿಕ ಮಟ್ಟದಲ್ಲಿ ಮನರಂಜನಾ ಕಾರ್ಯಕ್ರಮಗಳಿಗೆ ವೇದಿಕೆಯಾಗಿರುವ ನೆಟ್‌ಫ್ಲಿಕ್ಸ್‌ ಓವರ್‌ ದಿ ಟಾಪ್‌ (ಒಟಿಟಿ) ಸೇವೆ ಪಡೆಯಲು ಭಾರತದಲ್ಲಿ ನಾಲ್ಕು ಆಯ್ಕೆಗಳಿವೆ. ಮೊಬೈಲ್‌, ಬೇಸಿಕ್‌, ಸ್ಟಾಂಡರ್ಡ್‌ ಹಾಗೂ ಪ್ರೀಮಿಯಂ ಪೈಕಿ ನಿಮ್ಮ ಬಳಕೆಗೆ ತಕ್ಕಂತಹ ಪ್ಲ್ಯಾನ್‌ ಆಯ್ಕೆ ಮಾಡಬಹುದು.

ಯಾವುದೇ ಪ್ಲ್ಯಾನ್‌ ಆದರೂ ಜಾಹೀರಾತುಗಳ ಅಡಚಣೆ ಇಲ್ಲದೆ ನಿರಂತರ ಕಾರ್ಯಕ್ರಮಗಳ ವೀಕ್ಷಣೆಗೆ ಅವಕಾಶವಿದೆ. ಡೇಟಾ ಇರುವವರೆಗೂ ನೆಟ್‌ಫ್ಲಿಕ್ಸ್‌ ಸಂಗ್ರಹದಲ್ಲಿರುವ ಸಿನಿಮಾ, ಧಾರಾವಾಹಿ, ಡಾಕ್ಯುಮೆಂಟರಿ ಎಲ್ಲದರ ಅನಿಯಮಿತ ವೀಕ್ಷಣೆ ಮಾಡಬಹುದು. ಯಾವುದೇ ಸಮಯದಲ್ಲಿ ಪ್ಲ್ಯಾನ್‌ ಬದಲಿಸಿಕೊಳ್ಳಲು ಸಾಧ್ಯವಿದೆ.

* ಮೊಬೈಲ್‌ ಪ್ಲ್ಯಾನ್‌

ಸ್ಮಾರ್ಟ್‌ಫೋನ್‌ನಲ್ಲಿಯೇ ಹೆಚ್ಚು ಸಮಯ ಕಳೆಯುವ, ಅದರಲ್ಲಿಯೇ ಸಿನಿಮಾ, ಸರಣಿ ಧಾರಾವಾಹಿಗಳನ್ನು ವೀಕ್ಷಿಸುವ ಆಸಕ್ತಿ ಇರುವವರು ಹಾಗೂ ಒಬ್ಬರೇ ವೀಕ್ಷಿಸುವುದಾದರೆ ಈ ಪ್ಲ್ಯಾನ್‌ ಸೂಕ್ತ. ತಿಂಗಳಿಗೆ ₹199 ಪಾವತಿಸಿ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ ಯಾವುದೇ ಒಂದರಲ್ಲಿ ವೀಕ್ಷಿಸಬಹುದು. ಸೋಶಿಯಲ್‌ಮೀಡಿಯಾ ಶೇರಿಂಗ್‌ ಹಾಗೂ ಸ್ಮಾರ್ಟ್‌ ಡೌನ್‌ಲೋಡ್‌ ಇರುತ್ತದೆ.

* ಬೇಸಿಕ್‌ ಪ್ಲ್ಯಾನ್‌

ಅವಶ್ಯಕತೆಗೆ ತಕ್ಕಂತೆ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಅಥವಾ ಟೆಲಿವಿಷನ್‌ ಮೂರೂ ಸಾಧನಗಳಲ್ಲಿ ನೆಟ್‌ಫ್ಲಿಕ್ಸ್‌ ವೀಕ್ಷಿಸುವವರಾದರೆ ತಿಂಗಳಿಗೆ ₹499 ಪಾವತಿಸಿ ಈ ಪ್ಲ್ಯಾನ್‌ ಆಯ್ಕೆ ಮಾಡಬಹುದು. ಒಮ್ಮೆಗೆ ಒಂದು ಸಾಧನದಲ್ಲಿ ಮಾತ್ರ ವೀಕ್ಷಣೆ ಸಾಧ್ಯ.

* ಸ್ಟ್ಯಾಂಡರ್ಡ್‌ ಪ್ಲ್ಯಾನ್‌

ಇಂಟರ್‌ನೆಟ್‌ ಸಂಪರ್ಕಿತ ಎರಡು ಸಾಧನಗಳಲ್ಲಿ ಒಟ್ಟಿಗೆ ಕಾರ್ಯಕ್ರಮಗಳ ವೀಕ್ಷಣೆಯನ್ನು ಈ ಪ್ಲ್ಯಾನ್‌ ಸಾಧ್ಯವಾಗಿಸುತ್ತದೆ. ಎಚ್‌ಡಿ ವಿಡಿಯೊ ಸೇವೆ ಸಿಗುವುದರಿಂದ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಣೆ ಒಳ್ಳೆಯ ಅನುಭವ ನೀಡುತ್ತದೆ. ಪ್ರತಿ ತಿಂಗಳು ₹649 ಪಾವತಿಸಬೇಕು.

* ಪ್ರೀಮಿಯಂ ಪ್ಲ್ಯಾನ್‌

ಇಡೀ ಕುಟುಂಬದ ಬಳಕೆದಾರರಿಗೆ ಈ ಪ್ಲ್ಯಾನ್‌ ಸೂಕ್ತ. ತಿಂಗಳಿಗೆ ₹799 ಪಾವತಿಸಿ, ನಾಲ್ಕು ಸಾಧನಗಳಲ್ಲಿ ಒಟ್ಟಿಗೇ ನೆಟ್‌ಫ್ಲಿಕ್ಸ್‌ ವೀಕ್ಷಿಸಬಹುದು. ಇದರಲ್ಲಿ 4ಕೆ ವಿಡಿಯೊ ಮತ್ತು ಡಾಲ್ಬಿ ಆಟಮ್ಸ್‌ ಸೌಂಡ್‌ ಗುಣಮಟ್ಟದ ಕಾರ್ಯಕ್ರಮ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT