ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ, ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಎಚ್‌ಪಿ ಲೇಸರ್‌ ಜೆಟ್‌ ಟ್ಯಾಂಕ್‌ ಪ್ರಿಂಟರ್‌

Last Updated 25 ಮಾರ್ಚ್ 2022, 13:24 IST
ಅಕ್ಷರ ಗಾತ್ರ

ಬೆಂಗಳೂರು: ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ (ಎಸ್‌ಎಂಬಿ) ಅನುಕೂಲ ಆಗುವಂತೆ ಕಡಿಮೆ ಬೆಲೆಯ, ಉತ್ತಮ ಗುಣಮಟ್ಟದ ಲೇಸರ್‌ ಜೆಟ್‌ ಪ್ರಿಂಟರ್‌ 1005 ಮತ್ತು 1020 ಅನ್ನು ಎಚ್‌ಪಿ ಕಂಪನಿಯು ಗುರುವಾರ ಬಿಡುಗಡೆ ಮಾಡಿದೆ.

ಎಚ್‌ಪಿ ಲೇಸರ್‌ಜೆಟ್‌ ಟ್ಯಾಂಕ್‌ 1020 ಬೆಲೆ ₹ 15,963 ಮತ್ತು 1005 ಬೆಲೆ ₹ 23,695 ಇದೆ.

ಲೇಸರ್‌ ಜೆಟ್‌ ಟ್ಯಾಂಕ್‌ ಪ್ರಿಂಟರ್‌ಗಳ ನಿರ್ವಹಣೆ ಮತ್ತು ಬಳಕೆಯು ಅತ್ಯಂತ ಸುಲಭವಾಗಿದೆ. 5 ಸಾವಿರ ಪುಟಗಳನ್ನು ಪ್ರಿಂಟ್‌ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಇದರ ಟೋನರ್‌ ಬಾಳಿಕೆಯು ಇತರೆ ಸ್ಟ್ಯಾಂಡರ್ಡ್‌ ಕಾಟ್ರಿಡ್ಜ್‌ಗಳಿಗೆ ಹೋಲಿಸಿದರೆ ಐದು ಪಟ್ಟು ಹೆಚ್ಚಿಗೆ ಇದೆ. 40 ಶೀಟ್‌ ಆಟೊ ಡಾಕ್ಯುಮೆಂಟ್‌ ಫೀಡ್‌ ಸೌಲಭ್ಯ ಹೊಂದಿದೆ ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಎಚ್‌ಪಿ ಸ್ಮಾರ್ಟ್‌ ಆ್ಯಪ್‌ ಮೂಲಕ ಸುಧಾರಿತ ಸ್ಕ್ಯಾನ್‌ ವೈಶಿಷ್ಟ್ಯ, 15 ಸೆಕೆಂಡ್‌ಗಳಲ್ಲಿ ಟೋನರ್ ರಿಫಿಲ್‌, ಎಚ್‌ಪಿ ಟೋನರ್‌ ಕಿಟ್‌ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ ಎಂದು ಕಂಪನಿಯ ಪ್ರಿಂಟಿಂಗ್‌ ಸಿಸ್ಟಮ್ಸ್‌ನ ಹಿರಿಯ ನಿರ್ದೇಶಕ ಸುನೀಶ್‌ ರಾಘವನ್‌ ಮಾಹಿತಿ ನೀಡಿದರು.

ಎಚ್‌ಪಿ ಲೇಸರ್‌ಜೆಟ್‌ ಟ್ಯಾಂಕ್‌ 2606 ಪ್ರಿಂಟರ್‌ ಬೆಲೆ ₹ 29,558 ಇದೆ. ಇದು ಡುಪ್ಲೆಕ್ಸ್‌ ಹೈ–ಸ್ಪೀಡ್‌ ಪ್ರಿಂಟಿಂಗ್‌, 40 ಪುಟ ಎಡಿಎಫ್‌ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT