ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್ ಖಾತೆ ಡಿಲೀಟ್ ಮಾಡುವುದಾದರೆ...

Last Updated 7 ಆಗಸ್ಟ್ 2019, 7:51 IST
ಅಕ್ಷರ ಗಾತ್ರ

ಫೇಸ್‌ಬುಕ್ ಖಾತೆ ಡಿಲೀಟ್ ಮಾಡುವುದಾದರೆ...

ಜನಪ್ರಿಯ ಜಾಲತಾಣವಾದ ಫೇಸ್ ಬುಕ್ ನಲ್ಲಿ ಸಕ್ರಿಯವಾಗಿದ್ದು ಆಮೇಲೆ ಆ ಖಾತೆಯನ್ನು ಬದಲಿಸಿ ಬೇರೆ ಖಾತೆ ತೆರೆಯುವವರು ಇದ್ದಾರೆ. ಹೀಗೆ ಮಾಡುವಾಗ ಕೆಲವೊಮ್ಮೆ ಹಳೇ ಖಾತೆಗಳನ್ನು ಡಿಲೀಟ್ ಮಾಡುವುದಿಲ್ಲ. ಒಂದು ವೇಳೆ ನಿಮ್ಮ ಫೇಸ್ ಬುಕ್ ಖಾತೆ ಡಿಲೀಟ್ ಮಾಡಬೇಕೆಂದು ಬಯಸಿದರೆ ಹೀಗೆ ಮಾಡಿ.

ನಿಮ್ಮ ಫೋನ್ ನಲ್ಲಿರುವ ಫೇಸ್ ಬುಕ್ app uninstall ಮಾಡಿ. ಫೇಸ್ ಬುಕ್ App ಡಿಲೀಟ್ ಮಾಡಿದರೂ browser ನಲ್ಲಿ ನಿಮ್ಮ ಖಾತೆಗೆ ಲಾಗಿನ್ ಆಗಬಹುದು.

ಫೇಸ್ ಬುಕ್ ಜತೆ ಲಿಂಕ್ ಆಗಿರುವ ಎಲ್ಲ ಖಾತೆಗಳಿಂದ ಹೊರ ಬನ್ನಿ ಕೆಲವೊಂದು App ಗಳು ಫೇಸ್ ಬುಕ್ ಖಾತೆಯೊಂದಿಗೆ ಲಿಂಕ್ ಆಗಿರುತ್ತವೆ. ಆ app ಮತ್ತು website ಗಳಿಂದ unlink ಆಗಿ.

ಅದಕ್ಕೆ ಹೀಗೆ ಮಾಡಿ
a) ಫೇಸ್ ಬುಕ್ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ
b) Apps and websites ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಫೇಸ್ ಬುಕ್ ಖಾತೆಯೊಂದಿಗೆ ಲಿಂಕ್ ಆಗಿರುವ App App ಮತ್ತು ವೆಬ್ ಸೈಟ್ ಅನ್ ಲಿಂಕ್ ಮಾಡಿ. Browser ನಲ್ಲಿ ಫೇಸ್ ಬುಕ್ ಖಾತೆಗೆ ಲಾಗಿನ್ ಆಗಿ. ಸೆಟ್ಟಿಂಗ್ಸ್ ಗೆ ಹೋಗಿ Your Facebook information ಕ್ಲಿಕ್ ಮಾಡಿ. ಅಲ್ಲಿ Download your information ಪಕ್ಕ View ಕ್ಲಿಕ್ ಮಾಡಿ.

ಅಲ್ಲಿ ನಿಮ್ಮ ಖಾತೆಯ ಮಾಹಿತಿಗಳ ಪಟ್ಟಿ ಇರುತ್ತದೆ. ಅಲ್ಲಿ ಯಾವುದನ್ನೂ Uncheck ಮಾಡಬೇಡಿ. ನಿಮ್ಮ ಖಾತೆಯಲ್ಲಿರುವ ಪೋಟೊ ಮತ್ತು ವಿಡಿಯೊಗಳನ್ನು ಪಡೆಯಲು Media ಗುಣಮಟ್ಟವನ್ನು Medium ನಿಂದ High ಮಾಡಿ. create files ಕ್ಲಿಕ್ ಮಾಡಿ ಸ್ವಲ್ಪ ಹೊತ್ತು ಕಾಯುತ್ತಿರಿ. ನಿಮಗೆ ಇಮೇಲ್ ಮೂಲಕ ನಿಮ್ಮ ಫೇಸ್ ಬುಕ್ ನಲ್ಲಿದ್ದ ಎಲ್ಲಾ ಮಾಹಿತಿ ರವಾನೆಯಾಗುತ್ತದೆ.

ಇದೆಲ್ಲ ಮಾಡಿದ ನಂತರ ನಿಮ್ಮ ಖಾತೆ ಡಿಲೀಟ್ ಮಾಡಿ. ಇಷ್ಟು ಮಾಡಿದ ಮೇಲೂ ನೀವು ಮನಸ್ಸು ಬದಲಿಸಿ ಮತ್ತೆ ಅದೇ ಖಾತೆಗೆ ಬರುವುದಾದರೆ 30 ದಿನ ಕಾಲಾವಧಿ ಇರುತ್ತದೆ. ಫೇಸ್ ಬುಕ್ ತನ್ನ server ನಿಂದ ನಿಮ್ಮ ಖಾತೆಯ ಎಲ್ಲ ಮಾಹಿತಿಗಳನ್ನು ಡಿಲೀಟ್ ಮಾಡಲು 90 ದಿನಗಳನ್ನು ತೆಗೆದುಕೊಳ್ಳುತ್ತದೆ, ಹಾಗಾಗಿ ನೀವು ಡಿಲೀಟ್ ಮಾಡಿದ ಖಾತೆಗೆ 30 ದಿನಗಳೊಳಗೆ ಲಾಗಿನ್ ಆಗಿ ಖಾತೆ ಡಿಲೀಟ್ ಮಾಡಲಿರುವ ರಿಕ್ವೆಸ್ಟ್ cancel ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT