ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈಲ್‌ ಹಂಚಿಕೊಳ್ಳಲು ಬಳಸುವ WeTransfer ವೆಬ್‌ಸೈಟ್‌ ನಿರ್ಬಂಧಿಸಿದ ಸರ್ಕಾರ 

Last Updated 30 ಮೇ 2020, 16:59 IST
ಅಕ್ಷರ ಗಾತ್ರ

ನವದೆಹಲಿ: ವಿಡಿಯೊ, ಆಡಿಯೊ, ಫೋಟೊಗಳು ಸೇರಿದಂತೆ ದೊಡ್ಡ ಪ್ರಮಾಣದ ಡಿಜಿಟಲ್‌ ಫೈಲ್‌ಗಳನ್ನು ವರ್ಗಾಯಿಸಿಕೊಳ್ಳಲು ಅಥವಾ ಹಂಚಿಕೊಳ್ಳಲು ಸಹಕಾರಿಯಾಗಿರುವ ವಿಟ್ರಾನ್ಸ್‌ಫರ್‌ (WeTransfer) ವೆಬ್‌ಸೈಟ್‌ ನಿರ್ಬಂಧಿಸುವಂತೆ ಸರ್ಕಾರ ಇಂಟರ್‌ನೆಟ್‌ ಸೇವಾಧಾರರಿಗೆ ಆದೇಶಿಸಿದೆ.

ಸುರಕ್ಷತಾ ಕಾರಣಗಳಿಗಾಗಿ ದೆಹಲಿ ಪೊಲೀಸರ ಮನವಿ ಮೇರೆಗೆ ಸರ್ಕಾರ ಈ ಕ್ರಮಕೈಗೊಂಡಿದೆ.

ದೂರ ಸಂಪರ್ಕ ಇಲಾಖೆ ಮೇ 18ರಂದುಆದೇಶ ನೀಡಿದ್ದು, ಎಲ್ಲ ಇಂಟರ್‌ನೆಟ್‌ ಸರ್ವಿಸ್‌ ಪ್ರೊವೈಡರ್‌ಗಳಿಗೆ (ಐಎಸ್‌ಪಿ) ಡಚ್‌ ಮೂಲದ ವಿಟ್ರಾನ್ಸ್‌ಫರ್‌ ವೆಬ್‌ಸೈಟ್‌ನಲ್ಲಿ ಎರಡು ಡೌನ್‌ಲೋಡ್‌ ಲಿಂಕ್‌ಗಳು ಹಾಗೂ ಇಡೀ ವೆಬ್‌ಸೈಟ್‌ (www.wetransfer.com) ನಿರ್ಬಂಧಿಸುವಂತೆ ತಿಳಿಸಲಾಗಿದೆ.

'ಎರಡು ಡೌನ್‌ಲೋಡ್‌ ಲಿಂಕ್‌ ಮತ್ತು ಇಡೀ ವಿಟ್ರಾನ್ಸ್‌ಫರ್‌ ವೆಬ್‌ಸೈಟ್‌ನ್ನೂ ಕೂಡಲೇ ನಿರ್ಬಂಧಿಸುವಂತೆದೆಹಲಿ ಪೊಲೀಸರು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಮನವಿ ಮಾಡಿದ್ದರು. ದೆಹಲಿ ಪೊಲೀಸರು ಸೂಚಿಸಿರುವ ಲಿಂಕ್‌ಗಳು ಹಾಗೂ ವೆಬ್‌ಸೈಟ್‌ ನಿರ್ಬಂಧಿಸುವ ಸಂಬಂಧ ಸರ್ಕಾರ ಆದೇಶ ನೀಡಿದೆ' ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವೆಬ್‌ಸೈಟ್‌ ನಿರ್ಬಂಧಿಸುವಂತೆ ಇಂಟರ್ನೆಟ್‌ ಸೇವಾಧಾರರಿಗೆ ಸೂಚಿಸಲು ದೂರಸಂಪರ್ಕ ಇಲಾಖೆಗೆ ತಿಳಿಸಲಾಗಿತ್ತು.

'ಆದೇಶ ಪಾಲನೆಯಾಗಿರುವ ಬಗ್ಗೆ ಶೀಘ್ರವೇ ಖಚಿತ ಪಡಿಸಬೇಕು, ವಿಫಲವಾದರೆ ಪರವಾನಗಿ ನಿಯಮಗಳನ್ವಯ ಕ್ರಮಕೈಗೊಳ್ಳಲಾಗುತ್ತದೆ' ಎಂದು ದೂರಸಂಪರ್ಕ ಇಲಾಖೆ ಐಎಸ್‌ಪಿಗಳಿಗೆ ಇ–ಮೇಲ್‌ ರವಾನಿಸಿದೆ.

ದೆಹಲಿ ಪೊಲೀಸರು ವಿಟ್ರಾನ್ಸ್‌ಫರ್‌ ನಿರ್ಬಂಧಿಸುವಂತೆ ಮನವಿ ಮಾಡಲು ಹಾಗೂ ಸರ್ಕಾರದ ತಕ್ಷಣದ ನಿರ್ಧಾರಕ್ಕೆ ಸ್ಪಷ್ಟ ಕಾರಣಗಳು ಬಹಿರಂಗವಾಗಿಲ್ಲ. ಸುರಕ್ಷಿತಾ ಕಾರಣಗಳ ಹಿನ್ನೆಲೆ ಎಂಬುದಷ್ಟೇ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT